ಬೆಂಗಳೂರಿನಲ್ಲಿ ಪಕ್ಷ ಸಂಘಟನೆಯಿಂದ ಜನತಾ ಮಿತ್ರ ಪ್ರಾರಂಭ: ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪಕ್ಷ ಸಂಘಟನೆಯಿಂದ ಜನತಾ ಮಿತ್ರ ಪ್ರಾರಂಭವಾಗಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನ ಜೆಪಿ ಭವನದಲ್ಲಿ ಮಾತನಾಡಿದ ಅವರು, ಕಳೆದ ವಾರ ಸಭೆ ಮಾಡಿದ್ದೆ. ಇವತ್ತಿನಿಂದ ವಾರ್ಡ್ ವೈಸ್ ಮಾಡ್ತಾ ಇದ್ದೀನಿ. ಆಯಾಯ ಕ್ಷೇತ್ರಸ ಅಜೆಂಡಾ ಅದನ್ನು ಮನೆ ಮನೆಗೆ ತಲುಪಿಸೋದು. ರಾಜ್ಯದಲ್ಲಿ ಸರ್ಕಾರದ ಆಡಳಿತ ಹೇಗಿದೆ..? 2013 ರಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ಬಂತು. ನಂತರ ಕಾಂಗ್ರೆಸ್ ನವರೇ ಮಹಾನಗರ ಪಾಲಿಕೆಯಲ್ಲೂ ಇತ್ತು. ನಂತರ ಮೈತ್ರಿ ಸರ್ಕಾರ ಬಂತು. ಆ ಸಮಯದಿಂದ ಇಲ್ಲಿಯವರೆಗೆ ನಗರದ ಪರಿಸ್ಥಿತಿ ಹೇಗಿದೆ ಅನ್ನೋದನ್ನು ಜನರ ಮುಂದೆ ಇಡಬೇಕಿದೆ.

ಬೆಂಗಳೂರು ನಗರದಲ್ಲಿ ಅಕ್ರಮ ಲೂಟಿ ನಿಲ್ಲಿಸಲು ಜನತಾ ದಳಕ್ಕೆ ಅವಕಾಶ ಕೊಡಿ ಅಂತ ಕೇಳ್ತೀವಿ. ಇವತ್ತಿನಿಂದ 3 ಕ್ಷೇತ್ರದ ಸಭೆ ನಡೆಯಲಿದೆ. ಎರಡು ದಿನ ಪ್ರಧಾನ ಮಂತ್ರಿ ಬಂದಿದ್ದರು. ಪತ್ರಿಕೆಲಿ ನೋಡಿದೆ ಇವತ್ತು. ಪ್ರೊಗ್ರೆಸ್ ರಿಪೋರ್ಟ್ ಬಂದಿದೆ. 33 ಸಾವಿರದ ಬರಪೂರ ಕೊಡುಗೆ ಕೊಟ್ಟಿದ್ದಾರೆ ಅಂತ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಹೇಳ್ತೀನಿ ಈ ಬಗ್ಗೆ. ಬೆಂಗಳೂರು ಅವರಿಂದಲೇ ಬೆಳಕು ಕಾಣ್ತಾ ಇದೆ ಅನ್ನೋ ಹಾಗಿತ್ತು ಅವರ ಭಾಷಣ ಎಂದು ಎಚ್ ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ..

Leave a Reply

Your email address will not be published.