ಈ ಎಲೆಗಳನ್ನ ತಿಂದರೆ ಶುಗರ್ ಕಂಟ್ರೋಲ್ ಗೆ ಬರುತ್ತೆ..!

ಲೈಫ್ ಸ್ಟೈಲ್

ಉತ್ತಮ ಆರೋಗ್ಯಕ್ಕೆ ಈ ಎಲೆಗಳು ಸಹಕಾರಿ – ಮಧುಮೇಹಿಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನ ನಿಯಂತ್ರಿಸಲು ಸಾಕಷ್ಟು ಶ್ರಮ ವಹಿಸಬೇಕು. ಆದ್ರೆ ಈ ಎಲೆಗಳನ್ನ ತಿಂದ್ರೆ ಮಧುಮೇಹವನ್ನ ಹತೋಟಿಯಲ್ಲಿಡಬಹುದು. ಉತ್ತಮ ಆರೋಗ್ಯಕ್ಕಾಗಿ ಈ ಎಲೆಗಳನ್ನ ತಿನ್ನಲೆ ಬೇಕು – ಇಂದು ಎಲ್ಲರೂ ಒತ್ತಡದ ಬದುಕಿನಲ್ಲೇ ಜೀವನ ಸಾಗಿಸಬೇಕಾಗಿದೆ. ಪೀಸ್‌ ಫುಲ್‌ ಬದುಕು ನಡೆಸುವುದು ಕಷ್ಟಸಾಧ್ಯವಾಗಿದೆ. ಒತ್ತಡದ ಜೀವನ ಶುಗರ್‌ ಗೂ ದಾರಿ ಮಾಡಿಕೊಡುತ್ತೆ. ಒಮ್ಮೆ ಶುಗರ್‌ ಎಂಟ್ರಿ ಕೊಡ್ತು ಅಂದ್ರೆ ಅದನ್ನ ಮತ್ತೆ ಸಮತೋಲಿನವಾಗಿ ಇರಿಸಿಕೊಳ್ಳುವುದಕ್ಕೆ ಸಾಕಷ್ಟು ಹರ ಸಾಹಸ ಪಡಲೇ ಬೇಕಾಗಿದೆ.

ಇನ್ನು ಶುಗರ್‌ ನಾನಾ ಕಾರಣಗಳಿಂದ ಕಾಣಿಸಕೊಳ್ಳುತ್ತೆ. ಜೀವನ ಶೈಲಿ ಹಾಗೂ ಅನಾರೋಗ್ಯಕರವಾದ ಆಹಾರದ ಪದ್ಧತಿಯಿಂದಲೂ ಮಧುಮೇಹ ಬರುತ್ತೆ. ಹೀಗೆ ಮಧುಮೇಹ ಬಂದಂತ ವ್ಯಕ್ತಿಗಳು ಸಾಕಷ್ಟು ಕಾಳಜಿ ವಹಿಸಲೇ ಬೇಕಾಗಿದೆ. ಮಧುಮೇಹದಿಂದ ದೇಹದೊಳಗಿನ ಸಕ್ಕರೆ ಪ್ರಮಾಣದಲ್ಲೂ ಏರುಪೇರಾಗಿ ಹಲವು ಸಂಕಷ್ಟಗಳನ್ನ ಎದುರಿಸಬೇಕಾಗತ್ತೆ. ಕಿಡ್ನಿ ಸಮಸ್ಯೆ, ಹೃದಯಾಘಾತದಂತ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತೆ. ಹಾಗಿದ್ರೆ ಈ ಸಮಸ್ಯೆಯಿಂದ ಹೊರ ಬರಬೇಕಾದ್ರೆ ಕೆಲವೊಂದು ಮನೆಮದ್ದಿನತ್ತ ಚಿತ್ತ ಹರಿಸಬೇಕಾಗಿದೆ.

1 ನುಗ್ಗೆ ಸೊಪ್ಪು :

ನುಗ್ಗೆ ಸೊಪ್ಪಿನಲ್ಲಿ ಹಲವು ಪೋಷಕಾಂಶಗಳು ಕಂಡುಬರುತ್ತವೆ. ಇದು ಮಧುಮೇಹ ಪ್ರತಿರೋಧಕದ ಗುಣಗಳಲ್ಲಿ ಹೊಂದಿದೆ. ಶುಗರ್ ಬಂದಿರೋರು ನುಗ್ಗೆ ಸಪ್ಪನ್ನ ಹೆಚ್ಚಾಗಿ ತಿನ್ನಬೇಕು ಎಂದು ಹೇಳಲಾಗುತ್ತದೆ. ಇದು ರೋಗಿಗಳಿಗೆ ಇನ್ಸುಲಿನ್ನಂತೆ ಕಾರ್ಯನಿರ್ವಹಿಸುತ್ತದೆ.

2. ಅಶ್ವಗಂಧ


ಅಶ್ವಗಂಧ ಇದು ಆರೋಗ್ಯಕ್ಕೆ ಸಾಕಷ್ಟು ಉಪಯುಕ್ತವಾದದ್ದು. ಹಲವು ರೋಗಗಳಿಗೆ ಇದು ರಾಮಬಾಣದಂತೆ ಕೆಲಸ ಮಾಡುತ್ತದೆ . ಇದನ್ನ ಮಧುಮೇಹಿಗಳು ಸೇವಿಸುವುದರಿಂದ ಸಕ್ಕರೆ ಪ್ರಮಾಣವನ್ನ ಕೂಡಲೇ ಹತೋಟಿಗೆ ತರಬಹುದಾಗಿದೆ. ಅಶ್ವಗಂಧದ ಎಲೆ ಮತ್ತು ಬೇರಿನ್ನ ಕುದಿಸಿ ಕುಡಿಯುವುದರಿಂದ ಮಧುಮೇಹವನ್ನ ನಿಯಂತ್ರಿಸಬಹುದಾಗಿದೆ.

3. ಅಮೃತ ಬಳ್ಳಿ


ಅಮೃತ ಬಳ್ಳಿ ಎಲೆಗಳು ಸಹ ಮಧುಮೇಹಕ್ಕೆ ರಾಮಬಾಣದಂತೆ ಕೆಲಸಮಾಡುತ್ತದೆ . ಇದು ಹೈಪರ್ಗ್ಲೈಸೆಮಿಕ್ ಆಗಿರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನ ನಿತ್ಯ ಸೇವನೆ ಮಾಡುವುದದರಿಂದ ಮಧುಮೇಹಿಗಳು ತಮ್ಮ ಸಕ್ಕರೆ ಪ್ರಮಾಣವನ್ನ ಸಮತೋಲಿತವಾಗಿ ಇರಿಸಿಕೊಳ್ಳಬಹುದು.

4. ಬೇವಿನ ಎಲೆಗಳು

ಬೇವಿನ ಎಲೆಗಳು ಕಹಿಗುಣಗಳನ್ನ ಹೊಂದಿದ್ರು. ಮಧುಮೇಹಿಗಳಿಗೆ ಅತ್ಯುಪಯುಕ್ತವಾದ ಆರೋಗ್ಯವನ್ನ ನೀಡುತ್ತವೆ. ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನ ನಿಯಂತ್ರಿಸುತ್ತವೆ. ನಿತ್ಯ ಸೇವನೆ ಮಾಡುವುದರಿಂದ ಮಧುಮೇಹವನ್ನ ಹತೋಟಿಗೆ ತರಬಹುದಾಗಿದೆ.