Home District ಸರ್ಕಾರ ನಡೆಸುವುದಕ್ಕೆ ಬಿಜೆಪಿಯವರಿಗೆ ಅನುಭವವಿಲ್ಲ; ಡಿಕೆ ಶಿವಕುಮಾರ್ ವಾಗ್ದಾಳಿ

ಸರ್ಕಾರ ನಡೆಸುವುದಕ್ಕೆ ಬಿಜೆಪಿಯವರಿಗೆ ಅನುಭವವಿಲ್ಲ; ಡಿಕೆ ಶಿವಕುಮಾರ್ ವಾಗ್ದಾಳಿ

460
0

ಬೆಳಗಾವಿ ಬ್ರೇಕಿಂಗ್; ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ. ಸಾರಿಗೆ ನೌಕರರ ಆತ್ಮಹತ್ಯೆ ವಿಚಾರವಾಗಿ ಮಾತನಾಡಿದ ಡಿಕೆ ಶಿವಕುಮಾರ್ ಬೆಳಗಾವಿ ಜಿಲ್ಲೆಯಲ್ಲಿ ಈ ರೀತಿ ಆದ್ರೆ ಬೇರೆ ಜಿಲ್ಲೆಯಲ್ಲಿ ಪರಿಸ್ಥಿತಿ ಏನು? ನಾನು ಅದಕ್ಕೆ ಡೇ ಒನ್ ನಿಂದಲೇ ಹೇಳ್ತಿದಿನಿ ಸಾರಿಗೆ ನೌಕರರ ಜೊತೆಗೆ ಮಾತನಾಡಿ ಅವರ ಕಷ್ಟಗಳನ್ನು ಆಲಿಸಿ ಅದನ್ನು ಪರಿಹರಿಸಿ ಎಂದು.

ಆದರೆ ಸರ್ಕಾರದವರು ಇದಕ್ಕೆ ಬೆಲೆಕೊಡದ ಕಾರಣ ಈ ರೀತಿಯ ಪರಿಸ್ಥಿತಿ ಎದುರಾಗಿದ್ದು. ಸಾರಿಗೆ ನೌಕರರನ್ನ‌ ಫ್ಯಾಮಿಲಿ ಮೆಂಬರ್ಸ್ ತರಹ ಟ್ರಿಟ್ ಮಾಡಿ ಎಂದರೆ ಈ ಸರ್ಕಾರದವರು ಎಲ್ಲಾ ನೌಕರರ ಮೇಲೂ ಸಂಶಯ ಪಡುತ್ತಿದ್ದಾರೆ. ಕಾನೂನು ಉಪಯೋಗಿಸಿಕೊಳ್ಳುವುದರ ಬಗ್ಗೆ ಏಕೆ ಮಾತನಾಡಬೇಕು? ಎಂದು ಡಿಕೆಶಿ ಪ್ರಶ್ನಿಸಿದ್ದಾರೆ. ರೈತರ ಹತ್ತಿರ, ಕಾರ್ಮಿಕರ ಹತ್ತಿರ ಏಕೆ ಮಾತಾಡಬೇಕು ಅನ್ನೊ ಪದ್ಧತಿಯನ್ನು ಬಿಜೆಪಿ ಸರ್ಕಾರ ಕೈ ಬಿಡಬೇಕು. ಎಲ್ಲಿಂದನೋ ಬಂದು ಎಲ್ಲೋ ದರ್ಬಾರ್ ಮಾಡುವ ನೀತಿ ಇಲ್ಲಿ ನಡಿಯುತ್ತಿದೆ.

ಕೊರೊನಾ ನಿಯಂತ್ರಣಕ್ಕೆ ನೈಟ ಕರ್ಪ್ಯೂ ವಿಚಾರವಾಗಿ ಮಾತನಾಡಿದ ಡಿಕೆ ಶಿವಕುಮಾರ್, ನೈಟ್ ಕರ್ಪ್ಯೂದಿಂದ ಪ್ರಯೋಜನೆ ಆಗುತ್ತೆ ಅಂತಾ ನಮಗಂತೂ ಅನ್ನಿಸುತ್ತಿಲ್ಲ. ಇಷ್ಟಾ ಬಂದ ರೀತಿಯಲ್ಲಿ ಸರ್ಕಾರ ನಿರ್ಧಾರಗಳನ್ನು ಕೈ ತೆಗೆದುಕೊಳ್ಳುತ್ತಿದೆ. ಈಗ ಅಲ್ಲಿ ಪಾರ್ಟಿಯವರನ್ನ ಕರೆದು ಚರ್ಚೆ ಮಾಡ್ತಿನಿ ಅಂತಿದ್ದಾರೆ. ದೇಶ ಮತ್ತು ರಾಜ್ಯದ ಜನರಿಗೆ ಸರ್ಕಾರದವರು ಅನ್ಯಾಯ ಮಾಡಿದ್ದಾರೆ ಎಂಬುದು ಬೇಸರದ ಸಂಗತಿ.

Previous articleಕೊರೋನಾ ಹೆಚ್ಚಿರುವ ರಾಜ್ಯಗಳ ಸಿಎಂಗಳ ಜೊತೆ ಪಿಎಂ ಚರ್ಚೆ
Next articleಡಿಪೋ ಮ್ಯಾನೇಜರ್ ಇಂದ ಬಸ್ ಚಲಾವಣೆ; ಸಾರ್ವಜನಿಕರ ಜೀವನದ ಜೊತೆ ಅಧಿಕಾರಿಗಳ ಚೆಲ್ಲಾಟ

LEAVE A REPLY

Please enter your comment!
Please enter your name here