ರಂಜಾನ್ ಹಬ್ಬಕ್ಕೆ ತೊಂದರೆ ಮಾಡೊಲ್ಲ; ಅವರಿಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ; ಕೆ.ಎಸ್ ಈಶ್ವರಪ್ಪ

ರಂಜಾನ್ ಹಬ್ಬಕ್ಕೆ ತೊಂದರೆ ಮಾಡೊಲ್ಲ; ಅವರಿಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ; ಕೆ.ಎಸ್ ಈಶ್ವರಪ್ಪ

521
0

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಳೆಯಿಂದ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್ ಜಾರಿಗೆ ಬರಲಿದೆ, ಲಾಕ್ ಡೌನ್ ಸಮಯದಲ್ಲಿ ರಂಜಾನ್ ಹಬ್ಬಕ್ಕೆ ತೊಂದರೆ ಮಾಡೊಲ್ಲ ಅವರಿಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ ಎಂದು ಶಿವಮೊಗ್ಗ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೆಲವರು ರಂಜಾನ್ ಹೆಸರಿನಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಅದನ್ನು ನಂಬಬೇಡಿ.

ರಂಜಾನ್ ಹಾಗೂ ಬಸವ ಜಯಂತಿ ಹಬ್ಬಗಳಿಗೆ ತೊಂದರೆ ಕೂಡುವುದಿಲ್ಲವೆಂದು ಸಚಿವ ಕೆ ಎಸ್ ಈಶ್ವರಪ್ಪ ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿದ್ರು. ಇನ್ನು ರೈಲ್ವೆ, ಡಿಫೆನ್ಸ್ ಗೆ ಸಂಬಂಧಿಸಿದ ಕೈಗಾರಿಕಾ ಉತ್ಪನ್ನ ತಯಾರಿಸಲು ಅವಕಾಶ ಕಲ್ಪಿಸಲಾಗಿದೆ ಈ ಲಾಕ್ ಡೌನ್ ಸಮಯದಲ್ಲಿ ತರಕಾರಿ, ಹಾಲು, ದಿನಸಿ ಮಾರಾಟ ಕ್ಕೆ ಬೆಳಿಗ್ಗೆ 10 ವರೆಗೆ ಇರುತ್ತದೆ ಈ ಕಠಿಣ ಲಾಕ್ ಡೌನ್ ವೇಳೆಯಲ್ಲಿ ರಂಜಾನ್ , ಬಸವ ಜಯಂತಿ ಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಬೆಂಗಳೂರು, ತುಮಕೂರು ಮೊದಲಾದ ಕಡೆಗಳಿಂದ ಕೊರೊನಾ ಸೋಂಕಿತರು ಜಿಲ್ಲೆಯನ್ನು ಪ್ರವೇಶಿಸುತ್ತಿದ್ದು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಹಾಪ್ ಕಾಮ್ಸ್ ಮೂಲಕ ತಳ್ಳುವ ಗಾಡಿಗಳಲ್ಲಿ ತರಕಾರಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ, ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮ್ಯಾನೇಜ್ ಮಾಡ್ತಾ ಇದ್ದೇವೆ ಎಂದ್ರು. ಇನ್ನು ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ನರೇಗಾ ಅಡಿಯಲ್ಲಿ ಕೆಲಸ ಕೊಡಲಾಗಿದೆ, ನರೇಗಾ ನಿಲ್ಲಿಸಬೇಕಾ ಬೇಡವೇ ಎಂಬುದರ ಬಗ್ಗೆ ಸಿಎಂ ಜೊತೆಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.

VIAರಂಜಾನ್ ಹಬ್ಬಕ್ಕೆ ತೊಂದರೆ ಮಾಡೊಲ್ಲ; ಅವರಿಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ; ಕೆ.ಎಸ್ ಈಶ್ವರಪ್ಪ
SOURCEರಂಜಾನ್ ಹಬ್ಬಕ್ಕೆ ತೊಂದರೆ ಮಾಡೊಲ್ಲ; ಅವರಿಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ; ಕೆ.ಎಸ್ ಈಶ್ವರಪ್ಪ
Previous articleಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ಗೆ ನೋ-ಎಂಟ್ರಿ!
Next articleಲಸಿಕೆಗಾಗಿ ಜನರ ಪರದಾಟ!; ಪ್ರಜಾ ಟಿವಿ ನೇರ ವರದಿ

LEAVE A REPLY

Please enter your comment!
Please enter your name here