ಕೆ.ಆರ್ ರಮೇಶ್ ಕುಮಾರ್ ಸತ್ಯವನ್ನೇ ಮಾತನಾಡಿದ್ದಾರೆ: ಸಿಎಂ ಬೊಮ್ಮಾಯಿ

ಬೆಂಗಳೂರು

ಬೆಂಗಳೂರು: ಸಾಮಾನ್ಯವಾಗಿ ಕೆ.ಆರ್‌.ರಮೇಶ್ ಕುಮಾರ್ ಅವರು ವಸ್ತುಸ್ಥಿತಿಯನ್ನು ಮಾತಾಡುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ಪಾಪ ಅವರು ಹಿರಿಯರು, ಅನುಭವಸ್ಥರು. ಅವರ ಬಗ್ಗೆ ಅಪಾರ ಗೌರವ ಇದೆ. ಸಾಮಾನ್ಯವಾಗಿ ವಸ್ತುಸ್ಥಿತಿಯನ್ನು ಮಾತಾಡುವ ಅವರು ಸತ್ಯವನ್ನೇ ಹೇಳಿದ್ದಾರೆ” ಎಂದು ಹೇಳಿದ್ದಾರೆ.

ಇನ್ನೂ ಗಾಂಧಿ ಕುಟುಂಬ ಅಧಿಕಾರದಲ್ಲಿದ್ದಾಗ ನಾಲ್ಕು ತಲೆಮಾರಿಗಾಗುವಷ್ಟು ಗಳಿಕೆ ಮಾಡಿಕೊಂಡ ನಾವು ಇಂದು ಸೋನಿಯಾ ಪರ ನಿಲ್ಲಬೇಕು ಎಂದು ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ನಿನ್ನೆ ನೀಡಿದ್ದ ಸ್ಫೋಟಕ ಹೇಳಿಕೆಯನ್ನು ಅಸ್ತ್ರವಾಗಿ ಬಳಸಿಕೊಂಡಿರುವ ಬಿಜೆಪಿ, ಎಲ್ಲಾ ಕಾಂಗ್ರೆಸ್ ನಾಯಕರನ್ನು ಇಡಿ ತನಿಖೆಗೆ ಒಳಪಡಿಸುವಂತೆ ಒತ್ತಾಯಿಸುತ್ತಿದೆ.

 

Leave a Reply

Your email address will not be published.