
BJPಗೆ ಟಕ್ಕರ್ ಕೊಡಲು ಹಿಂದೂಸ್ಥಾನ ಜನತಾ ಪಾರ್ಟಿ ಸಜ್ಜು: ನಾಳೆ ಹೊಸ ಪಕ್ಷಕ್ಕೆ ಚಾಲನೆ
ಬೆಂಗಳೂರು: ಬಿಜೆಪಿಗೆ ಟಕ್ಕರ್ ಕೊಡಲು ಹಿಂದೂಸ್ಥಾನ ಜನತಾ ಪಾರ್ಟಿ ಅಸ್ತಿತ್ವಕ್ಕೆ ತರಲು ಹಿಂದೂ ಕಾರ್ಯಕರ್ತರು ಮುಂದಾಗಿದ್ದಾರೆ. ವಿನಾಯಕ್ ಮಾಳದಕರ್ ಅಧ್ಯಕ್ಷತೆಯಲ್ಲಿ ನಾಳೆ ಹಿಂದೂಸ್ತಾನ್ ಜನತಾ ಪಾರ್ಟಿ ಅಸ್ತಿತ್ವಕ್ಕೆ ಬರಲಿದ್ದು, ಬೆಂಗಳೂರಿನ ರಾಜಾಜಿನ ಗರದಲ್ಲಿ ಶರಣ ಸೇವಾ ಸಮಾಜದಲ್ಲಿ ಮಠಾಧೀಶರೇ ಪಕ್ಷಕ್ಕೆ ಚಾಲನೆ ನೀಡಲಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ ಅಭ್ಯರ್ಥಿ ಕಣಕ್ಕಿಳಿಸಲು ಹಿಂದೂಸ್ತಾನ್ ಜನತಾ ಪಾರ್ಟಿ ಚಿಂತನೆ ನಡೆಸಿದೆ.
ಇನ್ನು ನಾಳೆ ಹೊಸ ಪಕ್ಷದ ಪ್ರಣಾಳಿಕೆಯೂ ಮಾಡುವ ಸಾಧ್ಯತೆಯಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಿಂದೂ ಭವನ ನಿರ್ಮಾಣ, 100ಯೂನಿಟ್ವರೆಗೆ ಉಚಿತ ವಿದ್ಯುತ್, ಮಹಿಳೆಯರಿಗೆ ಮಹಾನಗರ ಸಾರಿಗೆ ಉಚಿತ ಪ್ರಯಾಣ, ಎಲ್ಲಾ ವರ್ಗದ ಶಾಲೆ ಮಕ್ಕಳಿಗೆ ಉಚಿತ ಬಸ್ ಪಾಸ್,ಎಲ್ಲರಿಗೂ ವಿಶ್ವದರ್ಜೆಯ ಉಚಿತ ಶಿಕ್ಷಣ ಸೌಲಭ್ಯ, ಬೀದಿ ವ್ಯಾಪಾರಿಗಳಿಗೆ ಮನೆಕಟ್ಟಲು 5 ಲಕ್ಷ ಸಹಾಯಧನ ಸೇರಿದಂತೆ ಇತರ ಸೌಲಭ್ಯ ಜನರಿಗೆ ಒದಗಿಸಲು ಹಿಂದೂಸ್ತಾನ್ ಜನತಾ ಪಾರ್ಟಿ ಚಿಂತನೆ ನಡೆಸಿದೆ ಎನ್ನಲಾಗಿದೆ.