ರಾಜ್ಯದ ಜನತೆಗೆ ಗುಡ್ ನ್ಯೂಸ್ ಕೊಟ್ಟ ಆರೋಗ್ಯ ಇಲಾಖೆ

ಬೆಂಗಳೂರು

ಬೆಂಗಳೂರು: ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ -ಆರೋಗ್ಯ ಕರ್ನಾಟಕ ಯೋಜನೆಯ ನೂತನ ಗುರುತಿನ ಚೀಟಿಗಳನ್ನು ಎಲ್ಲಾ ಅರ್ಹ ಫಲಾನುಭವಿಗಳಿಗೆ ಡಿಸೆಂಬರ್ 15 ರೊಳಗೆ ನೀಡುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಈ ಯೋಜನೆಯಡಿ ಕಾರ್ಡ್ ವಿತರಣೆಯ ಮಧ್ಯಂತರ ಗುರಿಯಾಗಿ ಅ.2 ರೊಳಗೆ 1 ಕೋಟಿ ಗುರುತಿನ ಚೀಟಿ ಸಿದ್ದುಪಡಿಸಿ ವಿತರಿಸಲು ತೀರ್ಮಾನಿಸಲಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು, ಸಾರ್ವಜನಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ಆಭರಣದಲ್ಲಿ ಗುರುತಿನ ಚೀಟಿ ಕೇಂದ್ರಗಳನ್ನು ಶೀಘ್ರವೇ ಸ್ಥಾಪಿಸಲು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.