Home District ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಪಂಚಾಯ್ತಿ ಸದಸ್ಯರು; ವಿಡಿಯೋ ವೈರಲ್

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಪಂಚಾಯ್ತಿ ಸದಸ್ಯರು; ವಿಡಿಯೋ ವೈರಲ್

548
0

ಚಾಮರಾಜನಗರ : ಗ್ರಾಮದ ಸಮಸ್ಯೆಯನ್ನು ಹೇಳಲು ಬಂದ ಮಹಿಳಾ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರನ್ನು ಯಾವ ಪಕ್ಷದವರು ಎಂದು ಕೇಳಿದ ಚಾಮರಾಜನಗರ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿಗಳಿಗೆ ಗ್ರಾಮಪಂಚಾಯ್ತಿ ಸದಸ್ಯರುಗಳು ತರಾಟೆಗೆ ತೆಗೆದುಕೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಹೂಗ್ಯಂ ಗ್ರಾಮದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲಾ ಪಂಚಾಯ್ತು ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಹರ್ಷಲ್ ಬೋಯರ್ ನಾರಾಯಣ್ ರಾವ್ ರವರು ಹನೂರು ತಾಲ್ಲೂಕಿನ ಶಾಗ್ಯಂ ಗ್ರಾಮ ಪಂಚಾಯ್ತಿಗೆ ಬೇಟಿ ಕೊಟ್ಟು ಪಂಚಾಯ್ತಿಯ ದುರಾಡಳಿತದ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ತನಿಖೆಗೆ ಆಗಮಿಸಿದ ವೇಳೆ ಮಹಿಳಾ ಗ್ರಾಮ ಪಂಚಾಯ್ತಿ ಸದಸ್ಯರು ಸಮಸ್ಯೆಯನ್ನು ಹೇಳುತ್ತಿದ್ದಂತೆ ಯಾವ ಪಾರ್ಟಿಯವರು ಎಂದು ಸಿಇಓ ಕೇಳಿದ್ದನ್ನು ಗಮನಿಸಿದ ಇನ್ನಿತರ ಸದಸ್ಯರು ಕೆರಳಲು ಕಾರಣವಾಯಿತು.

ಸ್ಥಳದಲ್ಲೇ ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಧಿಕಾರಿಗಳನ್ನು ಚುನಾಯಿತ ಜನ ಪ್ರತಿನಿಧಿಗಳು ತರಾಟೆಗೆ ತೆಗೆದುಕೊಂಡರು. ಈ ವೇಳೆ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡದೇ ಮೌನವಾಗಿದ್ದ ಸಿಇಓ ಮೇಲೆ ಹೂಗ್ಯಂ ಸದಸ್ಯರು ತರಾಟೆಗೆ ತೆಗೆದುಕೊಂಡ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

Previous articleನಾಡಿನ ಜನತೆಯ ಜೀವನದ ಜೊತೆ ಸರ್ಕಾರದ ಚೆಲ್ಲಾಟ; ಹೆಚ್.ಡಿ.ಕುಮಾರಸ್ವಾಮಿ ಆರೋಪ
Next articleಗಮಕ; ಮಲೆನಾಡಿನ ಒಂದು ವಿಶಿಷ್ಟ ಕಲೆ

LEAVE A REPLY

Please enter your comment!
Please enter your name here