Home District HDK & Nikhilಗೆ ಟಾಂಗ್ ಕೊಟ್ಟ Abhishek..!! ನಿಮ್ಮ ತರ ನಾವೇನು ಮೈಕ್ ಮುಂದೆ ಟವಲ್...

HDK & Nikhilಗೆ ಟಾಂಗ್ ಕೊಟ್ಟ Abhishek..!! ನಿಮ್ಮ ತರ ನಾವೇನು ಮೈಕ್ ಮುಂದೆ ಟವಲ್ ಹಾಕೊಂಡು ಅಳಬೇಕಾ.? ನಾನು ಮಂಡ್ಯದ ಅಳಿಯ ಅಲ್ಲ ನಾನು ಮಂಡ್ಯದ ಮಗ

2757
0
SHARE

ಅಂಬರೀಶ್ ಕಳೆದುಕೊಂಡ ಸುಮಲತಾ ಮುಖದಲ್ಲಿ ಯಾವುದೇ ನೋವಿಲ್ಲ ಎಂಬ ಸಿಎಂ ಹೇಳಿಕೆಗೆ ಅಂಬರೀಶ್ ಪುತ್ರ ಅಭಿಷೇಕ್ ಟಾಂಗ್ ಕೊಟ್ಟಿದ್ದಾರೆ. ನಿಮ್ಮ ತರ ನಾನು ಮೈಕ್ ಮುಂದೆ ಟವಲ್ ಆಕೊಂಡು ಅಳಬೇಕೆ? ಎಂದು ಸಿಎಂ ಕುಮಾರಸ್ವಾಮಿಗೆ ಪ್ರಶ್ನಿಸಿದ್ದಾರೆ.

ನಾವು ಅಂಗೆಲ್ಲ ಅಳಲ್ಲ. ನಿಮ್ಮ ಎಲ್ಲರ ಆಶೀರ್ವಾದ ಇರುವಾಗ ನಾವೇಕೆ ಅಳಬೇಕು ಎಂದು ಪ್ರಚಾರದ ವೇಳೆ ಅಭಿಷೇಕ್ ತಿರುಗೇಟುಕೊಟ್ಟಿದ್ದಾರೆ.. ಚುನಾವಣೆಯಲ್ಲಿ ಗೆಲ್ಲಲ್ಲು ಏನೇನೋ ಗಿಮಿಕ್ ಗಳನ್ನ ಮಾಡ್ತಿದ್ದಾರೆ.

ಜನ ದಡ್ಡರಲ್ಲ ಅಂತ ಏಪ್ರಿಲ್ 18ಕ್ಕೆ ತೋರಿಸೋಣ ಎಂದಿದ್ದಾರೆ. ನಾವು ದುಡ್ಡು ಖರ್ಚು ಮಾಡ್ತೀವಂತೆ. ನಾವು ದುಡ್ಡು ಹಂಚಲ್ಲ. ಪ್ರೀತಿ ಹಂಚುತ್ತೇವೆ. ಅವರು ಏನೇನೋ ಡವ್ ಮಾಡಿದ್ದಾರೆ. ಅದೆಲ್ಲವನ್ನು ನೀವು ಗಮನಕ್ಕೆ ತಕೊಬೇಕು. ಹೆಸರು, ಚಿನ್ಹೆಯನ್ನ ಗಮನಕ್ಕೆ ತಂದುಕೊಂಡು ವೋಟ್ ಮಾಡಬೇಕು.

ಸ್ತ್ರೀ ಶಕ್ತಿ ಏನು ಅಂತ ಅವರಿಗೆ ನೀವು ತೋರಿಸಬೇಕು. ಮಂಡ್ಯ ಸ್ವಾಭಿಮಾನವನ್ನು ನೀವೇ ಕಾಪಾಡಬೇಕು. ಈ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಾನು ನೆನ್ನೆ ಮೊನ್ನೆ ಬಂದಿಲ್ಲ. ನಾನು ಮಂಡ್ಯದ ಅಳಿಯ ಅಲ್ಲ ನಾನು ಮಂಡ್ಯದ ಮಗ ಎಂದು ನಿಖಿಲ್ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿ. ನಮ್ಮ ತಾಯಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದ್ರು.

LEAVE A REPLY

Please enter your comment!
Please enter your name here