ಕೋವಿಡ್ ಸಮಯದಲ್ಲಿ ಅನಾವಶ್ಯಕ ಚರ್ಚೆಗಳು ಶೋಭೆ ತರುವುದಿಲ್ಲ; ಡಿಸಿಎಂ ಸವದಿ

ಕೋವಿಡ್ ಸಮಯದಲ್ಲಿ ಅನಾವಶ್ಯಕ ಚರ್ಚೆಗಳು ಶೋಭೆ ತರುವುದಿಲ್ಲ; ಡಿಸಿಎಂ ಸವದಿ

389
0

ಸಿಎಂ ಬದಲಾವಣೆ ತರಾತುರಿಯಲ್ಲಿರುವ ಕೆಲ ಬಿಜೆಪಿ ನಾಯಕರಿಗೆ ಸಾರಿಗೆ ಸಚಿವ ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಅಥಣಿಯಲ್ಲಿ ತಾಲೂಕಿನ ವಿವಿಧ ಕಾಲುವೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಾರ್ವಜನಿಕ ಜೀವನದಲ್ಲಿರುವ ನಮಗೆ ಕೋವೀಡ್ ನ ಈ ಸಂದಿಗ್ಧ ಸ್ಥಿತಿಯಲ್ಲಿ ಅನಾವಶ್ಯಕ ಚರ್ಚೆಗಳು ಶೋಭಾಯಮಾನವಲ್ಲ ಎಂದು ಹೇಳುವ ಮೂಲಕ ಯಡಿಯೂರಪ್ಪ ನಾಯಕತ್ವದ ಬದಲಾವಣೆಯ ಚರ್ಚೆಯ ಊಹಾಪೋಹಗಳಿಗೆ ತೆರೆ ಎಳೆದರು.

ಈಗ ಸಧ್ಯದ ಸ್ಥಿತಿಯಲ್ಲಿ ನಮ್ಮ ರಾಜ್ಯದ ಜನರ ಕಷ್ಟಗಳಿಗೆ ಸ್ಪಂದಿಸುವ ಕಾರ್ಯ ರಾಜ್ಯ ಸರ್ಕಾರ ಮಾಡುತ್ತಿದೆ ಮುಖ್ಯವಾಗಿ ಕೊರೋನಾ ನಿಯಂತ್ರಣಮಾಡುವುದಾಗಿದೆ. ಸುಖಾ ಸುಮ್ಮನೆ ಅನಾವಶ್ಯಕ ಗೊಂದಲಗಳನ್ನು ಸೃಷ್ಟಿಸುತ್ತಿರುವವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕೊರೋನಾ ನಿಯಂತ್ರಣ ಕಾರ್ಯದಲ್ಲಿ ತೊಡಗಲಿ ಎಂದು ಕಿವಿ ಮಾತು ಹೇಳಿದರು.

ಅಥಣಿ ಪರಿಸರದ ಅನೇಕ ಕೆರೆ ಕಟ್ಟೆಗಳಿಗೆ ಹಾಗೂ ಬಾಂದಾರಗಳಿಗೆ ಕಾಲುವೆಗಳ ಮೂಲಕ ನೀರು ಹರಿಸಲಾಗಿದೆ ಇದರಿಂದ ಸಾವಿರಾರು ರೈತರಿಗೆ ಅನುಕೂಲ ಆಗಲಿದೆ ಹಾಗೂ ಮುಂಗಾರು ಬೆಳೆಗಳಿಗೆ ಸಹ ಉಪಯೋಗವಾಗುತ್ತದೆ ಎಂದು ಹೇಳಿದರು.

VIAಕೋವಿಡ್ ಸಮಯದಲ್ಲಿ ಅನಾವಶ್ಯಕ ಚರ್ಚೆಗಳು ಶೋಭೆ ತರುವುದಿಲ್ಲ; ಡಿಸಿಎಂ ಸವದಿ
SOURCEಕೋವಿಡ್ ಸಮಯದಲ್ಲಿ ಅನಾವಶ್ಯಕ ಚರ್ಚೆಗಳು ಶೋಭೆ ತರುವುದಿಲ್ಲ; ಡಿಸಿಎಂ ಸವದಿ
Previous articleಸಾಮಾಜಿಕ ಜಾಲತಾಣದ ದಿಗ್ಗಜರಾದ ‘FACEBOOK & WHATS APP’ BAN??; ಪ್ರಜಾ ಟಿವಿ ವಿಶೇಷ ವರದಿ
Next articleರೇಣುಕಾಚಾರ್ಯ & ಸಚಿವ ಯೋಗೇಶ್ವರ್ ಟಾಕ್ ವಾರ್!; Renukacharya & Minister Yogeshwar Talkwar!

LEAVE A REPLY

Please enter your comment!
Please enter your name here