Home District ಸೋಂಕಿಗೆ ಹೆದರಿದ ಜನ ಏಣಿಯಲ್ಲಿ ಶವ ಸಾಗಣೆ!

ಸೋಂಕಿಗೆ ಹೆದರಿದ ಜನ ಏಣಿಯಲ್ಲಿ ಶವ ಸಾಗಣೆ!

ಸೋಂಕಿಗೆ ಹೆದರಿದ ಜನ ಏಣಿಯಲ್ಲಿ ಶವ ಸಾಗಣೆ!

409
0
SHARE

ಚಾಮರಾಜನಗರ : ವ್ಯಕ್ತಿಯೊಬ್ಬ ಜ್ವರದಿಂದ ಸತ್ತಿದ್ದರೂ ಆತನನ್ನು ಮುಟ್ಟಲು ಗ್ರಾಮಸ್ಥರು ಭಯಪಟ್ಟು ಎರಡುದಿನ ಹಾಗೇ ಇದ್ದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಟಗರುಪುರ ದಲ್ಲಿ ನಡೆದಿದೆ .

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಟಗರಪುರ ಗ್ರಾಮದಲ್ಲಿ ಏಕಾಂಗಿ ಯಾಗಿದ್ದ ಮಹಾದೇವ ( 60 ) ತರಕಾರಿ ವ್ಯಾಪಾರಿಯಾಗಿದ್ದರು . ಅವರು ಮೂರು ದಿನ ಜ್ವರದಿಂದ ಬಳಲುತ್ತಿದ್ದರು . ಅವರು ಕೊವಿಡ್ ಟೆಸ್ಟ್ ಮಾಡಿಸಿಕೊಂಡಿರಲಿಲ್ಲ . ಆದರೆ ಅವರಿಗೆ ಸೋಂಕು ತಗುಲಿದೆ ಎಂದೇ ಗ್ರಾಮಸ್ಥರು ಭಾವಿಸಿದ್ದರು . ಆತನ ಮನೆಯ ಬಾಗಿಲು ತೆರೆಯುವ ಪ್ರಯತ್ನವನ್ನೂ ಮಾಡಿರಲಿಲ್ಲ. ಸ್ಥಳೀಯ ಕೆಲವು ಯುವಕರು ಭಾನುವಾರ ಪಿಎಫ್‌ಐ ಸಂಘಟನೆಗೆ ಫೋನ್ ಮಾಡಿದಾಗ ಸಂಘಟನೆಯ ಜಿಲ್ಲಾ ಮುಖಂಡ ಕಪಿಲ್ ಮತ್ತು ತಾಲೂಕು ಮುಖಂಡ ಮತೀನ್ ಸ್ಥಳಕ್ಕೆ ಬಂದು ನೋಡಿ ಮೃತ ದೇಹ ಸಾಗಿಸಲು ಮುಂದಾದರು.

ಮೃತ ವ್ಯಕ್ತಿಯ ಶವವನ್ನು ಸಾಗಿಸಲು ಗ್ರಾಮಸ್ಥರು ಸಹಕರಿಸಲಿಲ್ಲ . ಸಣ್ಣ ಸಹಾಯವನ್ನೂ ಮಾಡಲಿಲ್ಲ . ಆದರೂ ಹೆದರದ ಆ ಯುವಕರು ಅಲ್ಲೇ ಇದ್ದ ಏಣಿ ಬಳಸಿ ತಮ್ಮ ಬೈಕ್‌ಗಳಲ್ಲಿ ಕಟ್ಟಿಕೊಂಡು ದೇಹ ಸಾಗಿಸಿದರು.ಆಗಲೂ ಆತನದೇ ಜಮೀನಿನಲ್ಲಿ ಹೂಳಲು ಗ್ರಾಮಸ್ಥರು ವಿರೋಧಿಸಿದರು ನಂತರ ಕಾಡಂಚಿನಲ್ಲಿ ಶವ ಸಂಸ್ಕಾರ ಮಾಡಿದರು .

LEAVE A REPLY

Please enter your comment!
Please enter your name here