Home District ಬೆಂಗಳೂರಿನಲ್ಲಿ ಲಾಕ್‌ಡೌನ್‌ಗಿಂತಲೂ ಕಠಿಣ ನಿರ್ಧಾರ ಜಾರಿಗೊಳಿಸ್ತೇವೆ; ಡಾ.ಕೆ.ಸುಧಾಕರ್

ಬೆಂಗಳೂರಿನಲ್ಲಿ ಲಾಕ್‌ಡೌನ್‌ಗಿಂತಲೂ ಕಠಿಣ ನಿರ್ಧಾರ ಜಾರಿಗೊಳಿಸ್ತೇವೆ; ಡಾ.ಕೆ.ಸುಧಾಕರ್

555
0

ಬೆಂಗಳೂರಿನಲ್ಲಿ ಲಾಕ್‌ಡೌನ್ ಮಾಡಲ್ಲ ಆದ್ರೆ ಲಾಕ್‌ಡೌನ್‌ಗಿಂತ ಕಠಿಣ ನಿರ್ಧಾರ ಜಾರಿಗೊಳಿಸ್ತೇವೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಇನ್ನು ಟಫ್ ರೂಲ್ಸ್ ಜಾರಿಯಾದ್ರೆ ಸಿಲಿಕಾನ್ ಸಿಟಿಯಲ್ಲಿ ನೈಟ್ ಕರ್ಫ್ಯೂ ವಿಸ್ತರಣೆ ಆಗಲಿದ್ಯಾ ಎನ್ನುವ ಪ್ರಶ್ನೆ ಎದ್ದಿದೆ. ಪಾರ್ಕ್, ಆಟದ ಮೈದಾನ, ಈಜುಕೊಳಗಳಿಗೆ ನಿರ್ಬಂಧ ಹೇರುತ್ತಾರಾ ? ಹೋಟೆಲ್, ಬಾರ್, ರೆಸ್ಟೋರೆಂಟ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ ನೀಡ್ತಾರಾ.. ಚಿತ್ರಮಂದಿರ, ಮಾಲ್,ಶಾಪಿಂಗ್ ಕಾಂಪ್ಲೆಕ್ಸ್, ಜಿಮ್‌ಗಳಿಗೂ ನಿರ್ಬಂಧ ಹೇರುವ ಸಾಧ್ಯತೆಗಳಿವೆ. ? ತಂಬಾಕು, ಮದ್ಯ ಮಾರಾಟಕ್ಕೂ ಬ್ರೇಕ್ ಬೀಳುತ್ತೆ ಎನ್ನಲಾಗಿದೆ.

ಅಷ್ಟೇ ಅಲ್ಲದೇ ಬಹುಮುಖ್ಯವಾಗಿ ಶಾಲಾ-ಕಾಲೇಜುಗಳು ಸಂಪೂರ್ಣ ಬಂದ್‌ ಆಗುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಪ್ರಮುಖ ಪರೀಕ್ಷೆಗಳಿಗೆ ಮಾತ್ರ ಅವಕಾಶ ನೀಡುವ ಸಾಧ್ಯತೆ ಇದ್ದು, ಐಟಿ-ಬಿಟಿ ಕಂಪನಿಗಳಿಗೆ ವರ್ಕ್ ಫ್ರಂ ಹೋಂ ಕಡ್ಡಾಯ ಸಾಧ್ಯತೆ ಕೂಡ ಇದೆ.

ಇನ್ನು ಆಸ್ಪತ್ರೆಗಳ ಕಡೆ ನೋಡುವುದಾದರೆ, ಶೇಕಡಾ 50ರಷ್ಟು ಹಾಸಿಗೆ ಮೀಸಲಿಡದ ಖಾಸಗಿ ಅಸ್ಪತ್ರೆಗಳಿಗೆ ನೊಟೀಸ್ ನೀಡುವುದಾಗಿ ಬಿಬಿಎಂಪಿ ಆಯುಕ್ತ ಗೌರವ ಗುಪ್ತ ಹೇಳಿದಾರೆ.ಈಗಾಗಲೆ ಬಿಬಿಎಂಪಿಯ ಅಧಿಕಾರಿಗಳ ವಿಶೇಷ ತಂಡವನ್ನು ತಪಾಸಣೆಗೆ ಕಳುಹಿಸಲಾಗಿದೆ.ಎಲ್ಲೆಲ್ಲಿ ಬಿಬಿಎಂಪಿ ನಿಗದಿ ಪಡಿಸಿದ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳು ದಾಖಲು ಮಾಡಿಕೊಳ್ಳುತ್ತಿಲ್ಲ ಎಂಬುದನ್ನು‌ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುತ್ತದೆ.ಬೆಡ್ ಖಾಲಿ ಇಲ್ಲದೆ ಇರುವ ಆಸ್ಪತ್ರೆಗಳಿಗೆ ರೋಗಿಗಳನ್ನು ಅಲಾಟ್ ಮಾಡಿರುವುದನ್ನು ಗಮನಕ್ಕೆ ತಂದರೆ ಅದನ್ನು ರಿ ಅಲಾಟ್ ಮಾಡುವುದಾಗಿ ಹೇಳಿದಾರೆ.

Previous articleಪರಿಕ್ಷೆಯೇ ಇಲ್ಲದೇ 1-9ನೇ ತರಗತಿ ವಿದ್ಯಾರ್ಥಿಗಳು ಪಾಸ್!
Next articleಕೊರೊನಾ ಹಿನ್ನಲೆ; ಹೇಗಿತ್ತು ಎಸ್.ಟಿ.ಸೋಮಶೇಖರ್ ಸಿಟಿ ರೌಂಡ್ಸ್?

LEAVE A REPLY

Please enter your comment!
Please enter your name here