Home District HDK ಹೊಸ ಬಾಂಬ್..! “ಚಾಲ್ತಿಯಲ್ಲಿದೆ ಆಪರೇಷನ್, BJP ನಾಯಕರಿಂದ ಬಿಗ್ ಆಫರ್”..! ಬಿಜೆಪಿ ಗಿಫ್ಟ್ ಮೊತ್ತ...

HDK ಹೊಸ ಬಾಂಬ್..! “ಚಾಲ್ತಿಯಲ್ಲಿದೆ ಆಪರೇಷನ್, BJP ನಾಯಕರಿಂದ ಬಿಗ್ ಆಫರ್”..! ಬಿಜೆಪಿ ಗಿಫ್ಟ್ ಮೊತ್ತ ಕೇಳಿದ್ರೆ ಅಚ್ಚರಿಪಡ್ತೀರಿ..!

2370
0
SHARE

ಮುಂಬೈಗೆ ತೆರಳಿದ್ದ ಕಾಂಗ್ರೆಸ್ ನ ಅತೃಪ್ತ ಶಾಸಕರೆಲ್ಲಾ ವಾಪಸ್ ಬಂದ್ರು. ಸಂಕ್ರಾಂತಿ ಕ್ರಾಂತಿ ಆಗಲೇ ಇಲ್ಲ ಎಂದುಕೊಳ್ಳುವಷ್ಟರಲ್ಲಿ ಮತ್ತೆ ಶುರುವಾಗಿದೆ ಆಪರೇಷನ್ ಕಮಲ. ಹೌದು ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಬಿಜೆಪಿ ಪ್ರಯತ್ನ ಇನ್ನೂ ಮುಂದುವರಿದಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟ ಪಡಿಸಿದ್ದಾರೆ. ಬಿಜೆಪಿ ಗಿಫ್ಟ್ ಮೊತ್ತ ಕೇಳಿದ್ರೆ ಅಚ್ಚರಿ ಪಡ್ತೀರಿ ಅಂತಾ ಹೆಚ್ಡಿಕೆ ಕುತೂಹಲ ಕೆರಳಿಸಿದ್ದಾರೆ..

ಮತ್ತೊಂದು ಕಡೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೂಡ ಆಪರೇಷನ್ ಕಮಲ ಯತ್ನ ನಡೆದಿರೋದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.ಸಂಕ್ರಾಂತಿ ಕ್ರಾಂತಿ ವಿಫಲವಾಯ್ತು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇನ್ನು ಸೇಫ್ ಎಂದು ಕೊಳ್ಳುವಷ್ಟರಲ್ಲೇ, “ಸದ್ಯ ಹೋದ ಪಿಶಾಚಿ ಅಂದ್ರೆ ಮತ್ತೆ ಬಂದೆ ಗವಾಕ್ಷಿಲಿ” ಅನ್ನೋ ಹಾಗೆ ರಾಜ್ಯ ಸರ್ಕಾರಕ್ಕೆ ಮತ್ತೆ ಶುರುವಾಗಿದೆ ಆಪರೇಷನ್ ಕಮಲದ ಭೀತಿ.

ತೆರೆಮರೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಸೆಳೆದು ದೋಸ್ತಿ ಸರ್ಕಾರ ಪತನಗೊಳಿಸುವ ಬಿಜೆಪಿ ಪ್ರಯತ್ನ ಮುಂದುವರೆದಿದೆಯಂತೆ.. ಆಪರೇಷನ್ ಕಮಲ ಇನ್ನೂ ನಿಂತಿಲ್ಲ..ನಿನ್ನೆ ರಾತ್ರಿ ಕೂಡಾ ಬಿಜೆಪಿಯವರು ಕಾಂಗ್ರೆಸ್ ಶಾಸಕರೊಬ್ಬರನ್ನು ಸಂಪರ್ಕಿಸಿದ್ದಾರೆ. ಬಿಜೆಪಿ ಗಿಫ್ಟ್ ಮೊತ್ತ ಕೇಳಿದರೆ ಅಚ್ಚರಿಯಾಗುತ್ತೆ ಅಂತಾ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದಾರೆ… ಬಿಜೆಪಿ ಗಿಪ್ಟ್ ಬಗ್ಗೆ ಕೈ ಶಾಸಕರು ನಮಗೆ ಹೇಳಿದ್ದಾರೆ.

ಆದರೆ ಆ ಶಾಸಕರು ಗಿಫ್ಟ್ ನಿರಾಕರಿಸಿ, ನಮ್ಮನ್ನು ನೆಮ್ಮದಿಯಿಂದ ಇರಲು ಬಿಡಿ ಎಂದು ನಿರಾಕರಿಸಿರುವುದಾಗಿ ಹೇಳಿದ್ದಾರೆ ಎಂದು ಹೆಚ್ಡಿಕೆ ತಿಳಿಸಿದರು.ಬೆಂಗಳೂರಿನಲ್ಲಿ ಆಪರೇಷನ್ ಕಮಲ ಬಗ್ಗೆ ಸಿಎಂ ಹೆಚ್ಡಿಕೆ ಬಾಂಬ್ ಸಿಡಿಸಿದ್ರೆ, ಕೋಲಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅಡ್ಡಗೋಡೆ ಮೇಲೆ ದೀಪ ಇಟ್ಟು ಕುತೂಹಲ ಕೆರಳಿಸಿದ್ದಾರೆ… ನಾವು ಯಾವುದೇ ಆಪರೇಷನ್ ಮಾಡ್ತಾ ಇಲ್ಲ. ಆದರೆ, ಆಡಳಿತ ಪಕ್ಷದವರ ಆಂತರಿಕ ಕಚ್ಚಾಟದಿಂದ ಅವರಾಗಿಯೇ ಹೊರಗೆ ಬಂದ್ರೆ ನಾವೇನು ಮಾಡೋದಕ್ಕೆ ಆಗುತ್ತದೆ. ನಾವೀಗ 106 ಜನರಿದ್ದೇವೆ.

ಮುಂದೇನಾಗುತ್ತದೆ ಕಾದು ನೋಡಿ ಅಂತಾರೆ ಯಡಿಯೂರಪ್ಪ.ಆಪರೇಷನ್ ಕಮಲ ಭೀತಿ ನಡುವೆ ಹೆಚ್ಡಿಕೆ ಬಜೆಟ್ ಮಂಡನೆ ಸಿದ್ಧತೆ ಆರಂಭಿಸಿದ್ದಾರೆ.. ಫೆಬ್ರವರಿ 6 ರಿಂದ ಜಂಟಿ ಅಧಿವೇಶನ ಆರಂಭಿಸಲು, ರಾಜ್ಯಪಾಲರಿಗೆ ಆಹ್ವಾನವನ್ನೂ ಕೊಟ್ಟು ಬಂದಿದ್ದಾರೆ. ಆದರೆ, ಬಿಜೆಪಿಯವರ ಆಪರೇಷನ್ ಕಮಲ ಯಶಸ್ವಿಯಾದರೆ, ಕುಮಾರಸ್ವಾಮಿಯವರು ಬಜೆಟ್ ಮಂಡನೆ ಮಾಡಲು ಸಾಧ್ಯವಾಗುತ್ತಾ ಅನ್ನೋದು ಈಗ ಯಕ್ಷ ಪ್ರಶ್ನೆಯಾಗಿದೆ.

LEAVE A REPLY

Please enter your comment!
Please enter your name here