Home Health ಜಿಲ್ಲೆಯಲ್ಲಿ ಹೆಚ್ಚಿದ ಕೊರೋನಾ; ಅಗತ್ಯ ಕ್ರಮ ಕೈಗೊಳ್ಳಲು ಮುಂದಾದ ಜಿಲ್ಲಾಧಿಕಾರಿಗಳು

ಜಿಲ್ಲೆಯಲ್ಲಿ ಹೆಚ್ಚಿದ ಕೊರೋನಾ; ಅಗತ್ಯ ಕ್ರಮ ಕೈಗೊಳ್ಳಲು ಮುಂದಾದ ಜಿಲ್ಲಾಧಿಕಾರಿಗಳು

ಜಿಲ್ಲೆಯಲ್ಲಿ ಹೆಚ್ಚಿದ ಕೊರೋನಾ; ಅಗತ್ಯ ಕ್ರಮ ಕೈಗೊಳ್ಳಲು ಮುಂದಾದ ಜಿಲ್ಲಾಧಿಕಾರಿಗಳು

343
0
SHARE

ಚಾಮರಾಜನಗರ.ಮೇ.4: ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ಭಾನುವಾರ ಸಂಜೆಯಿಂದದ ಸೋಮವಾರ ಸಂಜೆಯ ತನಕ 24 ಮಂದಿ ಸೋಂಕಿತರು ಮೃತಪಟ್ಟರೆ, ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಇಬ್ಬರು, ಹಾಗೂ ಹನೂರು ತಾಲ್ಲೂಕಿನ ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಒಬ್ಬರು ಸೇರಿ 27 ಮಂದಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಮಂಗಳವಾರ ಹೇಳಿದರು.ಚಾಮರಾಜನಗರ ಜಿಲ್ಲೆಯಲ್ಲಿ ಸೋಮವಾರ ಸಾವಿನ ಸಂಖ್ಯೆ 27 : ಜಿಲ್ಲಾಧಿಕಾರಿ

ಚಾಮರಾಜನಗರ ಕೋವಿಡ್ ಆಸ್ಪತ್ರೆಯ ಕಛೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ, ಆಕ್ಸಿಜನ್ ಕೊರತೆ ಹಾಗೂ ಇನ್ನಿತರ ಕಾರಣಗಳಿಂದ ಕೋವಿಡ್ ಆಸ್ಪತ್ರೆಯಲ್ಲಿ 24 ಮಂದಿ ಸಾವನ್ನಪ್ಪಿದ್ದು, ಕೊಳ್ಳೇಗಾಲದಲ್ಲಿ ಇಬ್ಬರು ಮತ್ತು ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಒಬ್ಬರು ಸೇರಿ 27 ಮಂದಿ ಮೃತರಾಗಿದ್ದಾರೆ. ಜಿಲ್ಲಾ ಹೆಲ್ತ್ ಬುಲಿಟಿನ್ ನಲ್ಲಿ 22 ಎಂದು ನಮೂದಿಸಿರುವ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಉಳಿದ ಐವರನ್ನು ಇಂದಿನ ಬುಲಿಟಿನ್ ನಲ್ಲಿ ಸೇರಿಸಲಾಗುವುದು ಎನ್ನುವ ಮೂಲಕ ಸಾವಿನ ಸಂಖ್ಯೆಯನ್ನು ಸರಿದೂಗಿಸುವ ಯತ್ನ ಮಾಡಿದರು.

ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟವರು ಕೋವಿಡ್ ಸೋಂಕಿತರು ಎಂದು ಕೋವಿಡ್ ಡೆತ್ ಆಡಿಟ್ ವರದಿ ತಿಳಿಸಲಾಗಿದೆ ಎಂದು ಕೇಳಿದ ಪ್ರಶ್ನೆಗೆ ಆಡಿಟ್ ವರದಿ ಇನ್ನೂ ನನ್ನ ಕೈ ಸೇರಿಲ್ಲ, ಇಂದು ಸಂಜೆಯ ವೇಳೆಗೆ ಆಡಿಟ್ ಡತ್ ವರದಿ ಬಂದ ಬಳಿಕ ಪ್ರತಿಕ್ರಿಯೆ ನೀಡುವುದಾಗಿ ಹೇಳಿದರು. ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ 24 ಮಂದಿ ಸಾವನ್ನಪ್ಪಿದ ದುರಂತ ಪ್ರಕರಣಕ್ಕೆ ರಾಜ್ಯ ಸರ್ಕಾರ ತನಿಖಾಧಿಕಾರಿಯಾಗಿ ನೇಮಿಸಿರುವ ಕೆ.ಎಸ್.ಆರ್.ಟಿ.ಸಿ ಎಂ.ಡಿ ಶಿವಯೋಗ್ ಕಳಸದ್ ಮಂಗಳವಾರ 10 ಗಂಟೆಗೆ ಆಗಮಿಸಿದರು.

ತನಿಖಾಧಿಕಾರಿ ಶಿವಯೋಗ್ ಕಳಸದ್ ರವರನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ , ಮೆಡಿಕಲ್ ಕಾಲೇಜಿನ ಡೀನ್ ಡಾ. ಸಂಜೀವ್, ಜಿಲ್ಲಾ ವೈದ್ಯಾಧಿಕಾರಿ ಡಾ. ಎಂ.ಸಿ.ರವಿ ಸ್ವಾಗತಿಸಿದರು. ಈ ವೇಳೆಗೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸ್ಥಳೀಯ ಶಾಸಕ ಸಿ.ಪುಟ್ಟರಂಗಶೆಟ್ಟಿ ಆಗಮಿಸಿ ಸಭೆ ನಡೆಸಿದರು. ಭಾನುವಾರ ರಾತ್ರಿ ಆಕ್ಸಿಜನ್ ಇಲ್ಲದೆ ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ 34 ಮಂದಿ ಅಮಾಯಕರು ಸಾವನ್ನಪ್ಪಿದ ಪ್ರಕರಣ ಖಂಡಿಸಿ ಕೋವಿಡ್ ಆಸ್ಪತ್ರೆಯ ಕಛೇರಿಯ ಬಳಿ ಜಿಲ್ಲಾಧಿಕಾರಿಗಳ ವಾಹನದ ಮುಂದೆ ಕನ್ನಡ ಪರ ಚಳವಳಿಗಾರ ಶಾ.ಮುರಳಿ ಪೇಪರ್ ಹಾಸಿ ಮಲಗಿಕೊಂಡು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.

ಕೋವಿಡ್ ಆಸ್ಪತ್ರೆಗೆ ಆಗಮಿಸಿದ ಹಿರಿಯ ಕನ್ನಡ ಚಳವಳಿಗಾರ ಶಾ.ಮುರಳಿ ಪೇಪರ್ ಹಾಸಿ ಅದರ ಮೇಲೆ ತಾನು ಮಲಗಿ ಪ್ರರಕಣದ ವಿರುದ್ದ ಘೋಷಣೆ ಕೂಗುತ್ತಾ, ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿರವರನ್ನು ಬಂಧಿಸುವAತೆ ಹಾಗೂ ಆರೋಗ್ಯ ಸಚಿವ ಡಾ. ಸುಧಾಕರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ರಾಜಿನಾಮೆ ಆಗ್ರಹಿಸಿದರು.

ತನಿಖಾಧಿಕಾರಿಗಳಿಂದ ಕೋವಿಡ್ ಆಸ್ಪತ್ರೆ ರೌಂಡ್ಸ್;  ಕೋವಿಡ್ ಆಸ್ಪತ್ರೆಯಲ್ಲಿ ನಡೆದಿರುವ 24 ಮಂದಿಯ ಮರಣ ಮೃದಂಗದ ಬಗ್ಗೆ ರಾಜ್ಯ ಸರ್ಕಾರ ತನಿಖಾಧಿಕಾರಿಯಾಗಿ ನೇಮಿಸಿದರು ಕೆ.ಎಸ್.ಆರ್.ಟಿ.ಸಿ ಎಂ.ಡಿ. ಶಿವಯೋಗ್ ಕಳಸದ್ ರವರು ಮಂಗಳವಾರ ಆಗಮಿಸಿ ಕೋವಿಡ್ ಆಸ್ಪತ್ರೆಯಲ್ಲಿ ಸಿಂಪಲ್ ಆಗಿ ರೌಂಡ್ಸ್ ಹಾಕಿದರು.

ರಾಜ್ಯ ಸರ್ಕಾರದ ನಿದೇರ್ಶನದಂತೆ ಚಾಮರಾಜನಗರಕ್ಕೆ ಆಗಮಿಸಿದ ತನಿಖಾಧಿಕಾರಿ ಶಿವಯೋಗ್ ಕಳಸದ್ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಮೆಡಿಕಲ್ ಕಾಲೇಜಿನ ಡೀನ್ ಡಾ. ಸಂಜೀವ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಸಿ.ರವಿ ರವರೊಂದಿಗೆ ಕೋವಿಡ್ ಆಸ್ಪತ್ರೆಯನ್ನು ಸುತ್ತು ಹಾಕಿ ವೀಕ್ಷಣೆ ಮಾಡಿದರು.

ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

 

LEAVE A REPLY

Please enter your comment!
Please enter your name here