Home Latest ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಮೃತಪಟ್ಟ 2ಹೆಣ್ಣುಹುಲಿ ಮರಿಗಳು; ಅರಣ್ಯ ಇಲಾಖೆ ಕಾರ್ಯಾಚರಣೆ

ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಮೃತಪಟ್ಟ 2ಹೆಣ್ಣುಹುಲಿ ಮರಿಗಳು; ಅರಣ್ಯ ಇಲಾಖೆ ಕಾರ್ಯಾಚರಣೆ

375
0

ಚಾಮರಾಜನಗರ: ಮಾ.28ರಂದು ಯಡಿಯಾಲ ಉಪವಿಭಾಗದ ವನ್ಯಜೀವಿ ವಲಯದಲ್ಲಿ ಮಧ್ಯಾಹ್ನ ಸುಮಾರು 2 ಗಂಟೆ ಸಮಯದಲ್ಲಿ 3 ಹುಲಿ ಮರಿಗಳು ಕಂಡುಬಂದಿದ್ದು, ಅದರಲ್ಲಿ ಒಂದು ಸ್ಥಳದಲ್ಲೇ ಮೃತಪಟ್ಟಿದೆ. ಉಳಿದ ಎರಡು ಮರಿಗಳು ಕೂಡ ಸ್ಥಿತಿಯಲ್ಲಿರುವುದನ್ನು ಅರಣ್ಯ ಇಲಾಖೆ ಪತ್ತೆ ಹಚ್ಚಿದೆ.

ಈ ಸಂಬಂಧ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ನಿರ್ದೇಶಕ ನಟೇಶ್ ಸ್ಥಳಕ್ಕೆ ಧಾವಿಸಿ, ಭಾರತೀಯ ಹುಲಿ ಸಂರಕ್ಷಿತ ಅರಣ್ಯ ಪ್ರಾಧಿಕಾರದ ಮಾರ್ಗಸೂಚಿಯ ಪ್ರಕಾರ ಸಮಿತಿಯೊಂದನ್ನು ರಚಿಸಲಾಯಿತು.

ಸಮಿತಿಯ ನಿರ್ಧಾರದ ಪ್ರಕಾರ ಮೃತಪಟ್ಟ ಒಂದು ಹೆಣ್ಣುಹುಲಿ ಮರಿಯ ಶವಪರೀಕ್ಷೆಯನ್ನು ಸಮಿತಿಯ ಸದಸ್ಯರು ಮುಂದೆ ಶವ ಪರೀಕ್ಷೆ ನಡೆಸಲಾಯಿತು. ನಂತರ ಪಶು ವೈದ್ಯಾಧಿಕಾರಿಗಳ ಪ್ರಕಾರ ಹುಲಿಯು ಹಸಿವಿನಿಂದ ಮೃತಪಟ್ಟಿರಬಹುದೆಂದು ತಿಳಿಸಲಾಯಿತು. ಉಳಿದ ಎರಡು ಮರಿಗಳನ್ನು ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಹೆಚ್ಚಿನ ಚಿಕಿತ್ಸೆ ಮತ್ತು ಆರೈಕೆಗಾಗಿ ಕಳಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಒಂದು ಹೆಣ್ಣುಹುಲಿ ಮರಿಯೂ ಮೃತಪಟ್ಟಿದೆ.

ಉಳಿದ ಇನ್ನೊಂದು ಗಂಡು ಹುಲಿಮರಿ ಆರೋಗ್ಯದ ಬಗ್ಗೆ ಗಮನ ನೀಡಲಾಗಿದೆ. ಹುಲಿಮರಿಗಳು ಸದ್ಯದ ಸ್ಥಳ ಮತ್ತು ಸುತ್ತಮುತ್ತಲಿನ ಅರಣ್ಯ ಪ್ರದೇಶವನ್ನು ಕೂಂಬಿಂಗ್ ಕಾರ್ಯಾಚರಣೆ ಮಾಡಲಾಗಿ ತಾಯಿ ಹೆಜ್ಜೆಗುರುತು ಹುಲಿಮರಿಗಳ ಜೊತೆ ಇರುವುದು ಕಂಡುಬಂದಿರುತ್ತದೆ ಸ್ಥಳದಲ್ಲಿ ತಾಯಿ ಹುಲಿ ಪತ್ತೆಗಾಗಿ ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ ಇದಕ್ಕಾಗಿ ಕ್ಯಾಮರಾಗಳನ್ನು ಅಳವಡಿಸಿ ವಿಶೇಷ ಹುಲಿ ಸಂರಕ್ಷಣಾ ದಳದ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

Previous articleರಾಜ್ಯ ಬಿಜೆಪಿ ನಾಯಕರೆಲ್ಲರೂ ಕೇಂದ್ರ ಸರ್ಕಾರದ ಗುಲಾಮರಾಗಿದ್ದಾರೆ; ಸಿದ್ದರಾಮಯ್ಯ ಆರೋಪ
Next articleರಮೇಶ್ ಜಾರಕಿಹೊಳಿಗೆ ಮುಳುವಾಗುತ್ತಾ ಯುವತಿಯ ಹೇಳಿಕೆ?

LEAVE A REPLY

Please enter your comment!
Please enter your name here