Home Crime ಅಕ್ರಮ ಸಂಬಂಧ ಪ್ರಶ್ನೆ ಮಾಡಿದ ಮಗ; ಪ್ರಿಯಕರನ ಜೊತೆ ಸೇರಿ ಮಗನನ್ನೆ ಹತ್ಯೆ ಮಾಡಿದ ತಾಯಿ

ಅಕ್ರಮ ಸಂಬಂಧ ಪ್ರಶ್ನೆ ಮಾಡಿದ ಮಗ; ಪ್ರಿಯಕರನ ಜೊತೆ ಸೇರಿ ಮಗನನ್ನೆ ಹತ್ಯೆ ಮಾಡಿದ ತಾಯಿ

584
0
SHARE

ಧಾರವಾಡ : ತಾಯಿಯ ಅಕ್ರಮ ಸಂಬಂಧ ಪ್ರಶ್ನೆ ಮಾಡಿದಕ್ಕೆ ಸ್ವಂತ ಮಗನನ್ನೆ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರುವ ತಾಯಿ, ಸಹೋದರ ಮತ್ತು ಪ್ರಿಯಕರನನ್ನು, ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭೀಮನಗೌಡ ಪಾಟೀಲ್ (೨೪), ಮೃತನ ತಾಯಿ‌ ಸುನಂದಾ ಸೋಮನಗೌಡ ಪಾಟೀಲ್ (೪೫) ಮಹಾದೇವಪ್ಪ ಗಾಯಕವಾಡ (೫೦) ಬಂಧಿತ ಆರೋಪಿಗಳಾಗಿದ್ದಾರೆ. ತಾಯಿಯ ಅಕ್ರಮ ಸಂಬಂಧ ಪ್ರಶ್ನೆ ಮಾಡಿರುವುದಕ್ಕೆ ಪ್ರಿಯಕರನೊಂದಿಗೆ ಸೇರಿ ಮಗನನ್ನೆ ತಾಯಿ ಕೊಲೆ ಮಾಡಿದ್ದಾಳೆ‌.

ಕೊಲೆ ಆರೋಪಿಗಳು

(ಸುನಂದಾ ಸೋಮನಗೌಡ ಪಾಟೀಲ್,ಮಹಾದೇವಪ್ಪ ಗಾಯಕವಾಡ, ಭೀಮನಗೌಡ ಪಾಟೀಲ್)

ಅಕ್ರಮ ಸಂಬಂಧ ಹೊಂದಿದ ವ್ಯಕ್ತಿ ಕೂಡಾ ಕೊಲೆಯಲ್ಲಿ ಭಾಗಿಯಾಗಿದ್ದಾರೆ. ಗುರುವಾರ ಹನುಮಂತಗೌಡ ಸೋಮನಗೌಡ ಪಾಟೀಲ್ ಅವರನ್ನು ಕಣ್ಣಿಗೆ ಖಾರದ ಪುಡಿ ಎರಚಿ ಎರಡು ಕೈಕಾಲು ಕಟ್ಟಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದರು. ತಮ್ಮ, ತಾಯಿ ಹಾಗೂ ಅಕ್ರಮ ಸಂಬಂಧ ಹೊಂದಿದ ವ್ಯಕ್ತಿ ಮೂರು ಜನ ಸೇರಿ ಪ್ಲಾನ್ ಮಾಡಿ ಕೊಲೆ ಮಾಡಿದ್ದಾರೆ.

ಕೊಲೆ ಪ್ರಕರಣದ ತನಿಖೆ ಆರಂಭಿಸಿ ಮೂವರನ್ನು ಬಂಧಿಸುವಲ್ಲಿ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here