Home Crime ಕೊರೋನಾ ಸೋಂಕಿತರಿಗೆ ಸಿದ್ದವಾಗಿದೆ “Hi-Tech Isolations Center”!

ಕೊರೋನಾ ಸೋಂಕಿತರಿಗೆ ಸಿದ್ದವಾಗಿದೆ “Hi-Tech Isolations Center”!

ಕೊರೋನಾ ಸೋಂಕಿತರಿಗೆ ಸಿದ್ದವಾಗಿದೆ "Hi-Tech Isolations Center"!

213
0
SHARE

ವರದಿ; ಅಶ್ವಥ್ ಕುಮಾರ್

ಚಾಮರಾಜನಗರ; ಅದು 6 ಗ್ರಾಮಗಳನ್ನೊಗೊಂಡ ಗ್ರಾಮಪಂಚಾಯ್ತಿ ಕೇಂದ್ರ …ಆ ಗ್ರಾಮದಲ್ಲಿದೆ ಪವರ್ ಫುಲ್ ಪಿಡಿಓ ಹಾಗೂ ಜನಪ್ರತಿನಿಧಿ ತಂಡ… ಅಲ್ಲೀಗ ಕರೋನಾ ಸೋಂಕಿತರಿಗೆ ಸಿದ್ದವಾಗಿದೆ ಐಟೆಕ್ ಐಸೋಲೇಷನ್ ಕೇಂದ್ರ… ಅದು ಎಲ್ಲೀ ಅಂತೀರಾ ನೋಡಿ ಈ ಸ್ಟೋರೀನಾ…!

ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ಗ್ರಾಮಪಂಚಾಯಿತಿ ಪವರ್ ಫುಲ್ ಆಡಳಿತ ಮಂಡಳಿಯು ಗ್ರಾಮದ ಸೋಂಕಿತರಿಗೆ ಉತ್ತಮ ಚಿಕಿತ್ಸೆ ದೊರಕುವಂತೆ ಮಾಡಲು ಸರ್ಕಾರಿ ಶಾಲೆಯಲ್ಲಿ ಹೈಟೆಕ್ ಐಸೋಲೇಷನ್ ಕೇಂದ್ರ ಆರಂಭಿಸುವ ಮೂಲಕ ಇತರ ಗ್ರಾಮಪಂಚಾಯಿತಿಗಳಿಗೆ ಮಾದರಿಯಾಗಿದೆ.

ಗ್ರಾಮಾಂತರ ಪ್ರದೇಶಗಳಲ್ಲಿ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ . ಸೋಂಕಿತರು ಅನಾರೋಗ್ಯವಿದ್ದರೂ ಮುಚ್ಚಿಟ್ಟುಕೊಳ್ಳುವ ಮೂಲಕ ತಮ್ಮ ಮನೆ ಹಾಗೂ ಬೀದಿಗಳಿಗೆ ಸೋಂಕು ವ್ಯಾಪಿಸುವಂತೆ ಮಾಡುತ್ತಿರುವುದು ಗ್ರಾಮಾಂತರ ಪ್ರದೇಶಗಳಲ್ಲಿ ಸೋಂಕು ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಇದನ್ನು ಮನಗಂಡ ಸರ್ಕಾರ ಸೋಂಕಿತರನ್ನು ಕಡ್ಡಾಯವಾಗಿ ಕರೊನಾ ಕೇರ್ ಸೆಂಟರುಗಳಿಗೆ ಹೋಂ ಕ್ವಾರಂಟೈನ್ ಬದಲು ಸೋಂಕಿತರನ್ನು ಕರೊನಾ ಕೇರ್ ಸೆಂಟರುಗಳಿಗೆ ಸ್ಥಳಾಂತರಿಸುತ್ತಿದೆ.
ಆದರೆ ಕರೊನಾ ಕೇರ್ ಕೇಂದ್ರಗಳಲ್ಲಿ ಸಮರ್ಪಕ ಸವಲತ್ತುಗಳು ಇಲ್ಲದಿರುವುದು ಹಾಗೂ 14 ದಿನಗಳು ಮನೆಯಿಂದ ದೂರವಿರಬೇಕಾಗುತ್ತದೆ ಎಂಬ ಕಾರಣದಿಂದ ಹೆಚ್ಚಿನ ಜನರು ಅಲ್ಲಿಗೆ ಹೋಗಲು ಹಿಂಜರಿಯುತ್ತಿದ್ದಾರೆ. ಇಂತಹ ಸಮಯದಲ್ಲಿ ಸೋಮಹಳ್ಳಿ ಗ್ರಾಮಪಂಚಾಯಿತಿ ಪವರ್ ಫುಲ್ ಆಡಳಿತ ಮಂಡಳಿಯು ತನ್ನ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 10 ಹಾಸಿಗೆಗಳ ಸಾಮರ್ಥ್ಯದ ಐಸೋಲೇಷನ್ ಕೇಂದ್ರ ಆರಂಭಿಸಿದೆ.

ಸರ್ಕಾರಿ ಶಾಲೆಯ ಸುತ್ತಾ ಮರ ಗಿಡಗಳಿಂದ ಕಂಗೊಳಿಸುತ್ತಿದ್ದು ಸೋಂಕಿತರಿಗೆ ಉತ್ತಮ ಆಕ್ಸಿಜನ್ ನೀಡಬಲ್ಲ ಸೂಕ್ತ ಪರಿಸರ ದೊರೆತಿದೆ. ತಂಗಾಳಿಯನ್ನು ಸವಿಯುತ್ತಾ ಸೋಂಕಿತರು ಆರೋಗ್ಯವಾಗಿರಲಿ ಎಂದು ಇಲ್ಲಿ ಸೂಕ್ತ ವ್ಯವಸ್ತೆ ಮಾಡಲ್ಪಟ್ಟಿದೆ. ಇಲ್ಲಿನ ಗ್ರಾಮಪಂಚಾಯ್ತಿ ಅಧ್ಯಕ್ಷರು ಹಾಗೂ ಉತ್ಸಾಹಿ ಯುವ ಗ್ರಾಮಪಂಚಾಯ್ತಿ ಸದಸ್ಯ ಗುರುಪ್ರಸಾದ್ ಸೇರಿಕೊಂಡು ಇಲ್ಲಿನ ಪಿಡಿಓ ಶ್ರೀನಿವಾಸ್ ಮಾದರಿ ಕೆಲಸ ಕೈ ಗೊಂಡಿದ್ದಾರೆ. ಗುಜರಾತ್‌ನಿಂದ ತರಿಸಿದ ರಟ್ಟಿನ ಮಂಚಗಳು ಇಲ್ಲಿನ ವಿಶೇಷ. ಯೂಟ್ಯೂಬ್ ನಲ್ಲಿ ಹಗುರವಾದ ಮಂಚಗಳ ಬಗ್ಗೆ ಹುಡುಕಾಟ ನಡೆಸಿದ ಗ್ರಾಮಪಂಚಾಯಿತಿ ಅಧಿಕಾರಿಗಳು 300 ಕಿಲೋ ತೂಕವನ್ನು ಹೊರುವ ಈ ಮಂಚಗಳನ್ನು ಆನ್ ಲೈನ್ ಮೂಲಕ ಖರೀದಿಸಿ ತರಿಸಿದ್ದಾರೆ. 5 ಸಾವಿರ ರೂಪಾಯಿ ವೆಚ್ಚದಲ್ಲಿ ಹಾಸಿಗೆ ದಿಂಬು, ಬೆಡ್ ಶೀಟ್ ಎಲ್ಲಾ ಖರೀದಿಸಲಾಗಿದೆ. ಹಾಸಿಗೆ ಮಂಚ ಎಲ್ಲಾ ಸೇರಿ ಕೇವಲ 81 ಸಾವಿರ ವೆಚ್ಚದಲ್ಲಿ ಐಸೋಲೇಷನ್ ಕೇಂದ್ರ ಸಿದ್ದವಾಗಿದೆ.

ಇದನ್ನು ಮನಗಂಡು ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ ಹರ್ಷಲ್ ಬೋಯರ್ ನಾರಾಯಣರಾವ್ ಇದನ್ನು ನೋಡಿ ಮೆಚ್ಚುಗೆ ಸೂಚಿಸಿದರು. ಅಲ್ಲದೆ ಇತರ ಗ್ರಾಮಪಂಚಾಯಿತಿಗಳೂ ಸಹ ತಮ್ಮ ವ್ಯಾಪ್ತಿಯಲ್ಲಿ ಒಂದೊಂದು ಐಸೋಲೇಷನ್ ಕೇಂದ್ರ ಆರಂಭಿಸಲು ಒಪ್ಪಿಗೆ ನೀಡಿದ್ದಾರೆ. ಗುರುಪ್ರಸಾದ್ ಗ್ರಾಮಪಂಚಾಯ್ತಿ ಯುವ ಸದಸ್ಯ ಸೋಮಳ್ಳಿ ಗ್ರಾಮಪಂಚಾಯ್ತಿ.

ಒಟ್ಟಾರೆ ಸೋಂಕಿತರಿಗೆ ಇಂತಹ ಹೈಟೆಕ್ ಮಾದರಿ ಐಸೋಲೆಷನ್ ಕೇಂದ್ರ ಸೋಂಕಿತನ್ನು ಬೇಗ ಗುಣಪಡಿಸಿ ಆರೋಗ್ಯವಂತರನ್ನಾಗಿಸಲು ಹಟಕ್ಕೆ ಬಿದ್ದವರಂತೆ ಭಾವಿಸುತ್ತಿದ್ದು ಕರೋನಾ ಸೋಂಕಿತರಿಗೆ ಆಶಾಕಿರಣವಾಗಿದೆ. ಇಂತಹ ಮಾದರಿ ಆರೈಕೆ ಕೇಂದ್ರಗಳು ರಾಜ್ಯದಲ್ಲಿ ಹೆಚ್ಚಾಗಿ ಸೋಂಕಿತರು ಬೇಗ ಆರೋಗ್ಯವಂತರಾಗಲಿ ಎಂಬೋಣ.

LEAVE A REPLY

Please enter your comment!
Please enter your name here