
ಹಸೆಮಣೆಗೇರಲು ಸಜ್ಜು: ಬೊಂಬಾಟ್ ಜೋಡಿಯ ಮದುವೆ ಯಾವಾಗ ಗೊತ್ತಾ..?
ಕ್ರಿಕೆಟಿಗ ಕೆ.ಎಲ್ ರಾಹುಲ್ ಮತ್ತು ನಟಿ ಅಥಿಯಾ ಶೆಟ್ಟಿ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ಮೂರು ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ಈ ಜೋಡಿ ಸದ್ಯದಲ್ಲೇ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಹಿಂದಿ ಚಿತ್ರರಂಗದ ಸ್ಟಾರ್ ನಟ ಸುನೀಲ್ ಶೆಟ್ಟಿ ಮಗಳು ಅಥಿಯಾ ಶೆಟ್ಟಿ ಕೂಡ ಬಾಲಿವುಡ್ ರಂಗದಲ್ಲಿ ಆಕ್ಟೀವ್ ಆಗಿದ್ದಾರೆ. 2015ರಲ್ಲಿ ಹೀರೋ ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ ನಟಿ ಈಗ ಸಿನಿಮಾಗಿಂತ ಕೆ.ಎಲ್ ರಾಹುಲ್ ಜತೆಗಿನ ಡೇಟಿಂಗ್ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ.
ಸದ್ಯ ತಮ್ಮ ಮದುವೆಯ ವಿಚಾರವಾಗಿ ಸೌಂಡ್ ಮಾಡುತ್ತಿದ್ದಾರೆ. ಕ್ರಿಕೆಟ್ ಕ್ಷೇತ್ರದಲ್ಲಿ ಗಮನ ಸೆಳೆದಿರುವ ಕೆ.ಎಲ್ ರಾಹುಲ್ ಜೊತೆ ಕಳೆದ ಮೂರು ವರ್ಷಗಳಿಂದ ಡೇಟಿಂಗ್ನಲ್ಲಿರುವ ಅಥಿಯಾ ಶೆಟ್ಟಿ ಮುಂದಿನ ವರ್ಷ ಜನವರಿಯಲ್ಲಿ ಹಸೆಮಣೆ ಏರಲಿದ್ದಾರೆ. ಹಾಗಂತ ಈ ಕುಟುಂಬ ನಿರ್ಧಾರ ಮಾಡಿದ್ದಾರೆ. 2023ರಲ್ಲಿ ರಾಹುಲ್ ಮತ್ತು ಅಥಿಯಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.