ಮೀನುಕಟ್ಟೆ ಕೆಸರಿನಲ್ಲಿ ಸಿಲುಕಿದ್ದ ಆನೆ ಮರಿಯನ್ನು ರಕ್ಷಿಸಿದ ಅರಣ್ಯ ಇಲಾಖೆ

ಮೀನುಕಟ್ಟೆ ಕೆಸರಿನಲ್ಲಿ ಸಿಲುಕಿದ್ದ ಆನೆ ಮರಿಯನ್ನು ರಕ್ಷಿಸಿದ ಅರಣ್ಯ ಇಲಾಖೆ

392
0

ವರದಿ: ನಾ.ಅಶ್ವಥ್ ಕುಮಾರ್

ಚಾಮರಾಜನಗರ : ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಹೆಡಿಯಾಲ ಉಪ ವಿಭಾಗ ವ್ಯಾಪ್ತಿಯ ಮೊಳೆಯೂರು ವಲಯದಲ್ಲಿ ಕೆರೆಯ ಕೆಸರಿನಲ್ಲಿ ಸಿಲುಕ್ಕಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಆನೆಮರಿಯನ್ನು ಅರಣ್ಯಾಧಿಕಾರಿಗಳು ಸಂರಕ್ಷಿಸಿದ್ದಾರೆ.

ಹೆಡಿಯಾಲ ಉಪ ವಿಭಾಗದ ಮೊಳೆಯೂರು ವಲಯದಲ್ಲಿರುವ ಮೀನುಕಟ್ಟೆ ಕೆರೆಯ ಕೆಸರಿನಲ್ಲಿ ಆನೆಮರಿಯೊಂದು ಸಿಲುಕಿ ಜೀವನ್ಮರಣ ಜೊತೆ ಹೋರಾಟ ನಡೆಸುತ್ತಿತ್ತು.ಕೆರೆಯ ಕೆಸರಿನಲ್ಲಿ ಆನೆ ಮರಿ ಸಿಲುಕಿರುವ ಮಾಹಿತಿ ಪಡೆದ ಹೆಡಿಯಾಲ ಉಪ ವಿಭಾಗದ ಎಸಿಎಫ್ ರವಿಕುಮಾರ್ ನೇತೃತ್ವದಲ್ಲಿ ಜೆ.ಸಿಬಿ ಯಂತ್ರದಿಂದ ಕೆರೆಯ ಕೆಸರಿನಲ್ಲಿ ಸಿಲುಕಿದ್ದ ಆನೆಮರಿಯನ್ನುರಕ್ಷಿಸಿ ಸುರಕ್ಷಿತವಾಗಿ ಕಾಡಿನೊಳಗೆ ಬಿಡಲಾಯಿತು.

ಸಕಾಲಕ್ಕೆ ಹೆಡಿಯಾಲ ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಾಧಿಕಾರಿ ರವಿಕುಮಾರ್ ರವರು ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಧಾವಿಸಿ, ಜೆ.ಸಿ.ಬಿ ಯಂತ್ರದ ಮೂಲಕ ಆನೆ ಮರಿಯನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

VIAಮೀನುಕಟ್ಟೆ ಕೆಸರಿನಲ್ಲಿ ಸಿಲುಕಿದ್ದ ಆನೆ ಮರಿಯನ್ನು ರಕ್ಷಿಸಿದ ಅರಣ್ಯ ಇಲಾಖೆ
SOURCEಮೀನುಕಟ್ಟೆ ಕೆಸರಿನಲ್ಲಿ ಸಿಲುಕಿದ್ದ ಆನೆ ಮರಿಯನ್ನು ರಕ್ಷಿಸಿದ ಅರಣ್ಯ ಇಲಾಖೆ
Previous articleಸಾರ್ವಜನಿಕ ಆಸ್ಪತ್ರೆಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಧಿಡೀರ್ ಭೇಟಿ; ಪರಿಶೀಲನೆ
Next articleಬಂಡೀಪುರ ವ್ಯಾಪ್ತಿಯ 38 ಎಕರೆ ಪ್ರದೇಶದಲ್ಲಿ ಬಿದಿರು ಬಿತ್ತನೆ ಕಾರ್ಯ

LEAVE A REPLY

Please enter your comment!
Please enter your name here