ಈದ್ಗಾ ಮೈದಾನದ ವಿವಾದ: ಯೂಟರ್ನ್ ಹೊಡೆದ BBMP ಆಯುಕ್ತ ತುಷಾರ್ ಗಿರಿನಾಥ್

ಬೆಂಗಳೂರು

ಬೆಂಗಳೂರು: ಚಾಮರಾಜಪೇಟೆಯ ಆಟದ ಮೈದಾನ ಬಿಬಿಎಂಪಿ ಆಸ್ತಿ ಅಲ್ಲ ಎಂಬ ಹೇಳಿಕೆ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತರ ವಿರುದ್ಧ ಹಿಂದೂ ಪರ ಸಂಘಟನೆಯ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಹಿಂದೂ ಜನಜಾಗೃತಿ ಸಮಿತಿಯ ಮುಖಂಡ ಮೋಹನ್‌ಗೌಡ ಮಾತನಾಡಿ, ಚಾಮರಾಜಪೇಟೆ ಮೈದಾನವು 1976ರಲ್ಲಿ ಬಿಬಿಎಂಪಿ ಆಸ್ತಿಯೆಂಬುದು ಸ್ಪಷ್ಟದಾಖಲೆಯಿದೆ. ಆದರೆ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಮೈದಾನವು ವಕ್ಫ್ ಆಸ್ತಿಯೆಂದು ಉಲ್ಟಾಹೊಡೆದಿದ್ದಾರೆ. ಕೂಡಲೇ, ವಕ್ಫ್ ಬೋರ್ಡ್‌ನಿಂದ ಪಾಲಿಕೆಗೆ ಸಲ್ಲಿಸಿದ ದಾಖಲೆಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಒಳಸಂಚಿನಿಂದ ಕೋಟ್ಯಂತರ ರು. ಮೌಲ್ಯದ ಮೈದಾನವನ್ನು ಕಬಳಿಸುವ ಸಂಚು ರೂಪಿಸಿ ಒಂದು ಧರ್ಮದ ಹೆಸರಿಗೆ ಮಾಡಿಕೊಡಲಾಗುತ್ತಿದೆ. ಈ ಬಗ್ಗೆ ಕಾನೂನು ಹೋರಾಟ ಮಾಡಲಾಗುತ್ತದೆ ಎಂದು ಆರೋಪಿಸಿದ್ದಾರೆ..

Leave a Reply

Your email address will not be published.