ಉಪಚುನಾವಣೆ ಹಿನ್ನಲೆ; ಕೆರಳಿದ ಕುತೂಹಲ; ಅಭ್ಯರ್ಥಿಗಳ ಎದೆ ಢವ ಢವ…!!

465
0

ವರದಿ: ಬಾಬಾ. ಪ್ರಜಾ ಟಿವಿ ರಾಯಚೂರು

ರಾಯಚೂರು ಬ್ರೇಕಿಂಗ್; ಮಸ್ಕಿ ಕ್ಷೇತ್ರದ ಜನರಲ್ಲಿ ಕುತೂಹಲ ಮೂಡಿದೆ ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ.ಕ್ಷೇತ್ರದ ಉಪಚುನಾವಣೆ ಬಿಜೆಪಿ-ಕಾಂಗ್ರೆಸ್ ಮಧ್ಯೆ ಜಿದ್ದಾಜಿದ್ದಿನ ಅಖಾಡವಾಗಿ ರಂಗೇರಿತ್ತು.ಎರಡು ಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಂಡ ಚುನಾವಣೆ ರಂಗೇರಿದ ವಾತಾವರಣ ಕಂಡುಬಂತು.ಹಾಲಿ ಮಾಜಿ ಮುಖ್ಯಮಂತ್ರಿಗಳು ಬಿಸಿಲನ್ನು ಲೆಕ್ಕಿಸದೆ ಎಲೆಕ್ಷನ್ ಅನ್ನು ಗಂಭೀರವಾಗಿ ತೆಗೆದುಕೊಂಡು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು.

ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಹಣಾಹಣಿ ಎದುರಾಗಿದ್ದು ಮತದಾರರು ಯಾರಿಗೆ ಮಣೆ ಹಾಕಿದ್ದಾರೆ ಎಂದು ನಾಳೆ ತಿಳಿಯಲಿದೆ.2008ರಲ್ಲಿ ಪುನರ್ ವಿಂಗಡನೆಯಾಗಿ ಪರಿಶಿಷ್ಠ ಪಂಗಡಕ್ಕೆ ಉದಯವಾದ ಮಸ್ಕಿ ಕ್ಷೇತ್ರದಲ್ಲಿ ಮೊದಲು ಬಿಜೆಪಿ ಎರಡು ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಹ್ಯಾಟ್ರಿಕ್ ಸ್ಥಾನ ಮಾಡಿ ಶಾಸಕರಾಗಿದ್ದ ಪ್ರತಾಪ್ ಗೌಡ ಪಾಟೀಲ್ ಈಗ ಬಿಜೆಪಿಯಿಂದ ಸ್ಪರ್ಧಿಸಿ 4ನೇ ಗೆಲುವಿಗಾಗಿ ಕಾಯುತ್ತಿದ್ದಾರೆ.

ಇನ್ನೂ ಕಾಂಗ್ರೆಸ್ಸಿನ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಶತಾಯ ಗತಾಯ ಈ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪಕ್ಷದ ನಾಯಕರು ಶ್ರಮಿಸಿದ್ದಾರೆ.ಕಾಂಗ್ರೆಸ್ನಲ್ಲಿ ಬಸನಗೌಡ ತುರ್ವಿಹಾಳ ಹೆಸರು ಮೇಲೆ ಪೈಪೋಟಿ ಹೆಚ್ಚಾಗಿದೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಇದ್ದೆ.

ಯಾರೇ ಗೆದ್ದರೂ ಮತಗಳ ಗೆಲುವಿನ ಅಂತರ ಕಡಿಮೆಯಾಗಲಿದೆ ಮತದಾನ ಮುಗಿದ ಮೇಲೆ ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರ ನಡೆದಿದೆ.ಕ್ಷೇತ್ರದಲ್ಲಿ ಬೆಟ್ಟಿಂಗ್ ಕೂಡ ಜೋರಾಗಿದೆ ಈ ಬಾರಿ ಚುನಾವಣೆಯಲ್ಲಿ ಮತದಾನ ಪ್ರಣಾಮ ಹೆಚ್ಚಾಗಿದ್ದು ಕಳೆದ ಬಾರಿ ಶೇಕಡ 68 ರಷ್ಟು ಮತದಾನವಾಗಿದ್ದು ಈಗ ಶೇಕಡಾ 70.48 ರಷ್ಟು ಮತದಾನವಾಗಿದೆ.

ನಾಳೆ ರಾಯಚೂರಿನ ಎಸ್ಆರ್ ಪಿಎಸ್ ಪಿಯು ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ ಬಿಜೆಪಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಬೆಟ್ಟಿಂಗ್ ಸೇರಿದಂತೆ ಸೋಲು-ಗೆಲುವಿನ ಲೆಕ್ಕಾಚಾರಗಳು ನಡೆದಿದ್ದು ವಿಜಯಲಕ್ಷ್ಮಿ ಯಾರಿಗೆ ಒಲಿಯುವಳು ಕಾದುನೋಡಬೇಕಷ್ಟೇ.

Previous articleಖಾಸಗಿ ಆಸ್ಪತ್ರೆಗಳಿಗೆ ಸಿಎಂ ದಿಢೀರ್ ಭೇಟಿ; ಖುದ್ದು ಭೇಟಿಯ ಬಳಿಕ ಸಿಎಂ ಗರಂ!
Next articleಕರ್ಫ್ಯೂ ಉಲ್ಲಂಘಿಸಿದವರಿಗೆ ಬಿಸಿ ಮುಟ್ಟಿಸುತ್ತಿರುವ ಪೊಲೀಸರು!

LEAVE A REPLY

Please enter your comment!
Please enter your name here