ಸ್ಯಾಂಡಲ್‌ವುಡ್ ‘ಉಪ್ಪಿನಕಾಯಿ’ಯ ಮೇಲೆ FIR!

ಸ್ಯಾಂಡಲ್‌ವುಡ್ ‘ಉಪ್ಪಿನಕಾಯಿ’ಯ ಮೇಲೆ FIR!

565
0

ಸ್ಯಾಂಡಲ್‌ವುಡ್ ‘ಉಪ್ಪಿನಕಾಯಿ’ಯ ಮೇಲೆ ಎಫ್‌ಐಆರ್: ಇದೇ ಗುರುವಾರ ಸಂಜನಾ ಗಲ್ರಾನಿ ವಿಚಾರಣೆ..!

ಬೆಂಗಳೂರು- ಡ್ರಗ್ ಕೇಸ್‌ನಿಂದ ಹೊರಬಂದಿದ್ದ ನಟಿ ಸಂಜನಾ ಗಲ್ರಾನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸಿನಿಮಾ ನಿರ್ಮಾಪಕಿ ವಂದನಾ ಜೈನ್ ಮೇಲೆ ವಿಸ್ಕಿ ಎರಚಿ ಆಕೆಯ ಕಣ್ಣಿಗೆ ಹಾನಿ ಮಾಡಿದ್ದರ ಸಂಬಂಧ ಐಪಿಸಿ ಸೆಕ್ಷನ್ 326 A, 335, 323, 504 ಅಡಿ ಎಫ್ ಐ ಆರ್ ದಾಖಲಾಗಿದೆ. 2019 ಡಿಸೆಂಬರ್ 24 ರಂದು ಲಾವೆಲ್ಲಿ ರಸ್ತೆಯ ಪಬ್‌ವೊಂದರಲ್ಲಿ ನಡೆದ ಗಲಾಟೆಯಲ್ಲಿ ಸಂಜನಾ ಹಾಗೂ ವಂದನಾ ಜೈನ್ ಪರಸ್ಪರ ಕಿತ್ತಾಡಿಕೊಂಡಿದ್ದರು.

ಮಾತಿನಲ್ಲಿ ಶುರುವಾದ ಜಗಳ ಕೈಕೈ ಮಿಲಾಯಿಸೋದ್ರಲ್ಲಿ ಕೊನೆಗೊಂಡಿತ್ತು. ಗಲಾಟೆಯ ನಂತರ ಆಸ್ಪತ್ರೆಗೆ ದಾಖಲಾಗಿದ್ದ ನಿರ್ಮಾಪಕಿ ವಂದನಾ ಜೈನ್, ಈದೀಗ ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ಕಬ್ಬನ್ ಪಾರ್ಕ್ ಪೋಲಿಸ್ ಠಾಣೆಯಲ್ಲಿ ಮತ್ತೊಮ್ಮೆ ದೂರು ದಾಖಲಿಸಿದ್ದಾರೆ. ಇದೇ ಗುರುವಾರ ಸಂಜನಾರನ್ನ ಹೆಚ್ಚಿನ ವಿಚಾರಣೆಗೆ ಕರೆಯುವ ಸಾಧ್ಯತೆಗಳಿವೆ.

VIAಸ್ಯಾಂಡಲ್‌ವುಡ್ ‘ಉಪ್ಪಿನಕಾಯಿ’ಯ ಮೇಲೆ FIR!
SOURCEಸ್ಯಾಂಡಲ್‌ವುಡ್ ‘ಉಪ್ಪಿನಕಾಯಿ’ಯ ಮೇಲೆ FIR!
Previous articleಕುರಿ ಹಟ್ಟಿ ಮೇಲೆ ಚಿರತೆಗಳು ದಾಳಿ; ಕುರಿಮರಿಗಳ ಮಾರಣಹೋಮ!
Next articleಲಾಕ್ ಡೌನ್ ವಿಸ್ತರಣೆ; ಕುತೂಹಲ ಮೂಡಿಸಿದ ಸರ್ಕಾರದ ನಿರ್ಧಾರ

LEAVE A REPLY

Please enter your comment!
Please enter your name here