ಜೆಡಿಎಸ್ ವರಿಷ್ಟ ದೇವೇಗೌಡರನ್ನು ಭೇಟಿ ಮಾಡಿದ ಡಾ. ಚನ್ನಸಿದ್ಧರಾಮ ಸ್ವಾಮೀಜಿ

ಬೆಂಗಳೂರು

ಬೆಂಗಳೂರು: ಜೆಡಿಎಸ್ ವರಿಷ್ಟ ಎಚ್.ಡಿ. ದೇವೇಗೌಡ ಅವರನ್ನು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಮಹಾ ಸ್ವಾಮಿಗಳು ಇಂದು ಭೇಟಿ ಮಾಡಿದ್ದಾರೆ. ಪದ್ಮನಾಭ ನಗರದ ನಿವಾಸದಲ್ಲಿ ಭೇಟಿ ಮಾಡಿ ದೇವೇಗೌಡರ ಆರೋಗ್ಯ ವಿಚಾರಿಸಿ ದ್ದಾರೆ. ಹಿಂದೆ ಮಂಡಿ ಚಿಪ್ಪು ಸಮಸ್ಯೆಯಾಗಿತ್ತು. ಅದಕ್ಕೆ ಚಿಕಿತ್ಸೆ ಪಡೆದಾಗಿದೆ. ಈಗಲೂ ನಿಯಮಿತವಾಗಿ ಯೋಗಾಭ್ಯಾಸ ಮಾಡುತ್ತಾರೆ” ಎಂದು ದೇವೇಗೌಡರ ನಿಕಟವರ್ತಿಗಳು ಶ್ರೀಗಳಿಗೆ ತಿಳಿಸಿದರು.

ಈಗಲೂ ಮುಖದಲ್ಲಿರುವ ಕಾಂತಿ, ಉತ್ಸಾಹ, ಶಕ್ತಿ ಎಲ್ಲವನ್ನೂ ನೋಡಿದರೆ ಬೇಗ ಗುಣಮುಖರಾಗುತ್ತಾರೆ” ಎಂದು ಶ್ರೀಗಳು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ದೇವೇಗೌಡರು, ”ಯಾರನ್ನು ಅಂತ್ಯದಲ್ಲಿ ಹೇಗೆ ಕರೆಸಿಕೊಳ್ಳಬೇಕೆಂಬುದನ್ನು ಭಗವಂತ ನಿರ್ಧರಿಸುತ್ತಾನೆ” ಎಂದು ಹೇಳಿದರು. ”ಆದರೆ ಅದನ್ನು ಸ್ವೀಕರಿಸಲು ನಾವೆಲ್ಲ ಸಿದ್ಧರಿರಬೇಕು, ಖುಷಿಯಿಂದ ಸ್ವೀಕರಿಸಬೇಕು, ಅದೇ ಜೀವನದ ಸಾಧನೆ” ಎಂದು ಶ್ರೀಗಳು ಹೇಳಿದಾಗ, ”ನಾನು ಮಾನಸಿಕವಾಗಿ ಸಿದ್ಧನಿದ್ದೇನೆ” ಎಂದು ದೇವೇಗೌಡರು ಪ್ರತಿಕ್ರಿಯಿಸಿದರು.