Home District ಗುಂಡ್ಲುಪೇಟೆ ತಾಲೂಕಿನಲ್ಲಿ ಕೋವಿಡ್ ಲಸಿಕೆ ಕೊರತೆ; ಜನರ ಪರದಾಟ

ಗುಂಡ್ಲುಪೇಟೆ ತಾಲೂಕಿನಲ್ಲಿ ಕೋವಿಡ್ ಲಸಿಕೆ ಕೊರತೆ; ಜನರ ಪರದಾಟ

ಗುಂಡ್ಲುಪೇಟೆ ತಾಲೂಕಿನಲ್ಲಿ ಕೋವಿಡ್ ಲಸಿಕೆ ಕೊರತೆ; ಜನರ ಪರದಾಟ

309
0

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಕೊರತೆ ಇದ್ದು ಸಾರ್ವಜನಿಕರು ಲಸಿಕೆಗಾಗಿ ಪರದಾಡು ವಂತಾಗಿದೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನಹರಿಸದೆ ಇರುವುದರಿಂದ ಸಾರ್ವಜನಿಕ ಆಕ್ರೋಶ ವ್ಯಕ್ತವಾಗುತ್ತಿದೆ.

ರಾಜ್ಯಾದ್ಯಂತ ಕೊರೊನಾ ಲಸಿಕೆಯನ್ನು ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಿಗೆ ಸರಬರಾಜು ಮಾಡುತ್ತಿದೆ. ಆದರೆ ನಗರಕ್ಕೆ ಅಲ್ಪ ಪ್ರಮಾಣದ ಲಸಿಕೆ ಸರಬರಾಜಾಗುತ್ತಿದೆ. ಸರ್ಕಾರ 18 ವರ್ಷಗಳ ಮೇಲ್ಪಟ್ಟ ಎಲ್ಲರೂ ಕೊರೊನಾ ಲಸಿಕೆ ಹಾಕಿಕೊಳ್ಳಲು ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿನಿತ್ಯ ಲಸಿಕೆಗಾಗಿ ಜನರು ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ.

ಆದರೆ ಲಸಿಕೆ ಮಾತ್ರ ಸಿಗುತ್ತಿಲ್ಲ ಅನ್ನೋದು ಸಾರ್ವಜನಿಕರ ದೂರು.ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ದಿನವೊಂದಕ್ಕೆ 100 ಲಸಿಕೆಗಳನ್ನು ಮಾತ್ರ ಹಾಕಲಾಗುತ್ತದೆ. ನೂರಕ್ಕಿಂತ ಹೆಚ್ಚು ಜನರು ಬಂದರೆ ಕೊರೊನಾ ಲಸಿಕೆ ಸಿಗುವುದಿಲ್ಲ ಎಂದು ಸ್ವತಃ ಅಲ್ಲಿನ ಸಿಬ್ಬಂದಿ ಹೇಳುತ್ತಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಆನ್ಲೈನ್ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾನ ನಿನ್ನೆ ದಿನಾಂಕ ನಿಗದಿಯಾಗಿದ್ದು ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆಗೆ ಬಂದಿದ್ದಾರೆ.

ಆದರೆ ಲಸಿಕೆ ಇಲ್ಲವೆಂದು ಸಿಬ್ಬಂದಿ ಹೇಳುತ್ತಿದ್ದಾರೆ ಲಾಕ್ ಡೌನ ಸಂದರ್ಭದಲ್ಲಿ ಲಸಿಕೆ ಹಾಕಿಸಿಕೊಳ್ಳಲ್ಲ ಆಸ್ಪತ್ರೆಗೆ ಬಂದರೆ ಪೋಲಿಸರು ಸುಖಸುಮ್ಮನೆ ದಂಡ ಹಾಕುವುದು ಮತ್ತು ವಾಹನ ಸೀಜ್ ಮಾಡುವಂತಹ ಕೆಲಸ ಮಾಡುತ್ತಾರೆ ಆಸ್ಪತ್ರೆಯಲ್ಲಿ ಸಾಮಾಜಿಕ ಅಂತರವಿಲ್ಲ ಯಾರು ಸಹ ಮಾಸ್ಕ್ ಹಾಕುವುದಿಲ್ಲ ಆಡಳಿತ ವೈದ್ದಾಧಿಕಾರಿ ಕೇಳಿದರೆ ಯಾವುದೇ ಮಾಹಿತಿ ನೀಡುವುದಿಲ್ಲ ಎಂದು ಶಿವಪುರ ಗ್ರಾಮದ ನಾರ್ಗಾಜುನ್ ಹೇಳುವರು.

VIAಗುಂಡ್ಲುಪೇಟೆ ತಾಲೂಕಿನಲ್ಲಿ ಕೋವಿಡ್ ಲಸಿಕೆ ಕೊರತೆ; ಜನರ ಪರದಾಟ
SOURCEಗುಂಡ್ಲುಪೇಟೆ ತಾಲೂಕಿನಲ್ಲಿ ಕೋವಿಡ್ ಲಸಿಕೆ ಕೊರತೆ; ಜನರ ಪರದಾಟ
Previous articleಚಿನ್ನದ ಗಣಿಯ ಅಧಿಕಾರಿಗಳೊಂದಿಗೆ ಪ್ರಜಾ ಟಿವಿ ಚಿಟ್ ಚಾಟ್
Next articleಕೊರೋನಾ ವಿಚಾರ; ಕರ್ನಾಟಕದ ಮೇಲೆ ಕಿಂಚಿತ್ತೂ ಕರುಣೆ ತೋರದ ಕೇಂದ್ರ ಸರ್ಕಾರ!

LEAVE A REPLY

Please enter your comment!
Please enter your name here