ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಕೇಕೆ: ಮಹದೇವಪುರದಲ್ಲಿ ಅತಿ ಹೆಚ್ಚು ಸೋಂಕಿತರು ಪತ್ತೆ

ಬೆಂಗಳೂರು

ಬೆಂಗಳೂರುರಾಜಧಾನಿ ಬೆಂಗಳೂರಿನಲ್ಲಿ ಕಳೆದ ಒಂದು ವಾರದಲ್ಲಿ ಕೊರೋನಾ ಕೇಸ್​ ಏರಿಕೆಯಾಗಿದ್ದು, ಅತಿ ಹೆಚ್ಚು ಸೋಂಕಿತರು ಮಹದೇವಪುರದಲ್ಲಿ ಪತ್ತೆಯಾಗಿದ್ದಾರೆ. ಈ ಹಿನ್ನೆಲೆ ಸಿಲಿಕಾನ್ ಸಿಟಿಗೆ ಮತ್ತೆ ಕಂಟಕವಾಯ್ತಾ ಕೊರೋನ ಎನ್ನುವ ಭೀತಿ ಶುರುವಾಗಿದ್ದು, ಮಹದೇವಪುರ ವಲಯವೇ ಈ ಬಾರಿ ಡೇಂಜರ್​ ಆಗುತ್ತಾ..? ಎಂಬ  ಆತಂಕ ಮನೆ ಮಾಡಿದೆ. ಮಹದೇವಪುರದಲ್ಲಿ ನಿತ್ಯ 300-400 ಕೇಸ್​ ಪತ್ತೆಯಾಗುತ್ತಿದ್ದು, ಬೆಂಗಳೂರಿನ ಅರ್ಧದಷ್ಟು ಸೋಂಕಿತರು ಮಹದೇವಪುರದಲ್ಲಿ ಪತ್ತೆಯಾಗಿದೆ.

ಟೆಕ್ಕಿಗಳು ವರ್ಕ್ ಫ್ರಂ ಹೋಂ ಮುಗಿಸಿ ಇತ್ತೀಚೆಗಷ್ಟೇ ಆಫೀಸ್​ಗೆ ಹೋಗ್ತಿದ್ದರು. ಇದೀಗ ಮತ್ತೆ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಟೆಕ್ಕಿಗಳಿಂದಲೇ ಸಿಲಿಕಾನ್ ಸಿಟಿಗೆ ಅಪತ್ತು ಕಾದ್ದಿದ್ಯಾ..? ಎಂಬ ಶಂಕೆ ಶುರುವಾಗಿದೆ. ದಿನನಿತ್ಯ ಸಾವಿರಾರು ಟೆಕ್ಕಿಗಳು ದೇಶ, ವಿದೇಶಗಳಿಂದ ಬರುತ್ತಿದ್ದು, ಬಿಬಿಎಂಪಿ, ಆರೋಗ್ಯ ಇಲಾಖೆ ಅಧಿಕಾರಿಗಳು ಅವರ ಮೇಲೆ ನಿಗಾ ಇಟ್ಟಿದ್ದಾರೆ. ಕೊರೋನಾ ಟೆಸ್ಟ್​ ಹೆಚ್ಚಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

Leave a Reply

Your email address will not be published.