ಕೋವಿಡ್ ಆಸ್ಪತ್ರೆಯಲ್ಲಿ ಸುಗಮ ಸಂಗೀತ ಕಾರ್ಯಕ್ರಮ!

ಕೋವಿಡ್ ಆಸ್ಪತ್ರೆಯಲ್ಲಿ ಸುಗಮ ಸಂಗೀತ ಕಾರ್ಯಕ್ರಮ!

373
0

ಕೋವಿಡ್ ಹೆಲ್ತ್ ಕೇರ್ ಸೆಂಟರ್ ನಲ್ಲಿ ಸೋಂಕಿತರ ಮನರಂಜನೆಗಾಗಿ ಪಿ.ಎಸ್. ಐ. ಸುಗಮ ಸಂಗೀತ ಹಾಡಿ ರಂಜಿಸಿದ ಘಟನೆ ಕೆ. ಆರ್.ಪೇಟೆ ಪಟ್ಟಣದ ಹೊಸಹೊಳಲು ಗ್ರಾಮದ ಬಿಸಿಎಂ ವಿದ್ಯಾರ್ಥಿ ನಿಲಯ ದಲ್ಲಿರುವ ಕೋವಿಡ್ ಸೆಂಟರ್‌ನಲ್ಲಿಂದು ಜರುಗಿತು.ಒಳಿತು ಮಾಡು ಮನುಷ ನೀ ಇರೋದು ಮೂರು ದಿವಸ ಹಾಡನ್ನು ಹಾಡಿ ರಂಜಿಸುವ ಮೂಲಕ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ ಉದ್ಘಾಟನೆ ನೇರವೇಇಸಿದ್ರು.

ಸಂಗೀತಕ್ಕೆ ನೋವನ್ನು ಮರೆಸಿ ಸಂತೋಷ ನೀಡುವ ಶಕ್ತಿಯಿದೆ. ಆದ್ದರಿಂದ ಕೋವಿಡ್ ಸೋಂಕಿತರಲ್ಲಿ ಆತ್ಮವಿಶ್ವಾಸ ತುಂಬಲು ಸಚಿವರ ನಿರ್ದೇಶನದಂತೆ ಸಂಗೀತ ಕಛೇರಿ ಆಯೋಜಿಸಲಾಗಿದೆ ಎಂದು ತಹಶೀಲ್ದಾರ್ ಶಿವಮೂರ್ತಿ. ಸೋಂಕಿತರು ತಿಳಿಸಿದರು.
ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಕೆ.ದೀಪಕ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿ ಕಾರಿ ಡಾ. ಎಂ.ಎಸ್.ಜಯಂತ್ ಸೋಂಕಿತರಲ್ಲಿ ಆತ್ಮವಿಶ್ವಾಸ ತುಂಬುವ ಮಾತನಾಡಿದರು. ಕೋವಿಡ್ ನಿಯಮಗಳನ್ನು ಪಾಲಿಸಿ ಎಚ್ಚರಿಕೆಯಿಂದ ಸೋಂಕನ್ನು ಗುಣಪಡಿಸಿ ಕೊಂಡು ನಗುನಗುತ್ತಾ ಮನೆಗೆ ತೆರಳಿ ಸಂತೋಷದಿಂದ ಜೀವನ ನಡೆಸಬೇಕು ಎಂದು ಮನವಿ ಮಾಡಿದರು.

ಪುರಸಭೆಯ ಸದಸ್ಯ ಹೆಚ್.ಆರ್.ಲೋಕೇಶ್, ಮುಖ್ಯಾಧಿಕಾರಿ ಸತೀಶ್ ಕುಮಾರ್, ಸಚಿವರ ಆಪ್ತಸಹಾಯಕರಾದ ದಯಾನಂದ, ಮುಖಂಡರಾದ ನಂಜುಂಡ, ಮಿತ್ರಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.ರವಿಕುಮಾರ್ ನೇತೃತ್ವದ ಗಾಯಕರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿ ಸೋಂಕಿತರಲ್ಲಿ ಆತ್ಮವಿಶ್ವಾಸ ತುಂಬಿದರು.

VIAಕೋವಿಡ್ ಆಸ್ಪತ್ರೆಯಲ್ಲಿ ಸುಗಮ ಸಂಗೀತ ಕಾರ್ಯಕ್ರಮ!
SOURCEಕೋವಿಡ್ ಆಸ್ಪತ್ರೆಯಲ್ಲಿ ಸುಗಮ ಸಂಗೀತ ಕಾರ್ಯಕ್ರಮ!
Previous articleಹೋಂ ಐಸೋಲೇಷನ್ ನಲ್ಲಿರುವ ಸೋಂಕಿತರನ್ನು ಕೋವಿಡ್ ಕೇರ್ ಗೆ ಕರೆತರಲು ನಿರ್ಧಾರ
Next articleಇಂದು ಚಾಮರಾಜನಗರ ಜಿಲ್ಲೆಯಲ್ಲಿ 343 ಕೋರೊನಾ ದೃಡ; 08ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ದುರ್ಮರಣ

LEAVE A REPLY

Please enter your comment!
Please enter your name here