ಲೈಂಗಿಕ ದೌರ್ಜನ್ಯ ಪ್ರಕರಣ: ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯಗೆ ಜಾಮೀನು

ಚಲನಚಿತ್ರ

ಕಳೆದ ಎರಡು ವರ್ಷದಿಂದ ಲೈಂಗಿಕ ಕಿರುಕುಳದ ಆರೋಪ ಏದುರಿಸುತ್ತಿದ್ದ ಬಾಲಿವುಡ್ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಅವರಿಗೆ ಜಾಮೀನು ಸಿಕ್ಕಿದೆ. ಮುಂಬೈನ ಮೆಜೆಸ್ಟ್ರೇಟ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಗಣೇಶ್ ಆಚಾರ್ಯ ವಿರುದ್ಧ 2020ರಲ್ಲಿ ಅವರ ಸಹ ನೃತ್ಯಗಾರ್ತಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

2009-10ರಲ್ಲಿ ಗಣೇಶ್ ಆಚಾರ್ಯ ತನ್ನನ್ನು ಅವರ ಕಚೇರಿಯಲ್ಲಿ ಭೇಟಿಯಾಗುವಂತೆ ಹೇಳಿದ್ದರು. ಭೇಟಿಯಾಗಲು ಹೋದಾಗಲೆಲ್ಲ ಅಶ್ಲೀಲ ವಿಡಿಯೋಗಳನ್ನು ನೋಡುವಂತೆ ಒತ್ತಾಯಸುತ್ತಿದ್ದರು ಎಂದು  ದೂರುದಾರೆ ಗಣೇಶ್ ಆಚಾರ್ಯ ವಿರುದ್ಧ ಗಂಭೀರ ಆರೋಪ ಮಾಡಿದ್ದರು.

2022ರ ಏಪ್ರಿಲ್ ನಲ್ಲಿ ಮುಂಬೈ ಪೊಲೀಸರ್ ಗಣೇಶ್ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಆದರೆ ಈ ಪ್ರಕರಣದಲ್ಲಿ ಗಣೇಶ್ ಆಚಾರ್ಯ ಅವರನ್ನು ಇದುವರೆಗೂ ಬಂಧಿಸಿಲ್ಲ. ಗುರುವಾಗ (ಜೂನ್ 23) ಗಣೇಶ್ ಆಚಾರ್ಯ ಅವರನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಜಾಮೀನು ಮಂಜೂರು ಮಾಡಲಾಗಿದೆ.

ಗಣೇಶ್ ಆಚಾರ್ಯ ನನ್ನನ್ನು ಕೆಟ್ಟ ರೀತಿಯಲ್ಲಿ ಮುಟ್ಟಿದ್ದು, ನೀಲಿ ಚಿತ್ರಗಳನ್ನು ಬಲವಂತದಿಂದ ತೋರಿಸುತ್ತಿದ್ದರು. 2019 ರಲ್ಲಿ ತನ್ನ ಜೊತೆ ಲೈಂಗಿಕ ಸಂಪರ್ಕ ಬೆಳೆಸುವಂತೆ ಗಣೇಶ್ ಆಚಾರ್ಯ ಕೇಳಿದ್ದು ಇದಕ್ಕೆ ನಾನು ಒಪ್ಪದಿದ್ದಾಗ ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆಯಬೇಕೆಂದರೆ ಇದನ್ನೆಲ್ಲಾ ಮಾಡಬೇಕು ಎಂದು ಗಣೇಶ್ ಆಚಾರ್ಯ ಹೇಳಿದ್ದರು. ಅಲ್ಲದೆ  ‘ಗಣೇಶ್ ಆಚಾರ್ಯರ ಸಹಾಯಕಿಯರು ನನ್ನನ್ನು ಹಿಗ್ಗಾ ಮುಗ್ಗಾ ಹೊಡೆದಿದ್ದರು. ಅವಾಚ್ಯವಾಗಿ ನಿಂದಿಸಿದರು.

ನಂತರ ನಾನು ಪೊಲೀಸ್ ಠಾಣೆಗೆ ಹೋದಾಗ ಸಹ ನನ್ನ ದೂರನ್ನು ಸೂಕ್ತ ರೀತಿಯಲ್ಲಿ ಪೊಲೀಸರು ಸ್ವೀಕರಿಸಲಿಲ್ಲ. ಬಳಿಕ ನಾನು ವಕೀಲರ ಸಹಾಯದಿಂದ ಪ್ರಕರಣ ದಾಖಲಿಸಿದೆ’ ಎಂದು ನೃತ್ಯಗಾರ್ತಿ ಆರೋಪಿಸಿದ್ದಾರೆ. ‘ಗಣೇಶ್ ಆಚಾರ್ಯ ಬೇಡಿಕೆಗೆ ನಾನು ಒಪ್ಪದೇ ಹೋದಾಗ, ಭಾರತೀಯ ಸಿನಿಮಾ ಮತ್ತು ಟಿವಿ ಕೊರಿಯೋಗ್ರಾಫರ್ ಸಂಘದಿಂದ ನನ್ನನ್ನು ತೆಗೆದು ಹಾಕಲಾಯಿತು. ನನಗೆ ಬೆದರಿಕೆಗಳನ್ನು ಸಹ ಹಾಕಲಾಯಿತು’ ಎಂದು ನೃತ್ಯಗಾರ್ತಿ ದೂರಿನಲ್ಲಿ ಉಲ್ಲೇಖಿಸಿದ್ದರು.

Leave a Reply

Your email address will not be published.