Home KARNATAKA ಗಣಪನಿಗೂ ಕೊರೊನಾ ಶಾಕ್…? ಮೂರ್ತಿ ತಯಾರಿಕೆಗೆ ನೋ..ಆರ್ಡರ್….ವರ್ಷದ ಶ್ರಮ ವ್ಯರ್ಥ…?

ಗಣಪನಿಗೂ ಕೊರೊನಾ ಶಾಕ್…? ಮೂರ್ತಿ ತಯಾರಿಕೆಗೆ ನೋ..ಆರ್ಡರ್….ವರ್ಷದ ಶ್ರಮ ವ್ಯರ್ಥ…?

568
0
SHARE

ಬೆಂಗಳೂರು. ಕೆಲವು ಜನರು ಜೀವನ ಸಾಗಿಸಲು ತಮ್ಮ ತಮ್ಮಲ್ಲಿರುವ ಕಲೆಗಳ ಮುಖಾಂತರ ಸ್ವತಃ ತಾವೇ ಆದಾಯದ ಮೂಲ ಹುಡಕಿಕೊಳ್ಳುತ್ತಾರೆ. ಅದೇ ರೀತಿ ವಿಗೃಹ ತಯಾರು ಮಾಡುವುದು ಒಂದು ಉತ್ತಮ ಕಲೆ ಈ ಕಲೆಯಿಂದ ಸಾಕಷ್ಟು ಜನ ತಮ್ಮ ಜೀವನ ರೂಪಿಸಿಕೊಂಡ್ಡಿದ್ದಾರೆ. ಸದ್ಯ ಗಣೇಶ ಚತುರ್ಥಿಗೆ ಕೇಲವೇ ದಿನಗಳು ಬಾಕಿಯಿದ್ದು, ಬೆಂಗಳೂರಿನಲ್ಲಿ ಗಣೇಶ ಮೂರ್ತಿ ಮಾರಾಟಗಾರರಿಗೆ ಆತಂಕ ಶುರುವಾಗಿದೆ.

ಗಣೇಶ ಚತುರ್ಥಿ ಮೂರ್ತಿಗಳನ್ನು ಕೊಳ್ಳುವವರೇ ಇಲ್ಲದಂತಾದರೆ ಎನ್ನುವುದು ಮಾರಾಟಗಾರರ ಭೀತಿಯಾಗಿದೆ. ಮೂರ್ತಿ ತಯಾರಿ ಕೇವಲ ಒಂದು ದಿನದ ಕೆಲಸವಲ್ಲ, ಮೂರ್ತಿ ತಯಾರಿಸಲು ಎರಡು ತಿಂಗಳಿನಿಂದಲೇ ತಯಾರಿ ಆರಂಭವಾಗುತ್ತದೆ. ಪ್ರತಿ ವರ್ಷದ ಬೇಡಿಕೆ ಆಧಾರದಲ್ಲಿ ಮೂರ್ತಿಯನ್ನು ತಯಾರಿಸಲಾಗುತ್ತದೆ. ಆದರೆ ಈ ಬಾರಿ ಹೆಚ್ಚು ಮೂರ್ತಿಗಳನ್ನು ತಯಾರಿಸಿದರೆ ಖರೀದಿ ಕಡಿಮೆಯಾದರೆ ಎಂಬ ಆತಂಕ ಎದುರಾಗಿದೆ.

ಮೂರ್ತಿ ಮಾರಾಟಗಾರರಿಗೆ ಇದುವರೆಗೆ ಒಂದೇ ಒಂದು ಆರ್ಡರ್ ಬಂದಿಲ್ಲ. ಸಾಮಾನ್ಯವಾಗಿ ಜೂನ್ ಅಂತ್ಯದಿಂದಲೇ ಆರ್ಡರ್‌ಗಳು ಬರಲು ಆರಂಭವಾಗುತ್ತದೆ. ಜುಲೈ ಮಧ್ಯ ವಾರಕ್ಕೆ ಬಂದರೂ ಒಂದೇ ಒಂದು ಆರ್ಡರ್ ಬಂದಿಲ್ಲ ಎಂಬ ಮಾಹಿತಿ ಇದೆ. ಚೌತಿ ಹಬ್ಬ ಮುಗಿಯುತ್ತದ್ದಂತೆ ಮುಂದಿನ ವರ್ಷಕ್ಕೆ ಮೂರ್ತಿಗಳ ತಯಾರಿಕೆ ಆರಂಭವಾಗುತ್ತವೆ. ಈಗ ಯಾರೂ ಮೂರ್ತಿಗಳನ್ನು ಕೊಳ್ಳದಿದ್ದರೆ ಇಡೀ ಒಂದು ವರ್ಷದ ಶ್ರಮ ವ್ಯರ್ಥವಾಗಲಿದೆ.

ಗಣೇಶನ ಮೂರ್ತಿ ಮಾರಾಟದ ಕುರಿತು ಸರ್ಕಾರದಿಂದ ಯಾವುದೇ ನೋಟಿಫಿಕೇಷನ್ ಬಂದಿಲ್ಲ. ಬೆಂಗಳೂರಿನಲ್ಲಿ ಸುಮಾರು 500 ಕುಟುಂಬಗಳು ಇದೇ ಕಸುಬನ್ನು ನಂಬಿವೆ, ಒಟ್ಟು ನಾಲ್ಕು ತಲೆಮಾರು ಈ ಗಣೇಶನ ಮೂರ್ತಿಯನ್ನು ತಯಾರಿಸಲು ಹಗಲೂ ರಾತ್ರಿ ಶ್ರಮ ಪಡುತ್ತಿದೆ.

ಈ 500 ಕುಟುಂಬಗಳು ಗಣೇಶ ಚತುರ್ಥಿಯಲ್ಲಿ ಮಾರಾಟವಾಗುವ ಮೂರ್ತಿಯನ್ನು ನಂಬಿಕೊಂಡಿದ್ದಾರೆ. ಅದೇ ಅವರ ಜೀವನಕ್ಕೆ ಆಧಾರ. ಸರ್ಕಾರವು ಯಾವುದೇ ನೋಟಿಫಿಕೇಷನ್ ಹೊರಡಿಸಿದ ಕಾರಣ  ಮೂರ್ತಿಗಳನ್ನು ಮಾರಾಟ ಮಾಟಬೇಕೇ ಬೇಡವೇ ಎಂಬುದೇ ವಿಗ್ರಹ ತಯಾರಕರ ಗೋಜಾಗಿದೆ.

LEAVE A REPLY

Please enter your comment!
Please enter your name here