ಉದ್ಯಮಿಗಳನ್ನು ವಂಚಿಸುತ್ತಿದ್ದ ಮಹಿಳೆಯ ಮನೆಯ ಮೇಲೆ Police Attack!….

Police attack on Lady House | ಮಹಿಳೆಯ ಮನೆಯ ಮೇಲೆ ಪೊಲೀಸರ ದಾಳಿ

621
0

ಚಿಕ್ಕಬಳ್ಳಾಪುರ: ಹಣ ಪಡೆದು ಉದ್ಯಮಿಗಳನ್ನು ವಂಚಿಸುತ್ತಿದ್ದ ಮಹಿಳೆಯ ಮನೆಯ ಮೇಲೆ ಪೊಲೀಸರ ದಾಳಿ. ವಿದೇಶದಿಂದ ಹಣ ಬಂದಿದೆ ಟ್ಯಾಕ್ಸ್ ಕಟ್ಟಿ ಹಣ ಪಡೆಯಬೇಕಿದೆ ಎಂದು ವಂಚ ಸುತ್ತಿದ್ದ ಗ್ಯಾಂಗ್ ಅರೆಸ್ಟ್.

ವಿದೇಶದಿಂದ ಹಣ ಬಂದಿದೆ ಟ್ಯಾಕ್ಸ್ ಕಟ್ಟಿ ಹಣ ಪಡೆಯಬೇಕಿದೆ ಎಂದು ವಂಚನೆ ಮಾಡುತ್ತಿದ್ದ ವಂಚಕರ ಗ್ಯಾಂಗ್ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ ಘಟನೆ ಚಿಕ್ಕಬಳ್ಳಾಪುರ ನಗರದ ಕೋಟೆ ಬಡಾವಣೆಯಲ್ಲಿ ನಡೆದಿದೆ.. ಹೌದು. ಕೋಟೆ ಬಡಾವಣೆಯ ಬೆಸ್ಕಾಂ ಸಿಬ್ಬಂದಿಯಾಗಿದ್ದ ಅರ್ಚನಾ ಹಾಗೂ ಆಕೆಯ ತಂಡ RBI ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮೋಸ ಮಾಡ್ತಿದ್ದರು.

ಇಂದು ಬೆಳಗ್ಗೆ ಅರ್ಚನಾ ಮನೆ ಮೇಲೆ ಚಿಕ್ಕಬಳ್ಳಾಪುರ ಪೊಲೀಸರ ದಾಳಿ ನಡೆಸಿ ಅರ್ಚನ ಸಹೋದರ ಶ್ರೀಹರಿ, ಶ್ರೀಪತಿ ಯನ್ನು ಬಂಧಿಸಿದ್ದು.. ಮೋಸದ ಜಾಲಕ್ಕೆ ಸಹಕರಿಸುತ್ತಿದ್ದ ನಟ ಶಂಕರ್ ನನ್ನ ಸಹ ಬಂಧಿಸಿದ್ದಾರೆ.

ಬೆಂಗಳೂರಿನ ವಂಶಿಕೃಷ್ಣ ಎನ್ನುವವರಿಗೆ 24 ಕೋಟಿ ಸೆಸ್ ಹಣವನ್ನು RBI ಗೆ ಪಾವತಿಸಬೇಕು.. ನಂತರ ಆರು ಲಕ್ಷ ಮೂವೈತ್ತೇದು ಸಾವಿರ ಕೋಟಿ ರೂಪಾಯಿ ಬರುತ್ತೆ ಎಂದು ಹೇಳಿ 2ಕೋಟಿ 2 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾರೆ. ಎಂದು ಚಿಕ್ಕಬಳ್ಳಾಪುರ ಎಸ್ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ..ಸಧ್ಯ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದು ಇನ್ನಷ್ಟು ಮಾಹಿತಿ ಕಲೆಹಾಕುತ್ತಿದ್ದಾರೆ.

VIAPolice attack on Lady House | ಮಹಿಳೆಯ ಮನೆಯ ಮೇಲೆ ಪೊಲೀಸರ ದಾಳಿ
SOURCEPolice attack on Lady House | ಮಹಿಳೆಯ ಮನೆಯ ಮೇಲೆ ಪೊಲೀಸರ ದಾಳಿ
Previous articleಉದ್ಯಮಿಗಳನ್ನು ವಂಚಿಸುತ್ತಿದ್ದ ಗ್ಯಾಂಗ್ ಅರೆಸ್ಟ್; ಈ ಕುರಿತು ಚಿಕ್ಕಬಳ್ಳಾಪುರ S.P ಮಿಥುನ್ ಕುಮಾರ್ ಹೇಳಿದ್ದೇನು?
Next article3ನೇ ಅಲೆ ತಡೆಗೆ ಮೈಸೂರು ಸಜ್ಜು; ಕೂ ವ್ಯಾಕ್ಸಿನ್ ‘Clinical Trail’ಗೆ ಆಸ್ಪತ್ರೆಯ ಆಯ್ಕೆ!

LEAVE A REPLY

Please enter your comment!
Please enter your name here