ಕಣ್ಣು ಮಿಟುಕಿಸೋದ್ರೊಳಗೆ ನಿಮ್ಮ ಖಾತೆಯ ಹಣ ಖಾಲಿ ಮಾಡುತ್ತೆ ಈ ವೈರಸ್‌..!

ತಂತ್ರಜ್ಞಾನ

ಸೈಬರ್ ವಲಯದಲ್ಲಿ ಹೊಸ ಮೊಬೈಲ್ ಬ್ಯಾಂಕಿಂಗ್ ವೈರಸ್ ಹಾನಿ ಮಾಡುವ ಸಂಗತಿ ಬೆಳಕಿಗೆ ಬಂದಿದೆ. ಮೊಬೈಲ್ ಬ್ಯಾಂಕಿಂಗ್ ಟ್ರೋಜನ್ ವೈರಸ್ .SOVA…ಆಂಡ್ರಾಯ್ಡ್ ಫೋನ್‌ಗಳ ಫೈಲ್‌ಗಳನ್ನು ಹಾನಿಗೊಳಿಸಬಹುದಾದ ransomware ಆಗಿದೆ. ಈ ವೈರಸ್ ಕಣ್ ಮಿಟಿಕಿಸೋದ್ರೊಳಗೆ ಖಾತೆಹ ಹಣ ಖಾಲಿ ಮಾಡಲಿದೆ. ಮೊಬೈಲ್‌ನಲ್ಲಿ, ಈ ವೈರಸ್ ಪತ್ತೆಯಾದರೆ ಅದನ್ನು ತೆಗೆದುಹಾಕುವುದು ತುಂಬಾ ಕಷ್ಟ ಎಂದು ದೇಶದ ಸೈಬರ್ ತಜ್ಞರು ಹೇಳಿದ್ದಾರೆ. ಜುಲೈನಲ್ಲಿ ಭಾರತೀಯ ಸೈಬರ್ ವಲಯದಲ್ಲಿ ಮೊದಲ ಬಾರಿಗೆ ಈ ವೈರಸ್‌ ಪತ್ತೆಯಾಗಿದೆ. ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ “ಇಂಡಿಯನ್, ಬ್ಯಾಂಕ್ ಗ್ರಾಹಕರನ್ನು ಹೊಸ ಸೋವಾ ಆಂಡ್ರಾಯ್ಡ್ ಟ್ರೋಜನ್ ಗುರಿಯಾಗಿಸಿಕೊಂಡಿದೆ ಎಂದು ಸಂಸ್ಥೆಗೆ ತಿಳಿಸಲಾಗಿದೆ.

ಮೊಬೈಲ್ ಬ್ಯಾಂಕಿಂಗ್ ಅನ್ನು ಗುರಿಯಾಗಿರಿಸಿಕೊಳ್ಳಲಾಗುತ್ತಿದೆ. ಈ ಮಾಲ್‌ವೇರ್‌ನ ಮೊದಲ ಆವೃತ್ತಿಯು ರಹಸ್ಯವಾಗಿ ಸೆಪ್ಟೆಂಬರ್ 2021 ರಲ್ಲಿ ಮಾರುಕಟ್ಟೆಗಳಲ್ಲಿ ಮಾರಾಟಕ್ಕೆ ಬಂದಿದೆ. ಇದು ಹೆಸರು ಮತ್ತು ಪಾಸ್‌ವರ್ಡ್, ಕುಕೀಗಳನ್ನು ಕದಿಯಲು ಮತ್ತು ಲಾಗ್ ಇನ್ ಮಾಡುವ ಮೂಲಕ ಅಪ್ಲಿಕೇಶನ್‌ನ ಮೇಲೆ ಪರಿಣಾಮ ಬೀರಲು ಸಮರ್ಥವಾಗಿದೆ ಎನ್ನಲಾಗಿದೆ. ಈ ಮಾಲ್‌ವೇರ್ ಮೊದಲು ಸ್ಪೇನ್‌. ರಷ್ಯಾ, ಅಮೆರಿಕ ದೇಶಗಳಲ್ಲಿ ಹೆಚ್ಚು ಸಕ್ರಿಯವಾಗಿತ್ತು, ಆದರೆ ಜುಲೈ 2022 ರಲ್ಲಿ ಇದು ಭಾರತ ಸೇರಿದಂತೆ ಇತರ ಹಲವು ದೇಶಗಳನ್ನು ಗುರಿಯಾಗಿಸಲು ಪ್ರಾರಂಭಿಸಿತು ಎಂದು ಹೇಳಿದರು.

ಇದರ ಪ್ರಕಾರ, ಈ ಮಾಲ್‌ವೇರ್‌ನ ಹೊಸ ಆವೃತ್ತಿಯು ಬಳಕೆದಾರರನ್ನು ಮೋಸಗೊಳಿಸಲು ನಕಲಿ ಆಂಡ್ರಾಯ್ಡ್ ಅಪ್ಲಿಕೇಶನ್‌ ಗಳೊಂದಿಗೆ ವೇಷ ಧರಿಸುತ್ತದೆ. ಅದರ ನಂತರ ಇದು Chrome, Amazon, NFT (ಕ್ರಿಪ್ಟೋ ಕರೆನ್ಸಿ ಲಿಂಕ್ಡ್ ಟೋಕನ್) ನಂತಹ ಜನಪ್ರಿಯ ಕಾನೂನುಬದ್ಧ ಅಪ್ಲಿಕೇಶನ್‌ಗಳ ‘ಲೋಗೋ’ ನೊಂದಿಗೆ ಕಾಣಿಸಿಕೊಳ್ಳುತ್ತದೆ. ಈ ಅಪ್ಲಿಕೇಶನ್‌ಗಳನ್ನು ಯಾವಾಗ ‘ಇನ್‌ಸ್ಟಾಲ್’ ಮಾಡಬೇಕೆಂದು ಜನರಿಗೆ ತಿಳಿಯದ ರೀತಿಯಲ್ಲಿ ಇದು ಸಂಭವಿಸುತ್ತದೆ ಎಂಬ ಅಂಶ ಬಯಲಾಗಿದೆ. ಸಿಇಆರ್‌ಟಿ-ಇನ್ ಸೈಬರ್ ದಾಳಿಯನ್ನು ಎದುರಿಸಲು ಕೇಂದ್ರ ತಂತ್ರಜ್ಞಾನ ಘಟಕವಾಗಿದೆ. ಇಂಟರ್ನೆಟ್ ವಲಯವನ್ನು ‘ಫಿಶಿಂಗ್’ ಮತ್ತು ‘ಹ್ಯಾಕಿಂಗ್’ ಮತ್ತು ಆನ್‌ಲೈನ್ ಮಾಲ್‌ವೇರ್ ವೈರಸ್ ದಾಳಿಗಳಿಂದ ರಕ್ಷಿಸುವುದು ಇದರ ಉದ್ದೇಶವಾಗಿದೆ.