Home District ಏಳು ಜನರ ಸಾವಿಗೆ ಕಾರಣವಾದ ಒಬ್ಬನ ಮಧ್ಯಸೇವನೆ; ಕೊಡಗು ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಪ್ರಕರಣ!

ಏಳು ಜನರ ಸಾವಿಗೆ ಕಾರಣವಾದ ಒಬ್ಬನ ಮಧ್ಯಸೇವನೆ; ಕೊಡಗು ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಪ್ರಕರಣ!

1154
0

ಅದು ಕೊಡಗು ಜಿಲ್ಲೆಯನ್ನೆ ಬೆಚ್ಚಿ ಬೀಳಿಸಿದ ಪ್ರಕರಣ. 7 ಜನರನ್ನ ಆತ ಬೆಂಕಿ ಹಚ್ಚಿ ಸುಟ್ಟುಹಾಕಿದ್ದ. ಆತನಿಗಾಗಿ ಪೊಲೀಸರು ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆಸಿದ್ರು. ಆದ್ರೆ ತಾನು ಮಾಡಿದ ಕೃತ್ಯದ ತಪ್ಪಿನ ಅರಿವಾಗಿ ಆತ ಮಾಡಿಕೊಂಡಿದ್ದಾದ್ರು ಏನು ಅಂತ್ತೀರಾ ಇಲ್ಲಿದೆ ನೋಡಿ.

ಕೊಡಗು ಜಿಲ್ಲೆಯನ್ನೆ ಬೆಚ್ಚಿಬೀಳಿಸಿತ್ತು ಬೆಳ್ಳಂಬಬ್ಬೆಳ್ಳಗೆಯ ಆ ಪ್ರಕರಣ, 7 ಜನರ ಸಾವಿಗೆ ಕಾರನಾಗಿದ್ದ ಪಾಪಿ, 7 ಜನರನ್ನ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಆರೋಪಿ. ತಾನು ಕೆಲಸ ಮಾಡುತ್ತಿದ್ದ ತೋಟದಲ್ಲೆ ಆತ್ಮಹತ್ಯೆ. ಎಸ್ ಹಿಗೊಂದು ಘಟನೆ ನಡೆದಿರೋದು ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಮುಗುಟಗೇರಿ ಎಂಬಲ್ಲಿ. ಅದು ಏ.3ನೇ ತಾರೀಖು. ಗುಡ್ ಪ್ರೈಡೆ ಆಚರಿಸಿ ಸಂತೋಷ ದಿಂದ ಮಲಗಿತ್ತು ಆ ಕುಟುಂಬ.ಆದ್ರೆ ಆ ಕುಟುಂಬಕ್ಕೆ ಆ ಸಂತೋಷ ಹೆಚ್ಚು‌‌ ಕಾಲ ಉಳಿಯಲಿಲ್ಲ. ಹೆಂಡತಿಯ ಮೇಲಿನ ದ್ವೇಷಕ್ಕೆ ಕುಡಿತದ ಅಮಲಿನಲ್ಲಿ ರಾತ್ರೋ‌ ರಾತ್ರಿ ಮನೆಯ ಮೇಲಿಂದ ಪೆಟ್ರೋಲ್ ಹಾಕಿ 7 ಜನರನ್ನ ಸುಟ್ಟು ಹಾಕಿದ್ದ ಬೋಜ. ಇತನಿಗಾಗಿ ಪೊಲೀಸರು ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆದಿದ್ರು ಆತನ ಸುಳಿವು ಮಾತ್ರ ಸಿಕ್ಕಲೆ ಇಲ್ಲಾ. ಆತನ ಹುಡುಕಾಟ್ಟಕಾಗಿ ಎಸ್ಪಿ ಕ್ಷಮಾ ಮಿಶ್ರ ನೇತೃತ್ವದಲ್ಲಿ ಎಂಟು ತಂಡಗಳ ರಚನೆ ಮಾಡಿ ಹುಡುಕಾಟ ನಡೆಸಲಾಯಿತು.ಗೋಣಿಕೊಪ್ಪ ಡಿವೈಎಸ್ಪಿ ಜಯಕುಮಾರ್ ನೇತೃತ್ವದ ತಂಡ ಕೇವಲ‌ ಕರ್ನಾಟಕ ಮಾತ್ರವಲ್ಲದೆ ನೇರೆಯ ಕೇರಳ ರಾಜ್ಯದಲ್ಲೂ ಹುಡುಕಾಟ ನಡೆಸಿದ್ರು. ಅದ್ರೆ ಆತ ಮಾತ್ರ ಸಿಕ್ಕಲೆ ಇಲ್ಲ. ಇಂದು ಮುಂಜಾನೆ ತೋಟದ ಮಾಲೀಕ ನರೇಶ್ ಎಂಬುವರ ತೋಟದ ಕೆಲಸಗಾರರು‌ ಗದ್ದೆಯಲ್ಲಿ‌ ಹಸು ಕಟ್ಟಲು‌ ತೆರಳಿದ ಸಂದರ್ಭ ತೋಟದ ಕಡೆಯಿಂದ ಕೊಳೆತ ವಾಸನೆ ಬರ ತೋಡಗಿದೆ. ಏನಿದು‌ ಎಂದು ಹುಡುಕಾಟ ನಡೆಸಿದಾಗ 7 ಜನರ ಸಾವಿಗೆ ಕಾಣನಾಗಿದ್ದ ಬೋಜ ಕಾಫಿ ತೋಟದಲ್ಲಿ‌ ಆತ್ಮ ಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ.

ಇನ್ನೂ ಬೋಜ‌ ಮತ್ತು ಹೆಂಡತಿ ಬೇಬಿ ನಡುವೆ ಆಗಾಗೆ ಜಗಳಗಳು ನಡೆಯುತ್ತಲೆ ಇತಂತ್ತೆ. ಘಟನೆ ನಡೆದ ದಿನವೂ ಕೂಡ ಹೆಂಡತಿಗೆ ಕರೆ ಮಾಡಿ ನಿನ್ನನ್ನೂ ಕೊಲೆ ಮಾಡುವುದಾಗಿಯೂ ಹೇಳಿದನಂತೆ.ಇಷ್ಟೇ ಅಲ್ಲದೆ ಆತ ಆತ್ಮ‌ಹತ್ಯೆ ಮಾಡಿ ಕೊಳ್ಳೊ ಮುಂಚ್ಚಿತವಾಗಿ ತನ್ನ ಮಗಳಿಗೆ ಕರೆ ಮಾಡಿ ಮನೆಯಲ್ಲಿ ಇದ್ದವರನ್ನ ಬೆಂಕಿ ಹಚ್ಚಿರೋದಾಗಿ ತಿಳಿಸಿದಲ್ಲದೆ ತಾನೂ ಕೂಡ ಆತ್ಮ‌ ಹತ್ಯೆ ಮಾಡಿಕೊಳ್ಳೋದಾಗಿ ಬೋಜ‌ ತಿಳಿಸಿದ್ದಾನೆ. ಅಲ್ಲದೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಾಗ್ಯ ಎಂಬ ಮಹಿಳೆ ಕೂಡ ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ.

ಒಟ್ಟಿನಲ್ಲಿ ಕುಡಿತದ ಅಮಲಿನಿಂದ ದುಡುಕಿ ಆತ ಮಾಡಿದ ಅದೊಂದು ಘಟನೆ ಇಡಿ ಕುಟುಂಬವನ್ನೆ ಬಲಿ‌ ಪಡೆದುಕೊಂಡಿದ್ರೆ. ತಾನೂ ಕೂಡ ಆತ್ಮ ಹತ್ಯೆ ಮಾಡಿಕೊಳ್ಳುವ ಮೂಲಕ ತಾನೂ ಕೂಡ ಮಸಣದ ಹಾದಿ ಹಿಡಿದಿದ್ದಾನೆ. ಇಲ್ಲಿ ಏನು ಅರಿಯದ ಆರು ಮತ್ತು ಏರು ವರ್ಷದ ಕಂದಮ್ಮಗಳು ಕೂಡ ಸುಟ್ಟುಹೋಗಿದ್ದು ಎಂತವರ ಕರುಳನ್ನಾದ್ರು ಹಿಂಡುವಂತೆ ಮಾಡುತ್ತೆ.

Previous articleದುಡ್ಡು ಯಡಿಯೂರಪ್ಪನವರದ್ದಾದರೂ ನಿಮ್ಮ ಮತ ನಮ್ಮ ಬಸವನಗೌಡರಿಗೆ: ಸಿದ್ದರಾಮಯ್ಯ
Next articleಮಾನವೀಯತೆ ಮೆರೆದು ಹೀರೋ ಆದ ಆಟೋ ಚಾಲಕ!

LEAVE A REPLY

Please enter your comment!
Please enter your name here