Home District ಗ್ಯಾಸ್ ಅವಾಂತರ; ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸಂಪೂರ್ಣವಾಗಿ ಅಗ್ನಿಗೆ ಆಹುತಿ

ಗ್ಯಾಸ್ ಅವಾಂತರ; ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸಂಪೂರ್ಣವಾಗಿ ಅಗ್ನಿಗೆ ಆಹುತಿ

366
0

ವರದಿ: ಅರುಣ್ ಕುಮಾರ್ ಕದಂ

ಕಲಬುರ್ಗಿ ಬ್ರೇಕಿಂಗ್; ಪಕ್ಕದ ಮನೆಯವರ ಗ್ಯಾಸ್ ಬಳಸಲು ಹೋಗಿ ಮನೆಗೇ ಬೆಂಕಿ ಹತ್ತಿದ ಘಟನೆ ಕಲಬುರ್ಗಿಯಲ್ಲಿ ನಡೆದಿದೆ. ಗ್ಯಾಸ್ ಸೋರಿಕೆಯಾಗಿ ಬೆಂಕಿ ಹತ್ತಿ ಮನೆ ಸುಟ್ಟು ಕರಕಲಾಗಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಸಂಕನೂರ ಗ್ರಾಮದಲ್ಲಿ ನಡೆದ ಘಟನೆ. ಫಾತಿಮಾ ಎನ್ನುವ ಚಿಕನ್ ವ್ಯಾಪಾರಿಯ ಮನೆ. ನಗದು, ಧವಸ ಧಾನ್ಯ ಸಂಪೂರ್ಣವಾಗಿ ಅಗ್ನಿಗೆ ಆಹುತಿ. ಬೆಂಕಿ ಹತ್ತಿಕೊಂಡ ತಕ್ಷಣ ಮನೆ ಬಿಟ್ಟು ಹೊರಹೋಗಿ ಬದುಕಿಕೊಂಡ ಮಹಿಳೆ.

ಪಕ್ಕದ ಮನೆಯವರು ಊರಿಗೆ ಹೋಗುವಾಗ ಫಾತಿಮಾಗೆ ಬಳಸಲು ತಮ್ಮ ಗ್ಯಾಸ್ ಕೊಟ್ಟಿದ್ದರು. ಗ್ಯಾಸ್ ಲೀಕೆಜ್ ಆಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸಿಲಿಂಡರ್ ಸಹ ಸ್ಪೋಟ. ಮನೆ ಕಟ್ಟಲು ಅಂತ ಈ ಮಹಿಳೆ ಕೂಡಿಟ್ಟಿದ್ದ ಎರಡು ಲಕ್ಷ ರೂ. ನಗದು ಬೆಂಕಿಗಾಹುತಿ. ಅರ್ಧಭಾಗ ಸುಟ್ಟು ಕರಕಲಾದ ನೂರಾರು ನೋಟುಗಳು ಬೆಂಕಿಗಾಹುತಿಯಾದ ಮನೆಯಲ್ಲಿ ಪತ್ತೆ. 9 ಕೋಳಿಗಳು, ಫ್ರಿಡ್ಜ್, ಧವಸಧಾನ್ಯ, ಬಟ್ಟೆ ಬರೆ ಸೇರಿ ಒಂದು ಲಕ್ಷ ಎಂಬತ್ತು ಸಾವಿರ ರೂ. ವಸ್ತುಗಳು ಬೆಂಕಿಗಾಹುತಿ. ಈ ಕುರಿತು ಚಿತ್ತಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

Previous articleಸ್ನೇಹಿತರೊಡನೆ ನದಿ ಬಳಿ ಹೋಗಿದ್ದ ಕಾರ್ಮಿಕ ಕಾಲು ಜಾರಿ ಬಿದ್ದು ಸಾವು; ಶಿವನ ಸಮುದ್ರ ಬಳಿ ನಡೆದ ದುರ್ಘಟನೆ
Next articleಬಿಜೆಪಿಗೆ ನೇರ ಬೆಂಬಲ ನೀಡುವ ಕುರಿತು ‘ಲಖನ್ ಜಾರಕಿಹೊಳಿ’ ಹೇಳಿದ್ದೇನು?

LEAVE A REPLY

Please enter your comment!
Please enter your name here