ಪದೇ ಪದೇ ಬೆರಳುಗಳಿಂದ ನೆಟ್ಟಿಗೆ ತೆಗೆಯುವ ಅಭ್ಯಾಸ ಅಪಾಯಕಾರಿ..! ಯಾಕೆ ಗೊತ್ತಾ..?

ಲೈಫ್ ಸ್ಟೈಲ್

ಬೆರಳಿನ ನೆಟ್ಟಿಗೆ ತೆಗೆಯುವುದೆಂದರೆ ಕೆಲವರಿಗೆ ಇನ್ನಿಲ್ಲದ ಖುಷಿ. ಕೆಲವರು ಆಗಾಗ ಬೆರಳುಗಳನ್ನು ಮಡಚಿ ನೆಟ್ಟಿಗೆ ತೆಗೆಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಂತೂ ಆಗಾಗ ನೆಟ್ಟಿಗೆ ತೆಗೆಯುತ್ತಲೇ ಇರುತ್ತಾರೆ. ಈ ರೀತಿಯಾಗಿ ನೆಟ್ಟಿಗೆ ತೆಗೆಯುವುದು ಅನಾರೋಗ್ಯಕ್ಕೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.

ಪದೇ ಪದೇ ನೆಟ್ಟಿಗೆ ತೆಗೆಯುವುದರಿಂದ ಮೂಳೆಗೆ ಸಂಬಂಧಿಸಿದ ಅನಾರೋಗ್ಯ ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ನೆಟ್ಟಿಗೆ ತೆಗೆಯುವುದು ಅಭ್ಯಾಸವಾಗಿಬಿಟ್ಟರೆ, ಪದೇ ಪದೇ ನೆಟ್ಟಿಗೆ ತೆಗೆಯುತ್ತಲೇ ಇರುತ್ತೇವೆ. ಹೀಗೆ ಮಾಡುವುದು ಅಪಾಯಕಾ ರಿಯಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.ತಜ್ಞರು ಹೇಳುವಂತೆ, ಪದೇ ಪದೇ ನೆಟ್ಟಿಗೆ ತೆಗೆಯುವುದರಿಂದ ಆರ್ಥರೈಟಿಸ್ ಸಮಸ್ಯೆಗಳು ಹೆಚ್ಚಾಗುತ್ತಂತೆ.

ದೇಹದ ಕೀಲುಗಳಲ್ಲಿ ಒಂದು ದ್ರವವಿರುತ್ತದೆ. ನಾವು ಬೆರಳುಗಳನ್ನು ಮಡಚಿ ನೆಟ್ಟಿಗೆ ತೆಗೆಯುವಾಗ ಈ ದ್ರವವು ಅನಿಲವು ಬಿಡುಗಡೆಯಾಗುತ್ತದೆ. ಇದರಿಂದಾಗಿ ಅದರೊಳಗೆ ರೂಪುಗೊಂಡ ಗುಳ್ಳೆಗಳು ಸಹ ಸಿಡಿಯುತ್ತದೆ. ಈ ಗುಳ್ಳೆಗಳು ಸಿಡಿದಾಗ ನಮಗೆ ಶಬ್ಧ ಕೇಳಿಸುತ್ತದೆ ಎನ್ನುತ್ತಾರೆ. ನಮ್ಮ ಸಂಧಿಗಳು ಅನೇಕ ಬಾರಿ ಶಬ್ಧ ಮಾಡುತ್ತಿರುತ್ತದೆ. ಕೆಲವೊಮ್ಮೆ ನಾವು ವೇಗವಾಗಿ ನಡೆಯುವಾಗ, ಓಡುವಾಗ,  ಆಟವಾಡುವಾಗಲೂ ಈ ರೀತಿಯ ಶಬ್ದಗಳು ಬರಬಹುದು.

ದೀರ್ಘ ಕಾಲದ ವರೆಗೆ ಈ ರೀತಿಯಾಗಿ ನೆಟ್ಟಿಗೆ ತೆಗೆಯುವ ಅಭ್ಯಾಸ ಇದ್ದರೆ, ನಮ್ಮ ಕೈಗಳ ಬಲದ ಮೇಲೆ ಪರಿಣಾಮ ಬೀರುತ್ತದೆ. ಕೈಯಲ್ಲಿ ಊತ ಉಂಟಾಗುವುದು ಮತ್ತು ಬೆರಳುಗಳು ಸೆಟೆದುಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ. ಬೆರಳುಗಳ ನೆಟ್ಟಿಗೆ ತೆಗೆಯುವಾಗ ಹೆಚ್ಚು ನೋವು ಕಾಣಿಸಿಕೊಳ್ಳದಿದ್ದರೆ, ಹೆಚ್ಚು ಸಮಸ್ಯೆಗಳೇನು ಇಲ್ಲ. ಆದರೆ, ಬೆರಳಲ್ಲಿ ನೋವು ಕಾಣಿಸಿಕೊಂಡರೆ, ತಕ್ಷಣವೇ ಈ ನೆಟ್ಟಿಗೆ ತೆಗೆಯುವ ಅಭ್ಯಾಸವನ್ನು ಬಿಟ್ಟು ಬಿಡುವುದು ಉತ್ತಮ ಎಂದು ತಜ್ಞರು ಹೇಳುತ್ತಿದ್ದಾರೆ.

Leave a Reply

Your email address will not be published.