Home District ಕೋವಿಡ್ ಆಸ್ಪತ್ರೆ ದುರಂತ; ಪ್ರತಿಭಟನೆ ಕೈ ಬಿಡುವಂತೆ ಕೈ ಮುಗಿದು ಕೇಳಿ ಗೋಗರೆದ ಜಿಲ್ಲಾಧಿಕಾರಿ!

ಕೋವಿಡ್ ಆಸ್ಪತ್ರೆ ದುರಂತ; ಪ್ರತಿಭಟನೆ ಕೈ ಬಿಡುವಂತೆ ಕೈ ಮುಗಿದು ಕೇಳಿ ಗೋಗರೆದ ಜಿಲ್ಲಾಧಿಕಾರಿ!

ಕೋವಿಡ್ ಆಸ್ಪತ್ರೆ ದುರಂತ ಹಿನ್ನಲೆ; ಪ್ರತಿಭಟನೆ ಕೈ ಬಿಡುವಂತೆ ಕೈ ಮುಗಿದು ಕೇಳಿ ಗೋಗರೆದ ಜಿಲ್ಲಾಧಿಕಾರಿ!

468
0
SHARE

ಚಾಮರಾಜನಗರ;ಮೇ.4: ಕೋವಿಡ್ ಆಸ್ಪತ್ರೆಯಲ್ಲಿನ ಹೊರಗಿನ ಪರಿಸ್ಥಿತಿ, ನಿಯಂತ್ರಣ ಮಾಡುವ ವ್ಯವಸ್ಥೆ ಬಗ್ಗೆ ವೀಕ್ಷಣೆ ಮಾಡಿದರು.ಪ್ರತಿಭಟನೆ ಕೈ ಬಿಡುವಂತೆ ಕೈ ಮುಗಿದು ಕೇಳಿ ಗೋಗರಿದ ಜಿಲ್ಲಾಧಿಕಾರಿ

ಕೋವಿಡ್ ಆಸ್ಪತ್ರೆಯಲ್ಲಿ ನಡೆದಿರುವ ದುರಂತದ ಬಗ್ಗೆ ತನಿಖೆ ನಡೆಸಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೇಲೆ ಕೊಲೆ ಮೊಕದ್ದಮೆ ಹೂಡುವಂತೆ ಕೋವಿಡ್ ಆಸ್ಪತ್ರೆಯ ಮುಂದೆ ಏಕಾಂಗಿಯಾಗಿ ಪೇಪರ್ ಹಾಸಿಕೊಂಡು ಪ್ರತಿಭಟನೆ ನಡೆಸುತ್ತಿರುವ ಹಿರಿಯ ಕನ್ನಡ ಚಳವಳಿಗಾರ ಶಾ.ಮುರಳಿ ರವರ ಮನವೊಲಿಸಲು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಕೈ ಮುಗಿದ ಘಟನೆ ನಡೆಯಿತು.

ಪ್ರತಿಭಟನಾ ಸ್ಥಳಕ್ಕೆ ತನಿಖಾಧಿಕಾರಿ ಶಿವಯೋಗ್ ಕಳಸದ್ ರವರೊಂದಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಆಗಮಿಸಿದಾಗ ಪ್ರತಿಭಟನೆ ನಡೆಸುತ್ತಿದ್ದ ಶಾ.ಮುರಳಿ ಮೈಸೂರು ಜಿಲ್ಲಾಧಿಕಾರಿ , ಆರೋಗ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ದ ಘೋಷಣೆ ಕೂಗಿದಾಗ ವಿಚಲಿತರಾದ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ , ಪ್ರತಿಭಟನೆ ಕೈ ಬಿಡುವಂತೆ ಕೈ ಮುಗಿದರೂ ಸಹ ಪ್ರಯೋಜನವಾಗಲಿಲ್ಲ.

ಕೋರೊನಾ ಸೋಂಕಿತನ ನಿರ್ಭಯ ಸಂಚಾರ- ಜಿಲ್ಲಾಧಿಕಾರಿಗಳ ಬಳಿಯೇ ಸುಳಿದಾಟ: ಜಿಲ್ಲಾ ಕೇಂದ್ರದಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೋವಿಡ್ ಸೋಂಕಿತ ವ್ಯಕ್ತಿಯೊಬ್ಬ ನಿರ್ಭಯವಾಗಿ ಕೋವಿಡ್ ಆಸ್ಪತ್ರೆಯ ಹೊರಾಂಗಣದಲ್ಲಿ ತಿರುಗಾಟ ನಡೆಸುತ್ತಿದ್ದ ಘಟನೆ ನಡೆದಿದೆ.

ಮಂಗಳವಾರ ಕೋವಿಡ್ ಆಸ್ಪತ್ರೆಗೆ ಕಾರಿನಲ್ಲಿ ಬಂದ ಡಿ.ಸಿ. ರವಿ ರವರಿಗೆ ಎದರುರಾಗಿದ್ದೇ ಕೋವಿಡ್ ಸೋಂಕಿತ ವ್ಯಕ್ತಿ. ಈತ ಜಿಲ್ಲಾಧಿಕಾರಿಗಳೊಂದಿಗೆ ಏನೋ ಮಾತನಾಡಲು ತೆರಳುತ್ತಿದ್ದಂತೆ ಅಕ್ಕ ಪಕ್ಕದಲ್ಲಿದ್ದವರು ಈತ ಕೋವಿಡ್ ಸೋಂಕಿತ ವ್ಯಕ್ತಿ ಎಂದು ಕೂಗಿ ಕೊಂಡಾಗ ಕ್ಷಣ ಕಾಲ ಬೆಚ್ಚಿದ ಬಿದ್ದ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅಲ್ಲಿಂದ ಕೋವಿಡ್ ಆಸ್ಪತ್ರೆಯ ಕಛೇರಿಯತ್ತ ನಡೆದರು. ಮತ್ತೇ ಆಕ್ಸಿಜನ್ ಟ್ಯಾಂಕರ್ ಬಂತು ಚಾಮರಾಜನಗರ ಜಿಲ್ಲಾಸ್ಪತ್ರೆಗೆ. ಬಳ್ಳಾರಿಯ ಜಿಂದಾಲ್ ನಿಂದ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಿರುವ ಆಕ್ಸಿಜನ್ ಸ್ಥಾವರಕ್ಕೆ ಲೋಡ್ ಮಾಡಲಾಯಿತು.

ಬಳ್ಳಾರಿಯಿಂದ ಬಂದ ಆಕ್ಸಿಜನ್ ನ್ನು ಬಹಳ ಎಚ್ಚರಿಕೆಯಿಂದ ಆಸ್ಪತ್ರೆಯ ಆವರಣದಲ್ಲಿ ಸ್ಥಾಪಿಸಲಾಗಿರುವ ಸ್ಥಾವರದಲ್ಲಿ ಭರ್ತಿ ಮಾಡುವ ಕಾರ್ಯ ನಡೆಯಿತು.ಕೋವಿಡ್ ಆಸ್ಪತ್ರೆಗೆ ಬಂದಿರುವ ತನಿಖಾಧಿಕಾರಿ ಶಿವಯೋಗ್ ಕಳಸದ್ ರವರು ಆಕ್ಸಿಜನ್ ಘಟಕವನ್ನು ವೀಕ್ಷಣೆ ಮಾಡಿದರು.ಕೋವಿಡ್ ಆಸ್ಪತ್ರೆಯಲ್ಲಿ ನಡೆದಿರುವ ಕೋವಿಡ್ ಸೋಂಕಿತರ ಧಾರಣ ಸಾವಿನ ಬಗ್ಗೆ ತನಿಖೆ ನಡೆಸಲು ಬಂದಿರುವ ತನಿಖಾಧಿಕಾರಿ ಶಿವಯೋಗ್ ಕಳಸದ್ ರವರು ಮಾಧ್ಯಮದವರಿಗೆ ಮಾಹಿತಿ ನೀಡಲು ನಿರಾಕರಿಸಿದರು.

ತನಿಖಾಧಿಕಾರಿ ಶಿವಯೋಗ್ ಕಳಸದ್ ರವರು ಕೋವಿಡ್ ಆಸ್ಪತ್ರೆಯ ಹೊರಾಂಗಣ ಮತ್ತು ಕಛೇರಿಯಲ್ಲಿ ವೈದ್ಯರು ಹಾಗೂ ಜಿಲ್ಲಾಧಿಕಾರಿ ಮತ್ತು ಸ್ಥಳೀಯ ಶಾಸಕರೊಂದಿಗೆ ಸಭೆ ನಡೆಸಿದ ಬಳಿಕ ಹೊರ ಬಂದ ಅವರು ಕಾರಿನಲ್ಲಿ ತೆರಳಲು ಮುಂದಾದಾಗ ಮಾದ್ಯಮದವರು ತನಿಖೆ ಬಗ್ಗೆ ಪ್ರಶ್ನಿಸಿದಾಗ, ತನಿಖೆ ಪ್ರಾಥಮಿಕ ಹಂತದಲ್ಲಿ ಇದೆ ಎಂದು ಹೇಳುವ ಮೂಲಕ ಮಾಹಿತಿ ಹಂಚಿಕೊಳ್ಳಲು ನಿರಾಕರಿಸಿದರು.

ಭಾನುವಾರ ರಾತ್ರಿ ಕೋವಿಡ್ ಆಸ್ಪತ್ರೆಯಲ್ಲಿ ನಡೆದ ಮಾರಣಹೋಮದಲ್ಲಿ ಸಾವನ್ನಪ್ಪಿದ ಕೋವಿಡ್ ಸೋಂಕಿತರ ಕುಟುಂಬವು ರಾಜ್ಯ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಅಳಲನ್ನು ತೋಡಿಕೊಂಡರು.

ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೊಡ್ಡಹೊಮ್ಮ ಗ್ರಾಮದ ಸುರೇಂದ್ರ ರವರಿಗೆ ಕಳೆದ ಕೆಲವು ದಿನಗಳ ಹಿಂದೆ ಕೋರೊನಾ ಸೋಂಕು ದೃಡವಾಗಿತ್ತು. ಅವರನ್ನು ಬಸವರಾಜೇಂದ್ರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆ ಬಳಿಕ ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿ, ಭಾನುವಾರ ರಾತ್ರಿ ಆಕ್ಸಿಜನ್ ಸಿಗದೆ ಸಾವನ್ನಪ್ಪಿದ್ದಾನೆ ಆತನಿಗೆ ಕಳೆದ ಎರಡು ತಿಂಗಳ ಹಿಂದೆ ಕೆರಹಳ್ಳಿ ಗ್ರಾಮದ ಯುವತಿಯೊಂದಿಗೆ ವಿವಾಹವಾಗಿತ್ತು ಎಂದು ನೊಂದ ಕುಟುಂಬಸ್ಥರು ವಿವರಣೆ ನೀಡಿದರು.

LEAVE A REPLY

Please enter your comment!
Please enter your name here