‘ಕಬ್ಜ’ ಸಿನಿಮಾ ಹಾಲಿವುಡ್ ಗುಣಮಟ್ಟದಲ್ಲಿ ತಯಾರಾಗಿದೆ: ನಿರ್ದೇಶಕ ಆರ್ ಚಂದ್ರು

ಚಲನಚಿತ್ರ

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕಬ್ಜ ಸಿನಿಮಾದ ಟೀಸರ್ ಬಿಡುಗಡೆಯಾದ ನಾಲ್ಕೇ ದಿನಕ್ಕೆ 26 ಮಿಲಿಯನ್ ವೀಕ್ಷಣೆ ಕಂಡಿದೆ. ಕಬ್ಜ ಗಡಿ ದಾಟಿ ಸುದ್ದು ಮಾಡುತ್ತಿದ್ದು ಟೀಸರ್ ಗೆ ಸಿಕ್ಕ ರೆಸ್ಪಾನ್ಸ್ ನೋಡಿ ಇಡೀ ಚಿತ್ರತಂಡ ಸಖತ್ ಖುಷಿಯಾಗಿದೆ.

ಒಳ್ಳೆಯ ವಿಷಯವು ನಮಗೆ ಉತ್ತಮ ಫಲಿತಾಂಶಗಳನ್ನು ತರಬಹುದು. ಕಬ್ಜ ಸಿನಿಮಾವನ್ನು ಪ್ಯಾನ್-ಇಂಡಿಯಾ ಪ್ರಾಜೆಕ್ಟ್ ಮಾಡುವ ನಮ್ಮ ಗುರಿಯು ಮೊದಲ ಟೀಸರ್‌ನಲ್ಲಿ ಯಶಸ್ವಿಯಾಗಿದೆ. ಎಲ್ಲಾ ಭಾಷೆಗಳಿಂದಲೂ ಜನರು ಟೀಸರ್ ವೀಕ್ಷಿಸಿದ್ದಾರೆ. ನಾವು ಶೀಘ್ರದಲ್ಲೇ 30 ಮಿಲಿಯನ್ ವೀಕ್ಷಣೆಗಳನ್ನು ತಲುಪುತ್ತೇವೆ” ಎಂದು ನಿರ್ದೇಶಕ ಆರ್.ಚಂದರು ಹೇಳಿದ್ದಾರೆ.

1500 ಕೋಟಿ ರು ಕಲೆಕ್ಷನ್ ಮಾಡಿರುವ ಕೆಜಿಎಫ್ ಜೊತೆ  ಕಬ್ಜ ಸಿನಿಮಾ ಹೋಲಿಕೆ ಮಾಡುತ್ತಿರುವುದು ಸಂತಸದ ವಿಷಯವಾಗಿದೆ. ಹಾಗಾಗಿ ಕಬ್ಜ ಚಿತ್ರದಲ್ಲೂ ಅಷ್ಟೇ ನಿರೀಕ್ಷೆ ಇದ್ದು ಕಬ್ಜ ಸಿನಿಮಾವನ್ನು ಹಾಲಿವುಡ್ ಗುಣಮಟ್ಟದಲ್ಲಿ ತಯಾರಿಸಲಾಗಿದೆ.ಚಿತ್ರವು ತನ್ನದೇ ಆದ ಹೆಗ್ಗುರುತು ಸೃಷ್ಟಿಸಲಿದ್ದು, ಜನರಲ್ಲಿ ಪ್ರತ್ಯೇಕ ಬ್ರಾಂಡ್ ಸೃಷ್ಟಿಸಲಿದೆ ಎಂದು ಚಂದ್ರ ತಿಳಿಸಿದ್ದಾರೆ.

ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಕಬ್ಜ ಒಂದು ಹಾಡಿನ ಚಿತ್ರೀಕರಣ ಬಾಕಿ ಉಳಿಸಿಕೊಂಡಿದೆ. ಕಬ್ಜ ಚಿತ್ರದಲ್ಲಿ ಸಾಕಷ್ಟು ವಿಎಫ್‌ಎಕ್ಸ್ ಕೆಲಸಗಳನ್ನು ಹೊಂದಿದ್ದು 7 ಭಾಷೆಗಳಲ್ಲಿ ಡಬ್ ಮಾಡಬೇಕಾಗಿದೆ. ಅವುಗಳು ಪೂರ್ಣಗೊಂಡ ಬಳಿಕ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ ಚಿತ್ರತಂಡ. ಸದ್ಯ ನಿರ್ದೇಶಕ ಚಂದ್ರು ರಿಯಲ್ ಸ್ಟಾರ್ ಉಪೇಂದ್ರ ಜೊತೆಗೆ ಮುಂದಿನ ಪ್ರಚಾರಕ್ಕಾಗಿ ದುಬೈಗೆ ಹೊರಟ್ಟಿದ್ದಾರೆ.