ನಾಲ್ಕು ದೇಶಗಳಲ್ಲಿರುವ ಉಕ್ರೇನ್ ರಾಯಭಾರಿಗಳನ್ನು ವಜಾಗೊಳಿಸಿದ ಝೆಲೆನ್ಸ್ಕೀ..!

ಅಂತರಾಷ್ಟ್ರೀಯ

ಕೀವ್:  ಉನ್ನತ ಅಧಿಕಾರಿಗಳನ್ನು ತನಿಖೆಗಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅಮಾನತುಗೊಳಿಸಿದ್ದಾರೆ. ರಷ್ಯಾ ಮತ್ತು ಉಕ್ರೇನ್‌ ನಡುವೆ ಕಳೆದ ಮೂರು ತಿಂಗಳಿಂದ ಭೀಕರವಾಗಿ ಯುದ್ಧ ನಡೆಯುತ್ತಿದೆ. ಈ ವೇಳೆ ತಮ್ಮ ದೇಶದಲ್ಲಿಯೇ ಇದ್ದು, ರಷ್ಯಾಗೆ ಸಹಾಯ ಮಾಡುತ್ತಿದ್ದ ಅಧಿಕಾರಗಳ ವಿರುದ್ಧ ಝೆಲೆನ್ಸ್ಕಿ ಅವರು ಕ್ರಮ ತೆಗೆದುಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಅಧ್ಯಕ್ಷೀಯ ಕಚೇರಿಯ ಉಪ ಮುಖ್ಯಸ್ಥ ಆಂಡ್ರಿ ಸ್ಮಿರ್ನೋವ್ ಅವರನ್ನು ಅಮಾನತು ಮಾಡಲಾಗಿದೆ.

ಐರಿನಾ ವೆನೆಡಿಕ್ಟೋವಾ ಅವರನ್ನು ಸಹ ಪ್ರಾಸಿಕ್ಯೂಟರ್ ಜನರಲ್‍ನಿಂದ ತೆಗೆದುಹಾಕಲಾಗಿದೆ. ಇವರು ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಸುಳಿವು ನಮಗೆ ಸಿಕ್ಕಿದೆ. ಈ ಕುರಿತು ಸಂಪೂರ್ಣವಾಗಿ ತನಿಖೆಯಾಗುವವರೆಗೂ ಅವರನ್ನು ಅಮಾನತು ಮಾಡಲಾಗಿದೆ ಎಂದು ವಿವರಿಸಿದರು. ಅಧ್ಯಕ್ಷರ ಹಿರಿಯ ಸಹಾಯಕ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಅಧ್ಯಕ್ಷೀಯ ಕಚೇರಿಯ ಉಪ ಮುಖ್ಯಸ್ಥ ಆಂಡ್ರಿ ಸ್ಮಿರ್ನೋವ್,

ವೆನೆಡಿಕ್ಟೋವಾ ಅವರನ್ನು ಅಮಾನತುಗೊಳಿಸಲಾಗಿದೆ. ಬಕಾನೋವ್ ಅವರನ್ನು ತಮ್ಮ ಕರ್ತವ್ಯಗಳನ್ನು ಪೂರೈಸುವುದರಿಂದ ತಾತ್ಕಾಲಿಕವಾಗಿ ತೆಗೆದುಹಾಕಲಾಗಿದೆ. ಆದರೆ ವಜಾಗೊಳಿಸಲಾಗಿಲ್ಲ ಎಂದು ಸ್ಪಷ್ಟನೆ ಕೊಟ್ಟರು. ತನಿಖೆ ವೇಳೆ ಅವರನ್ನು ದೋಷಮುಕ್ತಗೊಳಿಸಿದರೆ ಇಬ್ಬರು ಅಧಿಕಾರಿಗಳು ತಮ್ಮ ಉದ್ಯೋಗಗಳಿಗೆ ಮರಳಬಹುದೇ ಎಂದು ಕೇಳಿದಾಗ, ನಾವು ಕಾನೂನು ಪಾಲಿಸುವ ದೇಶದಲ್ಲಿ ವಾಸಿಸುತ್ತಿದ್ದೇವೆ. ಖಂಡಿತವಾಗಿ ಸಾಧ್ಯವಾಗುತ್ತೆ. ಈ ಬಗ್ಗೆ ನಾನು ಊಹಿಸಬಲ್ಲೆ ಎಂದು ಉತ್ತರಿಸಿದರು.

Leave a Reply

Your email address will not be published.