Home Latest ಭಾರತ ಪಾಕಿಸ್ತಾನ ಫೈನಲ್ ಪಂದ್ಯದ ವೇಳೆ ಡ್ರೇಸ್ಸಿಂಗ್ ರೂಮ್ ಗೆ ಬಂದಿದ್ದ ಡಾನ್ ಯಾರು...

ಭಾರತ ಪಾಕಿಸ್ತಾನ ಫೈನಲ್ ಪಂದ್ಯದ ವೇಳೆ ಡ್ರೇಸ್ಸಿಂಗ್ ರೂಮ್ ಗೆ ಬಂದಿದ್ದ ಡಾನ್ ಯಾರು ? ಆತ ಕಪಿಲ್ ದೇವ್ ಗೆ ಹೇಳಿದ್ದೇನು ಗೊತ್ತಾ ?

581
0
SHARE

ಕ್ರಿಕೆಟ್ ಪಂದ್ಯಗಳು ಒಂಥರಾ ವಿಸ್ಮಯ. ಈ  ವಿಸ್ಮಯದಲ್ಲಿ ಇವತ್ತು ನಿಮಗೆ ಒಂದು ಇಂಟ್ರೆಸ್ಟಿಂಗ್ ಆದ ಸ್ಟೋರಿಯನ್ನು ಹೇಳ್ತೀನಿ

1986 ಅದು ಶಾರ್ಜಾದ “ವಿಲ್ಸ್ ಕಪ್” ಪಂದ್ಯಾವಳಿ ” ಆಸ್ಟ್ರೇ ಲೇಷಿಯಾ ”   ಕ್ರಿಕೆಟ್  ಸರಣಿ ಯುಎಇ ಶಾರ್ಜಾದಲ್ಲಿ ನಡೆಯುತ್ತಿತ್ತು. ಐದು ತಂಡಗಳು ಒಳಗೊಂಡಿದ್ದ ಈ ಸರಣಿಯಲ್ಲಿ ಕೊನೆಯದಾಗಿ ಭಾರತ ಮತ್ತು ಪಾಕಿಸ್ತಾನ ಫೈನಲ್ ಹಂತಕ್ಕೆ ಬಂದು ತಲುಪಿದ್ದವು .

1983ರಲ್ಲಿ ವಿಶ್ವ ಚಾಂಪಿಯನ್ ಆಗಿದ್ದ ಭಾರತ. ಎಂಬತ್ಮೂರರ ನಂತರ ಹಲವು ಪಂದ್ಯಗಳನ್ನು ಗೆದ್ದು ವಿಶ್ವದ ಭರವಸೆಯ ತಂಡಗಳಲ್ಲಿ ಒಂದಾಗಿತ್ತು .ಏಷ್ಯಾದ ಪ್ರಬಲ ಪೈಪೋಟಿ ದೇಶಗಳಾದ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯ ಅಂದ್ಮಲೇ ನಿಮಗೆಲ್ಲ ಗೊತ್ತಲ ಅದೊಂದು ರೋಚಕ ರೋಮಾಂಚನ ಪಂದ್ಯ.

ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ತಂಡ ಶಾರ್ಜಾ ಪ್ರವಾಸ ಮಾಡಿತ್ತು ವಿಲ್ಸ್ ಕಂಪನಿ  ಪ್ರಾಯೋಜಕತ್ವವನ್ನು ವಹಿಸಿತ್ತು. ಫೈನಲ್ ಪಂದ್ಯಕ್ಕಾಗಿ ಯುಎಇನ ಶಾರ್ಜಾ ಕ್ರೀಡಾಂಗಣ ಸಕಲ ರೀತಿಯಲ್ಲೂ ಸಜ್ಜುಗೊಂಡಿತ್ತು.ಭಾರತ ಹಾಗೂ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಈ ಎರಡು ದೇಶಗಳ ನಡುವಿನ ಪಂದ್ಯಕ್ಕಾಗಿ ಜಾತಕ ಪಕ್ಷಿಗಳಂತೆ ಕಾತುರದಿಂದ ಕಾಯುತ್ತಿದ್ದರು. ಶಾರ್ಜಾದ ಅಬ್ದುಲ್ ರೆಹ್ಮಾನ್ ಮುಖ ಕ್ರೀಡಾಂಗಣ ನಲವತ್ತು ಸಾವಿರ ಪ್ರೇಕ್ಷಕರಿಂದ ಅವತ್ತು ತುಂಬಿ ತುಳುಕುತ್ತಿದ್ದರೆ. ಡ್ರೆಸ್ಸಿಂಗ್ ರೂಮಿನಲ್ಲಿ ಕಪಿಲ್ ದೇವ್  ಪಂದ್ಯಕ್ಕಾಗಿ ಕೊನೆಯ ತಯಾರಿಯಲ್ಲಿದ್ದರು ಪಂದ್ಯ ಆರಂಭವಾಗಲು ಇನ್ನೂ ಒಂದು ಗಂಟೆ ಬಾಕಿ ಇರುವಾಗ  ಕಪಿಲ್ ದೇವ್ , ವೆಂಗ್ಸರ್ಕಾರ್ ಅವರೊಂದಿಗೆ  ಮಾತನಾಡುತ್ತಾ ಡ್ರೆಸ್ಸಿಂಗ್ ರೂಮಿನಲ್ಲಿದ್ದಾಗ ಸಡನ್ ಆಗಿ ಒಬ್ಬ ವ್ಯಕ್ತಿ ಡ್ರೆಸ್ಸಿಂಗ್ ರೂಮಿನೊಳಕ್ಕೆ ಬರುತ್ತಾನೆ .

ಬಂದ ಅಪರಿಚಿತ ವ್ಯಕ್ತಿ ಕಪಿಲ್ ದೇವರನ್ನ ಉದ್ದೇಶಿಸಿ ಇವತ್ತು ನೀವು ಪಂದ್ಯವನ್ನು ಗೆಲ್ಲಬೇಕು ಇಂದು ಪಂದ್ಯ ಗೆದ್ದರೆ ಭಾರತದ ಪ್ರತಿ ಆಟಗಾರನಿಗೂ ಕಾರ್ ಗಿಫ್ಟ್ ಕೊಡುತ್ತೇನೆ ಎಂದು ಹೇಳಿದ ಅದಕ್ಕೆ ಕಪಿಲ್ ದೇವ್ who are you..? “ಗೆಟ್ ಔಟ್ “ಎಂದು ಒಂದೇ ಸಮನೆ ಆ ವ್ಯಕ್ತಿಯನ್ನು ನೋಡುತ್ತಾ ಕಿರುಚಲು ಆರಂಭಿಸಿದರು ಕಪಿಲ್ ದೇವ್ ಅವರ ಕೆಂಡದಂತಹ ಕೋಪವನ್ನು ಕಂಡ ಆ ಅಪರಿಚಿತ ಡ್ರೆಸಿಂಗ್ ರೂಮಿನಿಂದ ಕಾಲ್ಕಿತ್ತ .ಇದನ್ನೆಲ್ಲ ಪಕ್ಕದಲ್ಲಿ ಕುಳಿತು ಗಮನಿಸಿದ್ದ ದಿಲೀಪ್ ವೆಂಗ್ಸರ್ಕರ್ ಈಗ ಬಂದಿದ್ದು ಯಾರು ಗೊತ್ತಾ ಎಂದು ಕಪಿಲ್ ರನ್ನು ಕೇಳಿದರು ? no i dont know.ಎಂದು ಕಪಿಲ್ ದಿಲೀಪ್ ವೆಂಗ್ಯರ್ಕರ್ ಆತ ಭಾರತದ ಮೋಸ್ಟ್ ವಾಂಟೆಡ್ ಡಾನ್ ದಾವೂದ್ ಇಬ್ರಾಹಿಂ ಅಂತ ಹೇಳಿದ್ರು .ಅದಕ್ಕೆ ಕಪಿಲ್ ದೇವ್ ಹೆಚ್ಚು ತಲೆ ಕೆಡಿಸಿಕೊಳ್ಳದೇ ಯಾರು ನನಗೆ ಗೊತ್ತಿಲ್ಲ ಅಂತ ತಲೆಯಾಡಿಸಿದರು ಇಷ್ಟಕ್ಕೂ ದಾವೂದ್ ಕಪಿಲ್ಗೆ ಗೊತ್ತೇ ಇರಲಿಲ್ಲ.

ದಿಲೀಪ್ ವೆಂಗ್ ಸರ್ಕರ್ ಮೂಲತಃ ಮುಂಬೈ ವಾಗಿದ್ದರಿಂದ ದಾವೂದ್ ಬಗ್ಗೆ ಗೊತ್ತಿತ್ತು ಆದ್ದರಿಂದ  ಕಪಿಲ್ಗೆ ಆದ ದಾವೂದ್ ಬಹಳ ಕೆಟ್ಟ ಮನುಷ್ಯ ನಿಮಗೆ ಏನಾದ್ರೂ ಮಾಡಿಬಿಟ್ರೆ ಎಂದರು. ಕಪಿಲ್ ಜನಗಳ ಪ್ರೀತಿ ಭಾರತದ ಅಭಿಮಾನಿಗಳ ಆಶೀರ್ವಾದ ಇದ್ದಾಗ ಇಂಥವರು ನಮಗೇನು ಮಾಡಲು ಸಾಧ್ಯವಿಲ್ಲ ಎಂದು ನಕ್ಕರು.

ಅವತ್ತಿನ ಫೈನಲ್ ಪಂದ್ಯದಲ್ಲಿ  ಟಾಸ್ ಗೆದ್ದ ಪಾಕಿಸ್ತಾನ ಭಾರತವನ್ನು ಮೊದಲು ಬ್ಯಾಟ್ ಮಾಡಲು ಆಹ್ವಾನಿಸಿದರು .ಮೊದಲು ಬ್ಯಾಟಿಂಗ್ ಮಾಡಿದ ಭಾರತ ಪಾಕಿಸ್ತಾನಕ್ಕೆ 246 ರನ್ ಗಳ ಗುರಿಯನ್ನು ನೀಡಿದರು.246ರನ್ಗಳ ಬೆನ್ನತ್ತಿದ ಪಾಕಿಸ್ತಾನ ಒಂದು ಹಂತದಲ್ಲಿ ಸೋಲುವ ಹಂತಕ್ಕೆ ಬಂದು ನಿಂತಿತ್ತು .ಕೊನೆಯ ಓವರ್ ನಲ್ಲಿ ಆರು ಬಾಲ್ಗೆ ಹನ್ನೊಂದು ರನ್ ಗಳಿಸಬೇಕಾಗಿತ್ತು ಗ್ರೀಸ್ ನಲ್ಲಿ ಜಾವಿದ್ ಮಿಯಾಂದಾದಾ  ಗಟ್ಟಿಯಾಗಿ ನಿಂತಿದ್ದರು

ನಾಯಕ ಕಪಿಲ್ ದೇವ್ ಚೇತನ್ ಶರ್ಮಾಗೆ ಕೊನೆಯ ಓವರ್ ಎಸೆಯಲು ಆಹ್ವಾನ ನೀಡಿದರು.

ಮೊದಲ ಬಾಲ್ನಲ್ಲೇ ವಾಸಿಂ ಅಕ್ರಂ ರನ್ ಔಟ್ ಆದರು .ಚಿಂತನ್ ಶರ್ಮನ ಎರಡನೇ ಬಾಲ್  ಎದುರಿಸಿದ ಮಿಯಾಂ ದಾದ   ಆಕರ್ಷಕ ನಾಲ್ಕು ರನ್ನನ್ನು ಬಾರಿಸಿದರು .ಮೂರನೇ ಬಾಲ್ ನಲ್ಲಿ ಜಾವೇದ್ ಮಿಯಾಂದಾದ್ ಒಂದು ರನ್ ಗಳಿಸಿದರು .ನಾಲ್ಕನೇ ಬಾಲಿನಲ್ಲಿ ಚೇತನ್ ಜಲ್ಕರ್ ನನ್ನ ಕ್ಲೀನ್  ಬೋಲ್ಡ್ ಮಾಡಿದರು . ಈಗ ಆಟ ರೋಚಕ ಹಂತಕ್ಕೆ ಬಂತು.

241ರನ್ ಗೆ ಪಾಕಿಸ್ತಾನದ ಒಂಬತ್ತು ನೇ ವಿಕೆಟ್ ಪತನ .ರೋಚಕ ಹಂತದಲ್ಲಿ ಪಂದ್ಯ ಇಡೀ ಮೈದಾನದಲ್ಲಿ ಎರಡು ದೇಶದ ಅಭಿಮಾನಿಗಳಲ್ಲಿ tens tens tens.

ಕ್ರೀಸ್ ನಲ್ಲಿ ತೌಫಿಕ್ ಅಹಮ್ಮದ್ ಮತ್ತು ನಾನ್ ಸ್ಟ್ರೈಕ್ ನಲ್ಲಿ ಜಾವೇದ್ ಮಿಯಾಂ ದಾದ್ .ಚೇತನ್ ಶರ್ಮಾ ಎಸೆದ ಐದನೇ ಎಸೆತವನ್ನು ಸಿಂಗಲ್ ರನ್ ತೆಗೆದುಕೊಳ್ಳುವಲ್ಲಿ ತೌಫಿಕ್ ಅಹ್ಮದ್ ಯಶಸ್ವಿಯಾದರೂ ಭಾರತಕ್ಕೆ ದೊರೆತಿದ್ದ ಅತ್ಯಮೂಲ್ಯವಾದ ತೌಫಿಕ್ ಅಹಮ್ಮದನನ್ನ ರನ್ ಔಟ್ ಮಾಡುವ ಅವಕಾಶವನ್ನು ಭಾರತ ಕಳೆದುಕೊಂಡಿತ್ತು .

ಈಗ ಪಾಕಿಸ್ತಾನದ ರನ್ 242….!ಉಳಿದಿರುವುದು ಒಂದೇ ಬಾಲು ಗೆಲ್ಲಲು ನಾಲ್ಕು ರನ್ ಬೇಕೇ ಬೇಕು. ಸ್ಟ್ರೈಕ್ ನಲ್ಲಿ ಜಾವಿದ್ ಮಿಯಾಂದಾದ್ .ಚೇತನ್ ಶರ್ಮಾ …..ಕೊನೆಯ ಬಾಲ್ …..ಹತ್ತಡಿ ದೂರದಿಂದ ವೇಗವಾಗಿ ಓಡಿ ಬಂದ ಚೇತನ್ ಶರ್ಮಾ ಬೌಲಿಂಗನ್ನು ಅಷ್ಟೇ ತೀವ್ರಗತಿಯಲ್ಲಿ ಮಾಡಿದ್ರು ಮಿಸ್ ಮಾಡಲಿಲ್ಲ ಮಿಯಾಂದಾದ್ …..!ಅಂಪೈರ್ ಬೌಂಡರಿಯ ಸಿಗ್ನಲ್ ಅನ್ನು ತೋರಿಸಿದರು. ಇಡೀ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ಜಯಾ ಘೋಷವನ್ನು  ತಡೆಯಲಾಗಲಿಲ್ಲ. ಜಾವೇದ್ ಮಿಯಾಂ ದಾದಾ  ಗ್ರೌಂಡಿನಲ್ಲಿ ಕೋತಿಯ ರೀತಿ ಕುಣಿದು ಕುಪ್ಪಳಿಸಿದ ದೃಶ್ಯ ಇವತ್ತಿಗೂ ಕೂಡ ಎಲ್ಲರ ಕಣ್ಣ ಮುಂದೆಯೇ ಇದೆ …

LEAVE A REPLY

Please enter your comment!
Please enter your name here