HDK & ಸಿದ್ದು ಭೇಟಿ ಮಾಡಿದ BS ಯಡಿಯೂರಪ್ಪ: ಗಮನ ಸೆಳೆದ ಉಭಯ ನಾಯಕರ ಮಾತುಕತೆ

ಬೆಂಗಳೂರು

ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಎಚ್ ಡಿ ಕುಮಾರಸ್ವಾಮಿ ಅವರ ಉಭಯ ಕುಶಲೋಪರಿ ವಿಚಾರಿಸಿದ್ದಾರೆ. ವಿಧಾನಸಭೆ ಕಲಾಪದ ವೇಳೆ ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆಕಸ್ಮಿಕವಾಗಿ ಭೇಟಿ ಮಾಡಿದ್ದು, ಈ ವೇಳೆ ಬಹಳ ಸೌಹಾರ್ದಯುತವಾಗಿ ಒಬ್ಬರನೊಬ್ಬರು ಕಾಲೆಳೆಯುತ್ತಾ ಮಾತನಾಡುತ್ತಿರುವ ದೃಶ್ಯ ಕಂಡು ಬಂದಿದೆ.

ರಾಜಕೀಯದಲ್ಲಿ ಎಷ್ಟೇ ಕಿತ್ತಾಟ ಇದ್ದರೂ, ವೈಯಕ್ತಿಕವಾಗಿ ಸಿದ್ದರಾಮಯ್ಯ ಮತ್ತು ಬಿ ಎಸ್ ಯಡಿಯೂರಪ್ಪ ಅವರು ಬಹಳ ಆತ್ಮೀಯರು. ಈ ಹಿನ್ನೆಲೆ ಇಂದು ಕಲಾಪಕ್ಕೆ ಹಾಜರಾಗಲು ತೆರಳುತ್ತಿದ್ದ ವೇಳೆ ಉಭಯ ನಾಯಕರು ಅನಿರೀಕ್ಷಿತವಾಗಿ ಭೇಟಿ ಮಾಡಿ ಮಾತನಾಡುತ್ತಿ ರುವುದು ಎಲ್ಲರ ಗಮನ ಸೆಳೆಯುವಂತೆ ಮಾಡಿತು. ಈ ಸಂದರ್ಭದಲ್ಲಿ ಶಾಸಕರಾದ ಹುಣಸೂರು ಮಂಜುನಾಥ್ ಅವರು ಕೂಡ ಉಪಸ್ಥಿತರಿದ್ದರು.