Home Home ಕೋವಿಡ್ ಸೆಂಟರ್ ನ ಅವ್ಯವಸ್ಥೆಯನ್ನು ಹೇಳಿದರೆ ಅದಕ್ಕೆ ಡಿಸಿ ಕೊಟ್ಟ ಪ್ರತ್ಯುತ್ತರ ಏನು ಗೊತ್ತೇ?

ಕೋವಿಡ್ ಸೆಂಟರ್ ನ ಅವ್ಯವಸ್ಥೆಯನ್ನು ಹೇಳಿದರೆ ಅದಕ್ಕೆ ಡಿಸಿ ಕೊಟ್ಟ ಪ್ರತ್ಯುತ್ತರ ಏನು ಗೊತ್ತೇ?

DC talking about Covid care Center | ಕೋವಿಡ್ ಸೆಂಟರ್ ನ ಅವ್ಯವಸ್ಥೆಯನ್ನು ಹೇಳಿದರೆ ಅದಕ್ಕೆ ಡಿಸಿ ಕೊಟ್ಟ ಪ್ರತ್ಯುತ್ತರ ಏನು ಗೊತ್ತೇ?

412
0
SHARE

-ವರದಿ; ನಾ ಅಶ್ವಥ ಕುಮಾರ್

ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿಯಲ್ಲಿರುವ ಕೋವಿಡ್ ಕೇರ್ ಸೆಂಟರ್ ನಲ್ಲಿ ಇರುವ ಕೋವಿಡ್ ಸೋಂಕಿತರ ಅಳಲು ಕೇಳುವವರು ಯಾರು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ಸಂತೇಮರಹಳ್ಳಿಯಲ್ಲಿರುವ ಕೋವಿಡ್ ಕೇರ್ ಸೆಂಟರ್ ಹೆಸರಿಗೆ ಮಾತ್ರ ಇದೆ. ಇಲ್ಲಿ ಯಾವುದೇ ಮೂಲಭೂತ ಸೌಕರ್ಯಗಳು ಸಮರ್ಪಕವಾಗಿಲ್ಲ. ಸೋಂಕಿತರಿಗೆ ನೀಡುವ ಆಹಾರವು ಕಳಪೆಯಿಂದ ಕೂಡಿದೆ. ಅರೆ ಬೆಂದ ಅನ್ನ, ದೋಸೆಯಂತೂ ತಿನ್ನಲಿಕ್ಕೆ ಆಗದು, ಸಾಂಬರ್ ನಲ್ಲಿ ಮೂಲಂಗಿ ಬೆಂದೇ ಇರಲ್ಲ , ಟೀ ಯಂತೂ ಬಿಸಿನೀರಿಗಿಂತ ಕಡೆಯಾಗಿದೆ ಇಷ್ಟೆಲ್ಲಾ ಅದ್ವಾನಗಳಿದ್ದರೂ ಸಹ, ಡಿಸಿ ಸಾಹೇಬ್ರು ಮಾತ್ರ ತಮ್ಮ ಫೇಸ್ ಬುಕ್ ನಲ್ಲಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಉತ್ತಮ ಗುಣಮಟ್ಟ ಆಹಾರ ನೀಡ್ತಾ ಇದ್ದೇವೆ ಎಂತ ಪೋಸ್ಟ್ ಮಾಡ್ತಾರೆ. ಆದರೆ ಕೋವಿಡ್ ಸೆಂಟರ್ ನಲ್ಲಿರುವ ಜನರಿಗೆ ಗೊತ್ತು ಅಸಲಿ ಕಥೆ.

ಕೋವಿಡ್ ಕೇರ್ ಸೆಂಟರ್ ನಲ್ಲಿ ಸ್ವಚ್ಚತೆಯಿಲ್ಲ, ಶೌಚಾಲಯಗಳಿಗೆ ಬಾಗಿಲೇ ಇಲ್ಲ, ಐದು ಶೌಚಾಲಯಕ್ಕೆ ಒಂದೇ ಬಕೇಟ್, ಈ ಬಗ್ಗೆ ಯಾರಿಗೆ ಹೇಳೋದು ಡಿಸಿ ಸಾಹೇಬ್ರೇ, ಫೇಸ್ ಬುಕ್ ನಲ್ಲಿ ದಕ್ಷ ಅಧಿಕಾರಿಯಂತ ಫೋಸ್ ಕೊಡ್ತೀರಿ, ಅನಿರೀಕ್ಷಿತವಾಗಿ ಬಂದು ನೋಡಿ ಕೋವಿಡ್ ಕೇರ್ ಸೆಂಟರ್ ನ ವ್ಯವಸ್ಥೆಯನ್ನು.

ಸಿಬ್ಬಂದಿಗಳು ತಂದು ಕೊಡುವ ಆಹಾರವೇ ಇಲ್ಲಿನವರಿಗೆ ಅಮೃತವಾಗಿದೆ, ಏನು ಮಾಡೋದು, ಹಸಿದವರಿಗೆ ಹಳಸಿನ ಅನ್ನವೂ ಅಮೃತ ಇದ್ದಂತೆ ಅಲ್ವೆ. ಯಾಕೆ ಹೀಗೆ ಊಟದಲ್ಲಿ ಮೋಸ ಮಾಡ್ತಾ ಇದ್ದೀರಾ ಅಂತ ಕೇಳಿದರೆ ಇದು ಪತ್ಯದ ಆಹಾರ ಅಲ್ವೆ ಅದಕ್ಕೆ ಅಂತ ಉತ್ತರ ಕೊಡುವರು ಕೋವಿಡ್ ಕೇರ್ ಸೆಂಟರ್ ನ ಸಿಬ್ಬಂದಿಗಳು.

ಪತ್ಯ ಆಹಾರವೂ ಸಹ ಪೌಷ್ಟಿಕತೆಯಿಂದ ಇರಬೇಕಲ್ಲವೇ, ಅರೆ ಬೆರೆ ಬೆಂದ ಆಹಾರ ಪತ್ಯಾಹಾರವೇ ಎನ್ನುವ ಪ್ರಶ್ನೆ ಉದ್ಬವಿಸುತ್ತದೆ. ಟೀ ಬಿಸಿನೀರಿಗೆ ಹೆಸರಿಗಷ್ಟೆ ಟೀ ಪುಡಿ ಉದುರಿಸಿ ಕೊಡುತ್ತಾರೆ ಇದು ಸರಿಯೇ ಎಂದು ಕೋವಿಡ್ ಕೇರ್ ಸೆಂಟರ್ ನಲ್ಲಿರುವವರು ಪ್ರಶ್ನೆ ಮಾಡುತ್ತಿದ್ದಾರೆ.

ಕೋವಿಡ್ ಕೇರ್ ಸೆಂಟರ್ ನಲ್ಲಿ ಆರೈಕೆ ಮಾಡಲಾಗುತ್ತಿರುವ ಸೋಂಕಿತರಿಗೆ ನೀಡುವ ಆಹಾರ ಸರಭರಾಜಿನಲ್ಲೂ ಭಾರಿ ಪ್ರಮಾಣದ ಗೋಲ್ ಮಾಲ್ ನಡೆಯುತ್ತಿದೆ, ಇದರಲ್ಲಿ ಜಿಲ್ಲಾಡಳಿತಕ್ಕೂ ಪಾಲಿದೆ ಎಂದು ಗಂಭೀರವಾಗಿ ಹೇಳಳಾಗುತ್ತಿದೆ. ಇದಕ್ಕೆ ಮುಕ್ತಿ ಎಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ಕೋವಿಡ್ ಸೋಂಕಿತರು.

LEAVE A REPLY

Please enter your comment!
Please enter your name here