Home District ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ಔಷಧಿ ಕೊರತೆ ಇಲ್ಲ; ಸಚಿವೆ ಜೊಲ್ಲೆ ಸ್ಪಷ್ಠನೆ

ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ಔಷಧಿ ಕೊರತೆ ಇಲ್ಲ; ಸಚಿವೆ ಜೊಲ್ಲೆ ಸ್ಪಷ್ಠನೆ

ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ಔಷಧಿ ಕೊರತೆ ಇಲ್ಲ; ಸಚಿವೆ ಜೊಲ್ಲೆ ಸ್ಪಷ್ಠನೆ

199
0
SHARE

ವಿಜಯಪುರ: ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿಕೆ. ಜಿಲ್ಲಾಸ್ಪತ್ರೆಯಲ್ಲಿ ರೆಮಿಡಿಸಿವರ್ ಔಷಧಿ ಕೊರತೆ ಇಲ್ಲ.ಖಾಸಗಿ ಆಸ್ಪತ್ರೆಯಲ್ಲಿ ಅದರ ಬೇಡಿಕೆ ಇದೆ, ಕೆಲವೊಮ್ಮೆ ಬರುತ್ತದೆ, ಕೊರತೆ ಸಹಿತ ಇದೆ.ರೆಮಿಡಿಸಿವರ್ ಇದ್ದರೆ ನಮ್ಮ ಜೀವ ಬದುಕುತ್ತದೆ ಎಂಬುದು ಪೆಸೇಂಟ್ ಗಳು ತಲೆಯಿಂದ ತಗೆದು ಹಾಕಬೇಕು.ಡಾಕ್ಟರ್ ಅದನ್ನು ನಿರ್ಣಯ ಮಾಡುತ್ತಾರೆ.ಡಾಕ್ಟರ್ ಮಾರ್ಗದರ್ಶನದ ಅನ್ವಯ ರೆಮಿಡಿಸಿವರ್ ಕೊಡುವ ಕೆಲಸ ಮಾಡಲಾಗುತ್ತದೆ.ಜನರು ಗಾಭರಿಯಾಗಬಾರದು ಎಂದ ಸಚಿವೆ ಜೊಲ್ಲೆ.

ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ವಿಚಾರ.ನನಗೆ ನಿನ್ನೆಯಿಂದ ಬಹುತೇಕ ಕರೆಗಳು ಬರುತ್ತಿವೆ.ದಿನ ಬಳಕೆ ವಸ್ತುಗಳ ರೇಟ್ ಮಾರ್ಕೇಟ್ ನಲ್ಲಿ ಜಾಸ್ತಿ‌ ಮಾಡುತ್ತಿದ್ದಾರೆ ಎಂದು ಕರೆಗಳು ಬರುತ್ತಿವೆ.ಯಾರಾದರೂ ಹಾಗೆ ಮಾಡಿದರೆ ಅವರ ಮೇಲೆ ಕ್ರಮ ಕೈಗೊಳ್ಳುವದರ ಜೊತೆಗೆ ಲೈಸನ್ಸ ರದ್ದು ಮಾಡಬೇಕಾಗುತ್ತದೆ.ಇಂತಹ ಪರಿಸ್ಥಿತಿಯಲ್ಲಿ ಮಾನವೀಯತೆ ಆಧಾರದ ಮೇಲೆ ವ್ಯಾಪಾರಸ್ಥರು ಈ ರೀತಿ ಮಾಡಬಾರದು ಎಂದ ಸಚಿವೆ ಜೊಲ್ಲೆ.ಜಿಲ್ಲಾಡಳಿತದಲ್ಲಿ ಎನೇ ಕುಂದು ಕೊರತೆ ಇದ್ದರೂ ಅದನ್ನು ಪರಿಸೀಲಿಸಿ ಬಗೆ ಹರಿಸುವೆ.ಈ ವಾರ ಪೂರ್ತಿ ತಾಲೂಕು ಮಟ್ಟದಲ್ಲಿ ಹೋಗಿ ಅಲ್ಲಿನ ಸಮಸ್ಯೆಗಳ ಕುರಿತು ತಾಲೂಕು ಅಧಿಕಾರಿಗಳೊಂದಿಗೆ ಚರ್ಚಿಸುವೆ ಎಂದ ಸಚಿವೆ ಜೊಲ್ಲೆ.

ಜಿಲ್ಲೆಯಲ್ಲಿ‌ ಸರ್ಕಾರಿ ಹಾಗೂ ಖಾಸಗಿ ಅಂಬ್ಯೂಲೆನ್ಸ ಸಮಸ್ಯೆ ವಿಚಾರ.ಅಂಬ್ಯೂಲೆನ್ಸ ಸಮಸ್ಯೆ ಕುರಿತು ಕೂಡಾ ನನ್ನ ಗಮನಕ್ಕೆ ಬಂದಿದೆ.ಒಂದು ತಾಲೂಕಿನಿಂದ ಇನ್ನೊಂದು ತಾಲೂಕಿಗೆ ಬರುತ್ತಿಲ್ಲ ಎಂದು ದೂರುಗಳು ಬರುತ್ತಿವೆ. ಖಾಸಗಿ ಅವರು ಸಹಿತ ಹೆಚ್ಚಿನ ಬೆಲೆ ಕೇಳಿತ್ತಿದ್ದಾರೆ ಎಂಬ ದೂರುಗಳಿವೆ.ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಅಂತವರ ಮೇಲೆ ಕ್ರಮ ಜರುಗಿಸಬೇಕು.ಸರ್ಕಾರಿ ಅಧಿಕಾರಿಗಳು ಸಹಿತ ತಪ್ಪು ಮಾಡಿದರೆ ಅವರ ವಿರುದ್ದ ನಿರ್ದಾಕ್ಷ್ಯಣ್ಯ ಕ್ರಮ ಜರುಗಿಸಲಾಗುವದು ಎಂದ ಸಚಿವೆ ಜೊಲ್ಲೆ.

ಜಿಲ್ಲೆಯಲ್ಲಿ‌ ರೆಮಿಡಿಸಿವರ್ ಔಷಧಿ ಕಾಳ‌ ಸಂತೆಯಲ್ಲಿ ಮಾರಾಟ ವಿಚಾರ.ರೆಮಿಡಿಸಿವರ್ ಔಷದಿ ದುರುಪಯೋಗವನ್ನು ಕೆಲ ಆಸ್ಪತ್ರೆ ಸಿಬ್ಬಂದಿ ದುರುಪಯೋಗ ಪಡೆಸಿಕೊಳ್ಳುತ್ತಿದ್ದಾರೆ.ಈಗಾಗಲೇ ಜಿಲ್ಲೆಯಲ್ಲಿ ಪ್ರಕರಣವನ್ನು ಸಹಿತ ದಾಖಲಿಸಲಾಗಿದೆ.ಇಂತಹ ಪರಿಸ್ಥಿತಿಯಲ್ಲಿ‌ ದುರುಪಯೋಗ ಪಡೆಸಿಕೊಳ್ಳುವದು ಮಾನವೀಯತೆ ಅಲ್ಲ.ಯಾರೇ ತಪ್ಪು ಮಾಡಿದರೂ ನಿರ್ದಾಕ್ಷಿಣ್ಯವಾಗಿ ಕ್ರಮ‌ ಜರುಗಿಸಲಾಗುವದು.ಅಷ್ಟೇ ಅಲ್ಲದೇ ಅವರ ಮೇಲೆ ಕ್ರಿಮಿನಲ್ ಪ್ರಕರಣ ಸಹಿತ ದಾಖಲಿಸಲಾಗುವದು ಎಂದ ಸಚಿವೆ ಜೊಲ್ಲೆ.

ಇಂದು ಮೂರ್ನಾಲ್ಕು ತಾಲೂಕುಗಳಿಗೆ ಬೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದೇನೆ.ಇಂದು ಇಂಡಿ, ಸಿಂದಗಿ, ಆಲಮೇಲ ಹಾಗೂ ದೇವರ ಹಿಪ್ಪರಗಿ ತಾಲೂಕಿಗೆ ಬೇಟಿ ಕೊಡುವೆ.ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಪ್ರಕರಣ ಹೆಚ್ಚಾಗುತ್ತವೆ.ಈ ಬಾರಿ ಯುವಕರಲ್ಲಿ ಸಹಿತ ಹೆಚ್ಚಿಗೆ ಪಾಸಿಟಿವ್ ಪ್ರಕರಣ ಕಂಡು ಬರುತ್ತಿವೆ.ಎರಡನೇ ಅಲೆಯಲ್ಲಿ ಎರಡರಿಂದ ಮೂರು ದಿನದಲ್ಲಿ ಕೋವಿಡ್ ಪೀಡಿತರು ಸೀರಿಯಸ್ ಸ್ಟೇಜ್ ಗೆ ಹೋಗುತ್ತಿದ್ದಾರೆ.ಜಿಲ್ಲಾಡಳಿತ ಹಾಗೂ 32 ಖಾಸಗಿ ಆಸ್ಪತ್ರೆಗಳು ಕೋವಿಡ್ ಪೀಡಿತರಿಗೆ ಚಿಕಿತ್ಸೆ ನೀಡುತ್ತಿವೆ.ಈಗ ಆಕ್ಸಿಜನ್ ಕೊರತೆ ಹಾಗೂ ರೆಮಿಡಿಸಿವರ್ ಹೀಗೆ ಕೆಲ ಸಮಸ್ಯೆಗಳು ಈಗ ಕಂಡು ಬರುತ್ತಿವೆ.

ನಿನ್ನೆ ರಾತ್ರಿ ನಮಗೆ ಬೇಕಾಗಿರುವ 13 ಟನ್, ಎಲ್ ಎಮ್‌ ಸಿ ಆಕ್ಸಿಜನ್ ಕುಲಕರ್ಣಿ ಗ್ಯಾಸ್ ಎಜೆನ್ಸಿ ಬಳ್ಳಾರಿಯಿಂದ ಇಂದು ಪಡೆದುಕೊಳ್ಳುತ್ತೇವೆ.ಅದರ ಜೊತೆಗೆ ವಿವಿಧ ಕಡೆಯ ದಾನಿಗಳು ಇದ್ದರು ಹಾಗೂ ಕಡಿಮೆ ದರದಲ್ಲಿ ಆಕ್ಸಿಜನ್ ಕೊಟ್ಟರು ತರುವೆ ಯೋಚನೆ ಜಿಲ್ಲಾಡಳಿತಕ್ಕೆ ಇದೆ ಎಂದ ಸಚಿವೆ ಜೊಲ್ಲೆ.

LEAVE A REPLY

Please enter your comment!
Please enter your name here