Home Health ಕೆರೆಯಲ್ಲಿ 90 ವರ್ಷದ ವೃದ್ದೆಯ ಶವ ಪತ್ತೆ; ಮೃತ ವೃದ್ಧೆಗೆ ಕೋವಿಡ್ ಪಾಸಿಟೀವ್!

ಕೆರೆಯಲ್ಲಿ 90 ವರ್ಷದ ವೃದ್ದೆಯ ಶವ ಪತ್ತೆ; ಮೃತ ವೃದ್ಧೆಗೆ ಕೋವಿಡ್ ಪಾಸಿಟೀವ್!

ಕೆರೆಯಲ್ಲಿ 90 ವರ್ಷದ ವೃದ್ದೆಯ ಶವ ಪತ್ತೆ; ಮೃತ ವೃದ್ಧೆಗೆ ಕೋವಿಡ್ ಪಾಸಿಟೀವ್!

257
0
SHARE

ಚಾಮರಾಜನಗರ : ಜಿಲ್ಲೆಯ ಹನೂರು ತಾಲ್ಲೂಕಿನ ಅಜ್ಜೀಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೊಮ್ಮನಗದ್ದೆ ಸಮೀಪದ ವಡ್ಡರ ದೊಡ್ಡಿಯ ಗ್ರಾಮದ ಬಳಿ ಇರುವ ಕೆರೆಯಲ್ಲಿ 90 ವರ್ಷದ ವೃದ್ದೆಯೊಬ್ಬರ ಶವ ದೊರೆತ್ತಿದ್ದು, ಶವದಲ್ಲಿನ ಗಂಟಲ ದ್ರವ ಪರೀಕ್ಷೆ ಒಳಪಟ್ಟಾಗ ಕೋವಿಡ್ ಪಾಸಿಟೀವ್ ಇರುವುದು ಗೊತ್ತಾಗಿ ವೃದ್ದೆಯ ಶವದ ಬಳಿ ಗ್ರಾಮಸ್ಥರು ಸುಳಿಯದೇ ಇದ್ದರು.

ಕೊನೆಗೆ ನಾಲ್ಕು ಮಂದಿ ಸ್ವಯಂ ಸೇವಕರು ಪಿಪಿ ಕಿಟ್ ಧರಿಸಿಕೊಂಡು ಪೊಲೀಸರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಸಹಕಾರದೊಂದಿಗೆ ಕೋವಿಡ್ ಸೋಂಕಿತ ವೃದ್ದೆಯ ಶವವನ್ನು ಮಂಚದ ಸಮೇತವಾಗಿ ಹೊತ್ತು ಕೊಂಡು ಗ್ರಾಮದ ಹೊರವಲಯದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದರು.

ಗ್ರಾಮದಲ್ಲಿ ಕೋವಿಡ್ ಸೋಂಕಿತ ವೃದ್ದೆಯ ಶವ ಸಂಸ್ಕಾರಕ್ಕೆ ಅಜ್ಜೀಪುರ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಸಹಕಾರ ನೀಡಿದೆ ನುಣಚಿಕೊಂಡಿದ್ದು ಜನಾಕ್ರೋಶಕ್ಕೆ ಕಾರಣವಾಗಿದೆ.

ಮೃತ ವೃದ್ದೆಗೆ ಮೂವರು ಗಂಡು ಮಕ್ಕಳು ಮತ್ತು ಇಬ್ಬರು ಪುತ್ರಿಯರಿದ್ದು, ಇವರಲ್ಲಿ ಮೂವರು ಗಂಡುಮಕ್ಕಳು ಹಾಗೂ ಪುತ್ರಿಯೊಬ್ಬರು ಮೃತಪಟ್ಟಿದ್ದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವೃದ್ದೆ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಬ್ ಇನ್ಸ್ ಪೆಕ್ಟರ್ ಮಂಜುನಾಥ್ ಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿದ್ದರು.

LEAVE A REPLY

Please enter your comment!
Please enter your name here