Home KARNATAKA ಬೆಂಗಳೂರಿನಲ್ಲಿ ಮನಕಲಕುವ ಘಟನೆ; ಮೂರು ದಿನಗಳಿಂದ ಆಸ್ಪತ್ರೆಗಳಿಗೆ ಅಲೆದು ಅಲೆದು ಜೀವ ಬಿಟ್ಟ ಪೊಲೀಸ್ ಅಧಿಕಾರಿ

ಬೆಂಗಳೂರಿನಲ್ಲಿ ಮನಕಲಕುವ ಘಟನೆ; ಮೂರು ದಿನಗಳಿಂದ ಆಸ್ಪತ್ರೆಗಳಿಗೆ ಅಲೆದು ಅಲೆದು ಜೀವ ಬಿಟ್ಟ ಪೊಲೀಸ್ ಅಧಿಕಾರಿ

465
0
SHARE

ಬೆಂಗಳೂರು. ನಗರದಲ್ಲಿ  ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಕೊರೊನಾಗೆ ಚಿಕಿತ್ಸೆ ಸಿಗದೇ ಸಾವನ್ನಪಿದ್ದಾರೆ..ನಿವೃತ್ತ ಸಬ್ ಇನ್ಸ್ ಪೆಕ್ಟರ್ ಒಬ್ಬರು ಕಳೆದ ಮೂರು ದಿನಗಳಿಂದ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಅಲೆದು ಅಲೆದು ಚಿಕಿತ್ಸೆ ಸಿಗದೆ ಪ್ರಾಣಬಿಟ್ಟಿದ್ದಾರೆ.

ಜ್ವರ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ  67 ವರ್ಷದ ವೃದ್ದ ಪಂಚಾಕ್ಷರಿ ಅವರು ಮೊದಲು ಹೆಬ್ಬಾಳದ ಡಾಕ್ಟರ್ ಓರ್ವರ ಬಳಿ ಚಿಕಿತ್ಸೆ ತೆರಳಿದ್ದಾರೆ ಜ್ಬರ ಇದ್ದುದ್ದರಿಂದ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಹೇಳಿದ್ದಾರೆ.ಅಲ್ಲಿಂದ ವಿಲ್ಸನ್ ಗಾರ್ಡನ್ ಅಗಡಿ ಆಸ್ಪತ್ರೆಗೆ ತೆರಳಿದ್ದಾರೆ.ಅದರೆ ಅಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ ಬಳಿಕವೇ ಚಿಕಿತ್ಸೆ ಎಂದು ಸ್ವಾಬ್ ಪಡೆದು 4,500 ಹಣ ಪಾವತಿಸಿಕೊಂಡಿದ್ದಾರೆ.

ಅನಂತರ ಅಡ್ಮಿಟ್ ಮಾಡಿಕೊಳ್ಳದೇ ವೆಂಟಿಲೇಟರ್ ಇಲ್ಲವೆಂದು ಹೇಳಿ ಚಿಕಿತ್ಸೆಗೆ ನಿರಾಕರಿಸಿದ್ದಾರೆ.ಬಳಿಕ ವೊಕಾರ್ಡ್ ಆಸ್ಪತ್ರೆಗೆ ಅಲ್ಲೂ ಕೂಡ ಚಿಕಿತ್ಸೆ ನೀಡಿಲ್ಲ.ನಂತ್ರ ರಾಜೀವ್ ಗಾಂಧೀ ಆಸ್ಪತ್ರೆ ಮುಂಭಾಗ ಮೂರು ಗಂಟೆಗಳ ಕಾಲ‌ ಕಾಯಿಸಿದ್ದಾರೆ.ದಿಕ್ಕು ತೋಚದೆ ಕಂಗಾಲಾಗಿ ಸೇಂಟ್ ಜಾನ್ಸ್ ಗೆ ತೆರಳಿದ್ದಾರೆ.ಅಲ್ಲೂ ಬೆಡ್ ಗಳಿಲ್ಲವೆಂದ ವೈದ್ಯರು ಚಿಕಿತ್ಸೆ ನೀಡಿಲ್ಲ.ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲೂ ಟ್ರೀಟ್ಮೇಂಟ್ ಸಿಗದೆ ಪ್ರಾಣ ಬಿಟ್ಟಿದ್ದಾರೆ.

 

LEAVE A REPLY

Please enter your comment!
Please enter your name here