ಕೋಮಾದಲ್ಲಿರುವ ಮಗನನ್ನು ರಕ್ಷಿಸುವಂತೆ ಜೀಸಸ್ ಮೊರೆ ಹೋದ ತಾಯಿ

ರಾಷ್ಟ್ರೀಯ

ಬೆಳಗಾವಿ: ಮೆದುಳು ಜ್ವರದಿಂದ ಕೋಮಾಗೆ ಜಾರಿರುವ ಮಗನನ್ನು ರಕ್ಷಿಸುವಂತೆ ಜಿಸಸ್ ಶಿಲುಬೆಯ ಮುಂದೆ ಮಗುವನ್ನಿರಿಸಿ ತಾಯಿ ಕಣ್ಣೀರು ಹಾಕುತ್ತಿರುವ ಮನಕಲಕುವ ಘಟನೆ ನಂದಡಗ ಹೊರವಲಯದಲ್ಲಿ ನಡೆದಿದೆ.

ಜೋಯಿಡಾ ತಾಲೂಕಿನ ಅಂಬರಡಾ ಗ್ರಾಮದ ಎಂಟು ವರ್ಷದ ಬಾಲಕ ಶೈಲೆಶ್ ಗೆ ಮೆದುಳು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರು ಮಗು ಬದುಕುಳಿಯುವದಿಲ್ಲ ಎಂದು ಹೇಳಿದ್ದು ಇದೀಗ ಮಗನನ್ನು ಬದುಕಿಸಿಕೊಡುವಂತೆ ತಾಯಿ ಜೀಸಸ್ ಮೊರೆ ಹೋಗಿದ್ದಾರೆ.

ಜಿಸಸ್ ಶಿಲುಬೆಯ ಮುಂದೆ ಕೋಮಾ ಸ್ಥಿತಿಯಲ್ಲಿಯೇ ಇರುವ ಮಗ ಶೈಲೆಶ್ ನನ್ನು ಮಲಗಿಸಿ ಮಗನನ್ನು ರಕ್ಷಿಸು ಎಂದು ಕಣ್ಣೀರಿಡುತ್ತಿದ್ದಾರೆ.

Leave a Reply

Your email address will not be published.