Home Home ಮನೆಯಿಂದ ಹೊರಬರುವವರಿಗೆ ಕೆ.ಎಸ್.ಈಶ್ವರಪ್ಪ ಹೇಳಿದ್ದೇನು ಗೊತ್ತೇ?!

ಮನೆಯಿಂದ ಹೊರಬರುವವರಿಗೆ ಕೆ.ಎಸ್.ಈಶ್ವರಪ್ಪ ಹೇಳಿದ್ದೇನು ಗೊತ್ತೇ?!

Do you know what KS Eshwarappa said to those leaving the house | ಮನೆಯಿಂದ ಹೊರಬರುವವರಿಗೆ ಕೆ.ಎಸ್.ಈಶ್ವರಪ್ಪ ಹೇಳಿದ್ದೇನು ಗೊತ್ತೇ?!

315
0

ದಯವಿಟ್ಟು ಮನೆಯಿಂದ ಹೊರಬರಬೇಡಿ ನೀವು ಸಾಯೋದಲ್ಲದೇ ಬೇರೆಯವರನ್ನು ಸಾಯಿಸ್ತಿದ್ದೀರಿ. ಗೊತ್ತಿದ್ದವರೇ ಸಾಯ್ತಿದ್ದಾರೆ. ಎಷ್ಟೇ ಬಿಗಿ ಕ್ರಮ ಕೈಗೊಂಡು ಜನ ಓಡಾಟ ನಿಲ್ಸಿಲ್ಲ. ಮನೆ ಹತ್ತಿರ ಎಲ್ಲಾ ಹತ್ತಿರ ಎಲ್ಕಾ ಸಿಗುತ್ತೇ ಯಾಕೆ ಓಡಾಡುತ್ತೀರಿ. ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಕಡಿಮೆಯಾದರೂ ಕೂಡಾ ಗ್ರಾಮೀಣ ಮತ್ತು ನಗರದಲ್ಲಿ ಓಡಾಟ ಕಡಿಮೆಯಾಗ್ತಿಲ್ಲ. ವಾರ್ಡ್ ಮಟ್ಟದಲ್ಲಿ ಟಾಸ್ಕ್ ಪೋರ್ಸ್ ಎಲ್ಲಾ ಕ್ರಮ ಕೈಗೊಂಡರು ಓಡಾಟ ನಿಲ್ಲಿಸಿಲ್ಲ.

ಜಿಲ್ಲಾಢಳಿತ ವತಿಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 10 ಗಂಟೆಯಿಂದ ಸಂಪೂರ್ಣ ಲಾಕ್ ಡೌನ್ . ಬ್ಯಾಂಕ್ ಸರ್ಕಾರಿ ಕಚೇರಿ ಏನೂ ಇರಲ್ಲ. 7ನೇ ತಾರೀಖಿನವರೆಗೆ ಎಪಿಎಂಸಿ ದಿನಸಿ ಏನೂ ಇರಲ್ಲ. ತರಕಾರಿ ಮನೆ ಹತ್ತಿರ ಮಾತ್ರ ಇರುತ್ತೇ ಎಲ್ಲರೂ ಸಹಕಾರ ಕೊಡಬೇಕು. ಸೋಮವಾರ 10 ಗಂಟೆಯಿಂದ ಮುಂದಿನ‌ ಭಾನುವಾರದವರೆಗೂ ಸಂಪೂರ್ಣ ಲಾಕ್ ಡೌನ್. 6 ರಿಂದ 8ರ ವರೆಗೆ ಸಣ್ಣ ಸಣ್ಣ ದಿನಸಿ ಅಂಗಡಿ ಹತ್ತಿರ ಅಷ್ಟೇ ಓಪನ್. ಮೆಡಿಕಲ್ ಇರುತ್ತೇ. ವ್ಯಾಕ್ಸಿನ್ ಇರುತ್ತೇ. ಹೋಟೆಲ್ ಪಾರ್ಸೆಲ್ ಇರುತ್ತೇ. ಪಾಸಿಟೀವ್ ಕಡಿಮೆ ಆಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ಆಗುತ್ತಿಲ್ಲ. ದಿನೇ ದಿನೇ ಸಾಯ್ತಿದ್ದರೂ ಓಡಾಟ ಕಡಿಮೆಯಾಗ್ತಿಲ್ಲ. ಜನರಿಗೆ ಕೈಮುಗಿದು ಪ್ರಾರ್ಥಿಸಿದರೂ ನಿಲ್ಲಿಸಲ್ಲಿಲ್ಲ. ಮದುವೆ ಆಗೊ ಮೂರು ದಿನಕ್ಕೆ ಸಾಯ್ತಿದಾರೆ. ಮದುವೆಗೆ ಹೋದವರಿಗೆ ಕೊರೊನಾ ಬಂದಿದೆ, ನಲವತ್ತು ಜನರು ಸೇರಿ ಮಾಡಿ ಅಂದ್ರೂ‌ ಮಾತು ಕೇಳ್ತಿಲ್ಲ.

ವಾರ್ಡ್, ಮಟ್ಟದಲ್ಲಿ ಹಳ್ಳಿ ಮಟ್ಟದಲ್ಲಿ ತರಕಾರಿ ಕೊಳ್ಳಿ, ರಿಸೆಪ್ಷನ್,ಬಾಡೂಟ ಇಲ್ಲ‌ ದಿನೇ ದಿನೇ ಕಡಿಮೆಯಾಗ್ತಿದೆ ಪಾಸಿಟೀವ್ ಶಿವಮೊಗ್ಗದಲ್ಲಿ‌.ಕೃಷಿ ಮಾಡ್ತಿರುವವರಿಗೆ ಸ್ವಲ್ಪ ಜಮೀನಿಗೆ ಹೋಗಿ ಬರಬಹುದು. ಸುಮ್ಮನೆ ಹೋಗಲು ಅವಕಾಶ ಇಲ್ಲ.ಪೊಲೀಸ್ ಇಲಾಖೆ ಎಲ್ಲಾ ಕಡೆ ಬ್ಯಾರೀಕೇಡ್ ಹಾಕಿದರೂ ಮಾಧ್ಯಮ ದವರು ಬಿಗಿ ಕ್ರಮ ಇಲ್ಲ‌ ಅಂತೀರಿ. ಇನ್ನೂ ಏನೂ‌ ಮಾಡಲು ಸಾಧ್ಯ. ನೀವೇ ಹೇಳಿ ಸಾಯಬೇಡಿ ಅಂದ್ರು ಓಡಾಡ್ತಾರೆ‌.ಟಾಸ್ಕ್ ಪೋರ್ಸ್ ಬೆಂಬಲದಿಂದ ಜಿಲ್ಲೆಯಲ್ಲಿ 332 ಕೋವಿಡ್ ಮುಕ್ತ ಗ್ರಾಮ ಜಿಲ್ಲೆಯಲ್ಲಿ ಆಗಿದೆ.

ಬ್ಲಾಕ್ ಫಂಗಸ್ ನೀರಿನಿಂದ ಬರುತ್ತೇ ಅಂತಾ ವಿಜ್ಞಾನಿಗಳು ಹೇಳಿದ್ದಾರೆ ಕುದಿಸಿ ಆರಿಸಿ ಕುಡಿಯಿರಿ. ಜಿಲ್ಲೆಯಲ್ಲಿ ೩೫ ಸಸ್ಪೆಕ್ಟ್ ಕೇಸ್ ಒಂದು ಡೆಡ್ ಆಗಿದೆ ೨೬ ಆ್ಯಕ್ಟೀವ್ ಕೇಸ್ ಜಿಲ್ಲೆಯಲ್ಲಿದೆ. ವಾಕಿಂಗ್ ಮಾಡಿಕೊಂಡು ಮನೆಯಲ್ಲಿ ಹೋಗಿ ಸತ್ತಿದ್ದಾರೆ. ಪಾರ್ಕ್ ಗೆ ನುಗ್ಗಿ ಕ್ರಮ ಕೈಗೊಳ್ಳಬೇಕಾ ಮಾಧ್ಯಮದವರು ಹೇಳಿದರು ಅಂತಾ ಮಾಡ್ತೇವೆ. ನಿನ್ನೆ ಸಂಸ್ಕೃತಿ ಫೌಂಡೇಷನ್ ಶರಣ ಸತ್ತ ಅವನ ಹೆಂಡತಿ ಮೊನ್ನೆ ಸತ್ತಳು. ಒಂದು ವರ್ಷದ ಮಗು ಇದೆ ಏನೂ‌ ಮಾಡೋಣ ಹೇಳಿ ಹೊಟ್ಟೆ ಹುರಿಯುತ್ತೇ‌‌‌. ಪೊಲೀಸರಿಗೆ ಸಾವಿರಾರು ಮಾಸ್ಕ್ ಹಂಚಿದ್ದ. ಯಾರಾದರೂ ಅನಗತ್ಯ ಓಡಾಡಿದರೆ ಕಾರು ಬೈಕ್ ಸೀಜ್ ಮಾಡಿ ವಾಹನ ‌ಬಿಡಲ್ಲ ವ್ಯಕ್ತಿ ಅರೆಸ್ಟ್ ಮಾಡಿ ಎಂದರು.

VIADo you know what KS Eshwarappa said to those leaving the house | ಮನೆಯಿಂದ ಹೊರಬರುವವರಿಗೆ ಕೆ.ಎಸ್.ಈಶ್ವರಪ್ಪ ಹೇಳಿದ್ದೇನು ಗೊತ್ತೇ?!
SOURCEDo you know what KS Eshwarappa said to those leaving the house | ಮನೆಯಿಂದ ಹೊರಬರುವವರಿಗೆ ಕೆ.ಎಸ್.ಈಶ್ವರಪ್ಪ ಹೇಳಿದ್ದೇನು ಗೊತ್ತೇ?!
Previous articleಅಧಿಕಾರಿಗಳು v/s ಜನಪ್ರತಿನಿಧಿಗಳ ವೈಮನಸ್ಸಿಗೆ Medicine ನೀಡಿದ ಸಚಿವ S.T ಸೋಮಶೇಖರ್!
Next articleಬಯಲುಸೀಮೆಗೆ ಮಳೆರಾಯನ “Entry” ; ತಂಪೆರೆದ ವರುಣ!

LEAVE A REPLY

Please enter your comment!
Please enter your name here