Home District ಬಿಬಿಎಂಪಿ ನೂತನ ಆಯುಕ್ತರಾಗಿ ಗೌರವ್ ಗುಪ್ತಾ?

ಬಿಬಿಎಂಪಿ ನೂತನ ಆಯುಕ್ತರಾಗಿ ಗೌರವ್ ಗುಪ್ತಾ?

542
0

ಬೆಂಗಳೂರು; ಬಿಬಿಎಂಪಿಯ ನೂತನ ಆಯುಕ್ತರಾಗಿ ಹಾಲಿ ಆಡಳಿತಾಧಿಕಾರಿಯಾಗಿರುವ ಗೌರವ್ ಗುಪ್ತಾ ನೇಮಕ ವಾಗುವ ಸಾಧ್ಯತೆ ಬಹುತೇಕ ನಿಚ್ಚಳವಾಗಿದೆ. ಸರ್ಕಾರ ಈಗಾಗಲೇ ಈ ನೇಮಕಾತಿಗೆ ಮುಂದಾಗಿದ್ದು ಘೋಷಣೆಯೊಂದೇ ಬಾಕಿ ಇದೆ.

ಹಾಲಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರನ್ನು ಕಂದಾಯ ಇಲಾಖೆಗೆ ನಿಯೋಜನೆ ಗೊಳಿಸುವ ಸಾಧ್ಯತೆ ಇದೆಯಂತೆ.ಇನ್ನು ತೆರವಾಗಲಿರುವ ಆಡಳಿತ ಆಡಳಿತಾಧಿಕಾರಿ ಹುದ್ದೆಗೆ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರನ್ನು ನಿಯುಕ್ತಿಗೊಳಿಸುವುದು ಬಹುತೇಕ ನಿಚ್ಚಳ ಎನ್ನಲಾಗಿದೆ.

ಮಂಜುನಾಥ್ ಪ್ರಸಾದ್ ಈ ಹಿಂದೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದು ಅವರನ್ನು ಕಂದಾಯ ಸಚಿವ ಆರ್ ಅಶೋಕ್ ತಮ್ಮ ಇಲಾಖೆಗೆ ಮತ್ತೆ ವಾಪಸು ಕರೆಸಿಕೊಂಡಿದ್ದಾರೆ ಎನ್ನಲಾಗಿದೆ.

ಮಂಜುನಾಥ ಪ್ರಸಾದ್ ಬಿಬಿಎಂಪಿ ಆಯುಕ್ತರಾಗಿ ನಿಯೋಜನೆಗೊಂಡ ನಂತರದಲ್ಲಿ ಸಾಕಷ್ಟು ಉತ್ತಮ ಕಾರ್ಯಗಳನ್ನು ಮಾಡಿರುವ ಹೆಗ್ಗಳಿಕೆ ಹೊಂದಿದ್ದಾರೆ ಜತೆಗೆ ಕೊರೊನ ದಂತ ಸಂಕಷ್ಟದ ಸಂದರ್ಭದಲ್ಲೂ ಕೂಡ ಬಿಬಿಎಂಪಿ ಆಡಳಿತವನ್ನು ಸರಾಗವಾಗಿ ನಡೆಸಿಕೊಂಡು ಹೋಗುವ ಹಿರಿಮೆ ಕೂಡ ಅವರಿಗಿದೆ ಇಂಥ ಸಂದರ್ಭದಲ್ಲಿ ಅವರ ದಿಢೀರ್ ವರ್ಗಾವಣೆ ಸಾಕಷ್ಟು ಚರ್ಚೆಗೂ ಗ್ರಾಸವಾಗಿದೆ.

Previous articleರಾಮ ರಾವಣ ರಾಬರ್ಟ್; ಪ್ರಜಾಟಿವಿಯೊಂದಿಗೆ ‘ದಿ ಬಾಸ್’ ದರ್ಶನ್ ಹೇಳಿದ್ದಾದರೂ ಏನು?!
Next articleನೇಣಿಗೆ ಶರಣಾದ ಬಿಬಿಎಂಪಿ ನೌಕರ!

LEAVE A REPLY

Please enter your comment!
Please enter your name here