ಹೆಂಡತಿಗಾಗಿ ಫುಡ್ ಡೆಲಿವರಿ ಬಾಯ್ ಆದ ನಿರ್ಮಾಪಕ ರವೀಂದರ್ ಚಂದ್ರಶೇಖರನ್

ಚಲನಚಿತ್ರ

ತಮಿಳು ನಟಿ ಹಾಗೂ ನಿರೂಪಕಿ ಮಹಾಲಕ್ಷ್ಮೀ ಹಾಗೂ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಮದುವೆಯಾದ ಬಳಿಕ ಸಖತ್ ಸುದ್ದಿಯಾಗ್ತಿದ್ದಾರೆ. ಈ ಜೋಡಿಗಳು ಹೋದಲ್ಲಿ ಬಂದಲ್ಲೆಲ್ಲಾ ಸದ್ದು ಮಾಡುತ್ತಿದ್ದುಇದೀಗ ಪತ್ನಿಯಾಗಿ ತಾನು ಫುಡ್ ಡೆಲಿವರಿ ಬಾಯ್ ಆದ ಕಥೆಯನ್ನು ರವೀಂದರ್ ಹೇಳಿಕೊಂಡಿದ್ದಾರೆ.

ಮಹಾಲಕ್ಷ್ಮಿ ಅವರನ್ನು ಮದುವೆಯಾದ ಬಳಿಕ ನಿರ್ಮಾಪಕ ರವೀಂದರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ತಾವು ಅನುಭವಿಸುತ್ತಿರುವ ಒಂದೊಂದೇ ಮಧುರ ಕ್ಷಣಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಮಹಾಲಕ್ಷ್ಮಿ ಅವರನ್ನು ಮದುವೆಯಾದ ನಂತರ ಅವರ ಬದುಕಿನಲ್ಲಿ ಆದ ಬದಲಾವಣೆಗಳನ್ನೂ ಅವರು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ.

ಪತ್ನಿ ಮಹಾಲಕ್ಷ್ಮಿ ಭಾನುವಾರದಂದು ಶೂಟಿಂಗ್ ಗಾಗಿ ತೆರಳಿದ್ದರಂತೆ. ಅಲ್ಲದೇ, ಏನೆಲ್ಲ ತಮಗೆ ಊಟ ಕಳುಹಿಸಬೇಕು ಎಂಬುದನ್ನು ಹೇಳಿಹೋಗಿದ್ದರಂತೆ. ಊಟ ಆರ್ಡರ್ ಮಾಡಿ ಕಳುಹಿಸಬಹುದಿತ್ತು. ಆದರೆ, ನಾನೇ ಶೂಟಿಂಗ್ ಸ್ಪಾಟ್ ಗೆ ಅಡುಗೆ ತಗೆದುಕೊಂಡು ಹೋಗಿದ್ದೆ. ಅದೊಂದು ರೀತಿಯಲ್ಲಿ ಅನುಭವ ವಿಭಿನ್ನವಾಗಿತ್ತು. ಭಾನುವಾರದಂದು ಸಾಮಾನ್ಯವಾಗಿ ನಾನ್ ವೆಜ್ ಇರತ್ತೆ. ನನ್ನ ತಾಯಿ ಹೆಂಡತಿಗಾಗಿ ವೆಜ್ ಮಾಡಿದ್ದಳು ಎಂದು ರವೀಂದರ್ ಚಂದ್ರಶೇಖರನ್ ಬರೆದುಕೊಂಡಿದ್ದಾರೆ.

ಊಟ ತಗೆದುಕೊಂಡು ಹೋದ ಬಟ್ಟಲು, ಡಬ್ಬಿಗಳನ್ನು ವಾಪಸ್ಸು ತರುವಂತೆ ಹೆಂಡತಿಗೆ ಕೇಳಿಕೊಂಡಿದ್ದಾರೆ. ಅವುಗಳಿಗಾಗಿ ಅತ್ತೆ ಕಾಯುತ್ತಿರುತ್ತಾರೆ. ಯಾವುದೇ ಕಾರಣಕ್ಕೂ ಮಿಸ್ ಮಾಡದೇ ಎಲ್ಲವನ್ನೂ ತಗೆದುಕೊಂಡು ಬಾ ಎಂದು ಸೋಷಿಯಲ್ ಮೀಡಿಯಾ ಮೂಲಕವೇ ಹೆಂಡತಿಗೆ ಹೇಳಿದ್ದಾರೆ. ಆ ಒಂದು ದಿನ ಹೆಂಡತಿಗಾಗಿ ಫುಡ್ ಡೆಲಿವರಿ ಬಾಯ್ ಆದ ಅನುಭವನ್ನು ರವೀಂದರ್ ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

ಈ ಹಿಂದೆ ಹೆಂಡತಿಯನ್ನು ತಮ್ಮ ಮನೆದೇವರಿಗೆ ಕರೆದುಕೊಂಡು ಹೋಗಿದ್ದರು. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಲ್ಲದೇ, ಹೆಂಡತಿಯೊಂದಿಗೆ ರೆಸಾರ್ಟ್ ನಲ್ಲಿ ಕಳೆದ ಕ್ಷಣಗಳನ್ನೂ ಅವರು ಫೋಟೋಗಳ ಸಮೇತ ತಿಳಿಸಿದ್ದರು.