Home District ನಿಧಿ ಸಂಗ್ರಹಕ್ಕಾಗಿ ಫ್ಯಾಷನ್ ಶೋ!

ನಿಧಿ ಸಂಗ್ರಹಕ್ಕಾಗಿ ಫ್ಯಾಷನ್ ಶೋ!

857
0

ನಿಧಿ ಸಂಗ್ರಹಕ್ಕಾಗಿ ವೃದ್ಧಿ ಪ್ರತಿಷ್ಠಾನದಿಂದ ಫ್ಯಾಷನ್ ಶೋ; ಬಡ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಕೊಡಿಸುವ ಸದುದ್ದೇಶಕ್ಕಾಗಿ ವೃದ್ಧಿ ಪ್ರತಿಷ್ಠಾನವು ನಿಧಿ ಸಂಗ್ರಹಕ್ಕೆ ನಿರ್ಧರಿಸಿದ್ದು, ಇದಕ್ಕಾಗಿ ‘ವೃದ್ಧಿ ದಿವಾ – 2021’ ಎಂಬ ಫ್ಯಾಷನ್ ಶೋ ಏರ್ಪಡಿಸಿದೆ. ‘ನಾನು ನಂಬುತ್ತೇನೆ ನನ್ನಲ್ಲಿ ವಿಶ್ವಾಸವಿದೆ’ ಎಂಬ ಥೀಮ್ ಅಡಿಯಲ್ಲಿ ಈ ಫ್ಯಾಷನ್ ಶೋ ರೂಪಿಸಲಾಗಿದೆ.

ನಗರದಲ್ಲಿ ವೃದ್ಧಿ ಪ್ರತಿಷ್ಠಾನವು ಬಡ ಮಕ್ಕಳ ಶಿಕ್ಷಣಕ್ಕಾಗಿ ನಿಧಿ ಸಂಗ್ರಹಿಸಲು ಆಯೋಜಿಸಿದ್ದ ಸೌಂದರ್ಯ ಸ್ಪರ್ಧೆ ಹಾಗೂ ಫ್ಯಾಷನ್ ಶೋ ‘ವೃದ್ಧಿ ದಿವಾ’ ಕಾರ್ಯಕ್ರಮದಲ್ಲಿ ದಿವ್ಯಾ ವಸಂತ್ ‘ಕ್ವಿನ್ ವೃದ್ಧಿ ದಿವಾ 2021’ರ ಕಿರೀಟ ಮುಡಿಗೇರಿಸಿಕೊಂಡರು. ಈ ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್ ಆಗಿ ನಿಶೀತಾ ತಾಲೇಕರ್ ಹಾಗೂ ಚರ‍್ರಿಲ್ ಬನ್ಸಾಲಿ ಎರಡನೇ ರನ್ನರ್ ಅಪ್ ಆಗಿ ‘ಪ್ರಿನ್ಸೆಸ್ ವೃದ್ಧಿ ದಿವಾ 2021’ರ ವಿಜೇತೆಯಾದರು. ಈ ಫ್ಯಾಷನ್ ಸ್ಪರ್ಧೆಗೆ ವ್ಯಕ್ತಿತ್ವ ವಿಕಸನ, ಗ್ರೂಮಿಂಗ್ ಸೆಷೆನ್ಸ್, ಮತ್ತು ಫ್ಯಾಷನ್ ಕೋರಿಯಾಗ್ರಫಿ ಸೆಷೆನ್ಸ್ ಮೂಲಕ ಆನ್ ಲೈನ್ ಹಾಗೂ ಆಫ್ ಲೈನ್ ನಲ್ಲಿ ಆಡಿಷನ್ ನಡೆಸಲಾಗಿತ್ತು.

ಈ ಕಾರ್ಯಕ್ರಮದ ಆಯೋಜಕರು, ವೃದ್ಧಿ ಪ್ರತಿಷ್ಠಾನದ ನಿರ್ದೇಶಕಿ ಹಾಗೂ ವೆಲ್ ನೆಸ್ ಹೋಲಿಸ್ಟರ್ಸ್ ನ ಸಂಸ್ಥಾಪಕಿ ಅನ್ಷು ಹೆಗಡೆ ಮಾತನಾಡಿ,”ನಿಧಿ ಸಂಗ್ರಹಕ್ಕಾಗಿ ನಾವು ವೈವಿಧ್ಯಮಯ ಕಾರ್ಯಕ್ರಮಗಳನ್ನ ಕೈಗೊಳ್ಳುತ್ತೇವೆ. ಅದೇ ರೀತಿಯಲ್ಲಿ ಈ ಕಾರ್ಯಕ್ರಮವು ಕೂಡಾ ಬಡ ಮಕ್ಕಳ ಶಿಕ್ಷಣಕ್ಕಾಗಿ ಹಣ ಸಂಗ್ರಹಿಸಂಲೆಂದೇ ಆಯೋಜಿಸಲಾಗಿದೆ,” ಎಂದು ತಿಳಿಸಿದರು. ಕಾರ್ಯಕ್ರಮದ ವಿಶೇಷತೆಯೆಂದರೆ ಸೌಲಭ್ಯ ವಂಚಿತ ಶಾಲೆಯ ಮಕ್ಕಳಿಗೆ ವೃದ್ಧಿ ತಂಡವು ರ‍್ಯಾಂಪ್ ವಾಕ್ ಮಾಡುವ ಅವಕಾಶ ಸೃಷ್ಟಿಸಿತ್ತು. ಆಯೋಜಕರು, ಮೇಕಪ್ ಟೀಮ್, ಡಿಸೈನರ್ಸ್ ಮತ್ತು ಫೋಟೋಗ್ರಾಫರ್ ಗಳು ಇದಕ್ಕೆ ಕೈ ಜೋಡಿಸಿದ್ದ ಕಾರಣ ಈ ರ‍್ಯಾಂಪ್ ವಾಕ್ ಸಾಕಷ್ಟು ಆಕರ್ಷಕವಾಗಿ ಮೂಡಿ ಬಂದಿತು.

ಕೋವಿಡ್ ಕಾರಣದಿಂದಾಗಿ ಕಾರ್ಯಕ್ರಮವನ್ನ ಸಾಕಷ್ಟು ಅಚ್ಚುಕಟ್ಟಾಗಿ ನಿರ್ವಹಿಸಿತ್ತು. ಸರ್ಕಾರದ ನಿಯಮಾವಳಿಗಳನ್ನ ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವುದನ್ನ ಆಯೋಜಕರು ಕಡ್ಡಾಯಗೊಳಿಸಿದ್ದರು.ಕಾರ್ಯಕ್ರಮ ಆಯೋಜಿಸಿದ್ದ ವೃದ್ಧಿ ಪ್ರತಿಷ್ಠಾನವು ಅನಾಥ ಹಾಗೂ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಧ್ಯೇಯವನ್ನ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ. ಹಾಗೆಯೇ ಮಹಿಳೆ ಮತ್ತು ಮಕ್ಕಳನ್ನ ಸ್ವತಂತ್ರವಾಗಿ ಬದುಕು ರೂಪಿಸಿಕೊಳ್ಳುವಂತೆ ಮಾಡುವುದು ಅವರ ಪ್ರತಿಷ್ಠಾನದ ಕಾರ್ಯಯೋಜನೆಯಾಗಿದೆ.

ಕಾರ್ಯಕ್ರಮದಲ್ಲಿ ವೃದ್ಧಿ ತಂಡದ ಸುನೀತಾ ಗೋಯೆಲ್, ಸಾರಿಕಾ ಗೋಯೆಲ್, ಶ್ವೇತಾ ಕಿರಣ್, ಮೇನಕಾ ಮಾನ್ವಿ ಮತ್ತು ಸಿ ಪಿ ಲಕ್ಷ್ಮೀ ಭಾಗವಹಿಸಿದ್ದರು.

Previous articleಡಿಕೆಶಿ ಸುದ್ದಿಗೋಷ್ಠಿ; ಸರ್ಕಾರದ ನೀತಿಧೋರಣೆಯ ಕುರಿತು ಡಿಕೆಶಿ ಹೇಳಿದ್ದೇನು?
Next articleಚುನಾವಣೆ ನಂತರ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಪಕ್ಷದಿಂದ ಹೊರ ಹಾಕಲಾಗುತ್ತದೆ; ನಳೀನ್ ಕುಮಾರ್ ಕಟೀಲ್ ಭವಿಷ್ಯ

LEAVE A REPLY

Please enter your comment!
Please enter your name here