Home Crime ಬಯಲಾಯ್ತು ಸ್ಕಾನಿಂಗ್ ಸೆಂಟರ್ ನ ಕರಾಳ ದಂಧೆ!

ಬಯಲಾಯ್ತು ಸ್ಕಾನಿಂಗ್ ಸೆಂಟರ್ ನ ಕರಾಳ ದಂಧೆ!

ಬಯಲಾಯ್ತು ಸ್ಕಾನಿಂಗ್ ಸೆಂಟರ್ ನ ಕರಾಳ ದಂಧೆ

516
0

ವರದಿ: ನಾ.ಅಶ್ವಥ್ ಕುಮಾರ್

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಖಾಸಗಿ ಸ್ಕ್ಯಾನಿಂಗ್ ಸೆಂಟರ್ ವಿರುದ್ಧ ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಹಣ ಪಡೆದ ಆರೋಪ ಕೇಳಿ ಬಂದಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.ಕೊರೊನಾ ಸಂಕಷ್ಟದ ನಡುವೆಯೂ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಸ್ಕ್ಯಾನಿಂಗ್ ಸೆಂಟರ್ ಒಂದು ಹೆಚ್ಚಿನ ಹಣ ಪೀಕುತ್ತಿರುವ ಬಗ್ಗೆ ಸಾರ್ವಜನಿಕರು ಆರೋಪಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಎಂ.ಜಿ.ಎಸ್.ವಿ ಜೂನಿಯರ್ ಕಾಲೇಜು ಬಳಿಯ ಪ್ರಸಾದ್ ಡಯೋಗ್ನಾಸ್ಟಿಕ್ ಸ್ಕ್ಯಾನಿಂಗ್ ಸೆಂಟರ್​​ನಲ್ಲಿ ಸಿ.ಟಿ ಸ್ಕ್ಯಾನಿಂಗ್​ಗೆ ಸರ್ಕಾರ ನಿಗದಿ ಮಾಡಿರುವ ದರಕ್ಕಿಂತ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಸ್ಕ್ಯಾನಿಂಗ್ ಸೆಂಟರ್​ನಿಂದ ಸುಲಿಗೆ ಆರೋಪಸರ್ಕಾರ ಕೋವಿಡ್ ಸಮಯದಲ್ಲಿ ಬಿಪಿಎಲ್ ಕಾರ್ಡ್​ದಾರರಿಗೆ ಸಿಟಿ ಸ್ಕ್ಯಾನಿಂಗ್​ಗೆ 1,500 ರೂ, ಎಪಿಎಲ್ ಕಾರ್ಡ್​ದಾರರಿಗೆ 2,500 ರೂ ಪಡೆಯುವಂತೆ ಸರ್ಕಾರ ಆದೇಶ ಹೊರಡಿಸಿದೆ. ಪ್ರಸಾದ್ ಡಯಾಗ್ನಸ್ಟಿಕ್ ಸ್ಕ್ಯಾನಿಂಗ್ ಸೆಂಟರ್ ಈ ಆದೇಶವನ್ನು ಗಾಳಿಗೆ ತೂರಿದೆ ಎಂದು ಹೇಳಲಾಗ್ತಿದೆ.

ಸ್ಕ್ಯಾನಿಂಗ್ ಮಾಡಿಸಲು ಬಂದಿದ್ದ ಮಹಿಳೆಯೊಬ್ಬರಿಂದ ಸಿ.ಟಿ ಸ್ಕ್ಯಾನ್ ಎಂದು ಬಿಲ್ ಕೊಟ್ಟು 2,500 ರೂ ತೆಗೆದುಕೊಂಡಿದಲ್ಲದೆ, ಇತರ ದರ ಎಂದು‌ 1,500 ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ವೈದ್ಯರನ್ನು ಕೇಳಿದ್ರೆ, ವೈದ್ಯ ಡಾ. ಎಂ.ಬಿ ನಾಗಪ್ರಸಾದ್ ಅವರನ್ನು ಕೇಳಿದ್ರೆ, ಉಡಾಫೆಯ ಉತ್ತರ ನೀಡುತ್ತಿದ್ದು, ಸ್ಯಾನಿಟೈಸ್​ಗಾಗಿ ಹಣ ಪಡೆಯಲಾಗಿದೆ ಎಂದು ಹೇಳುತ್ತಿದ್ದಾರಂತೆ.

ಹೆಚ್ಚಿನ ಹಣ ಪಡೆದಿರುವ ರೋಗಿಗಳಿಂದ ಹಣ ಪೀಕುತ್ತಿದ್ದ ಆಸ್ಪತ್ರೆಗಳಿಗೆ ನೋಟಿಸ್​​​ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ತಹಶೀಲ್ದಾರ್ ಕುನಾಲ್ ಹಾಗೂ ಕೊಳ್ಳೇಗಾಲ ತಾಲೂಕು ವೈದ್ಯಾಧಿಕಾರಿ ಗೋಪಾಲ್ ಸ್ಕ್ಯಾನಿಂಗ್ ಸೆಂಟರ್​ಗೆ ಭೇಟಿ ನೀಡಿ, ವೈದ್ಯ ನಾಗಪ್ರಸಾದ್ ಅವರಿಂದ ಮಾಹಿತಿ ಪಡೆದಿದ್ದಾರೆ. ಅಧಿಕಾರಿಗಳ ಪರಿಶೀಲನೆ ವೇಳೆ ಹೆಚ್ಚಿನ ಹಣ ಅವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ತಹಶೀಲ್ದಾರ್ ‌ಕುನಾಲ್, ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ಮುಂದೆ ಈ ರೀತಿಯ ಘಟನೆ ಮರುಕಳಿಸದಂತೆ ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ಸಮಯದಲ್ಲಿ ಜನರಿಂದ ಹೆಚ್ಚಿನ ಹಣ ವಸೂಲಿ ಮಾಡಬಾರದು, ಸರ್ಕಾರ ನಿಗದಿಪಡಿಸಿದಷ್ಟು ಮಾತ್ರ ಪಡೆಯುವಂತೆ ಖಡಕ್ ಸೂಚನೆ ನೀಡಿದ್ದಾರೆ.ಈ ಬಗ್ಗೆ ತಾಲೂಕು ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಅವಿನಾಶ್ ಮಾತನಾಡಿ, ಸರ್ಕಾರದ ಆದೇಶವನ್ನು ಕೊಳ್ಳೇಗಾಲದ ಪ್ರಸಾದ್ ಡಯಾಗ್ನೋಸ್ಟಿಕ್ ಸೆಂಟರ್ ಗಾಳಿಗೆ ತೂರುತ್ತಿದೆ. ಸಿ.ಟಿ ಸ್ಕ್ಯಾನಿಂಗ್​ಗೆ ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಹಣ ಪಡೆಯಲಾಗುತ್ತಿದೆ. ಇದು ಮರುಕಳಿಸಿದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

VIAಬಯಲಾಯ್ತು ಸ್ಕಾನಿಂಗ್ ಸೆಂಟರ್ ನ ಕರಾಳ ದಂಧೆ
SOURCEಬಯಲಾಯ್ತು ಸ್ಕಾನಿಂಗ್ ಸೆಂಟರ್ ನ ಕರಾಳ ದಂಧೆ
Previous articleಕೊರೋನಾ ನಿಯಂತ್ರಣದಲ್ಲಿ ವಿಫಲವಾಯಿತಾ ಸರ್ಕಾರ?; ಡಿ.ಕೆ.ಸುರೇಶ್ ವಿಶೇಷ ಸಂದರ್ಶನ
Next articleಚಾಮರಾಜನಗರದಲ್ಲಿ ಕೊರೋನಾ ಅಟ್ಟಹಾಸ!

LEAVE A REPLY

Please enter your comment!
Please enter your name here