Home District ನಿಯಮ ಪಾಲನೆ ಮಾಡದವರ ಮೇಲೆ ಮುಲಾಜಿಲ್ಲದೇ ಶಿಸ್ತಿನ ಕ್ರಮ; ಪೊಲೀಸ್ ಆಯುಕ್ತ ಕಮಲ್ ಪಂಥ್

ನಿಯಮ ಪಾಲನೆ ಮಾಡದವರ ಮೇಲೆ ಮುಲಾಜಿಲ್ಲದೇ ಶಿಸ್ತಿನ ಕ್ರಮ; ಪೊಲೀಸ್ ಆಯುಕ್ತ ಕಮಲ್ ಪಂಥ್

297
0
SHARE

ಕೋವಿಡ್ ನಿಯಮ ಉಲ್ಲಂಘನೆ ಮಾಡಿದವರಿಗೆ ಪೊಲೀಸ್ ಆಯುಕ್ತ ಕಮಲ್ ಪಂತ್ ಶಿಸ್ತು ಕ್ರಮದ ಎಚ್ಚರಿಕೆ ನೀಡಿದ ಕೊಟ್ಟಿದ್ದಾರೆ. ಏಕೆಂದರೆ ಈಗ ಇಡೀ ದೇಶದಲ್ಲಿ ಕೊರೋನಾ ರುದ್ರತಾಂಡವ ಜೋರಾಗಿದೆ. ಅದನ್ನು ಹತ್ತಿಕ್ಕಲು ಸರ್ಕಾರ ಶಿಸ್ತು ಕ್ರಮಗಳನ್ನು ಕೈಗೊಂಡಿದೆ.

ಕಡ್ಡಾಯವಾಗಿ ಸಭೆ ಸಮಾರಂಭ ,ಪ್ರತಿಭಟನೆ ಮಾಡುವವರಿಗೆ ಪೊಲೀಸ್ ಕಮಿಷನರ್ ಕಮಲ್ ಪಂಥ್ ನೇರವಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಹೈಕೋರ್ಟ್ ತರಾಟೆ ತೆಗೆದುಕೊಂಡ ಬೆನ್ನಲ್ಲೇ ಪೊಲೀಸ್ ಕಮಿಷನರ್ ಫುಲ್ ಅಲರ್ಟ್ ಆಗಿದ್ದಾರೆ. ನಿನ್ನೆ ಹೈಕೋರ್ಟ್ ಕಮಿಷನರ್ ಗೆ ಕೋವಿಡ್ ನಿಯಮ ಪಾಲಿಸದ ರಾಜಕಾರಣಿಗಳು, ಚಿತ್ರ ನಟ-ನಟಿಯರ ವಿರುದ್ಧ ಕ್ರಮ ಕೈಳ್ಳುವಂತೆ ಆದೇಶ ನೀಡಿತ್ತು. ಈ ಸಂಬಂಧ ಕುರಿತು ಮಾತನಾಡಿದ ಪೊಲೀಸ್ ಕಮಿಷನರ್ ಕಮಲ್ ಪಂತ್, ಮಾಸ್ಕ್ ,ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕು. ರೂಲ್ಸ್ ಎಲ್ಲರು ಫಾಲೋ ಮಾಡಲೇ ಬೇಕು. ಯಾರಾದರೂ ನಮ್ಮ ನಿಯಮಗಳನ್ನು ಪಾಲನೆ ಮಾಡದಿದ್ದರೆ, ಮುಲಾಜಿಲ್ಲದೆ ಕೇಸ್ ಮಾಡ್ಬೇಕಾಗುತ್ತೆ ಮತ್ತು ಶಿಸ್ತಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ಕೊಟ್ಚಿದ್ದಾರೆ.

ಈಗ ಉಚ್ಚ ನ್ಯಾಯಾಲಯದ ಆದೇಶವನ್ನು ನಾವು ಎಲ್ಲರೂ ಪಾಲನೆ ಮಾಡಬೇಕಾಗುತ್ತದೆ. ಜನರೆಲ್ಲರೂ ಎಚ್ಚರಿಕೆ ವಹಿಸಬೇಕಿದೆ. ಜೊತೆಗೆ ಸಭೆ ಸಮಾರಂಭ ಪ್ರತಿಭಟನೆ ಮಾಡೋರು ಎಚ್ಚರಿಕೆಯಿಂದ ಕಾನೂನು ಪಾಲನೆ ಮಾಡಲೇಬೇಕಾಗುತ್ತದೆ. ಒಂದುವೇಳೆ ಎಚ್ಚರ ತಪ್ಪಿದ್ರೆ ಮುಲಾಜಿಲ್ಲದೆ ಕೇಸ್ ಮಾಡ್ತೀವಿ ಎಂದ ಪೊಲೀಸ್ ಕಮಿಷನರ್ ಎಲ್ಲರಿಗೂ ವಾರ್ನಿಂಗ್ ಕೊಟ್ಟಿದ್ದಾರೆ. ಕೋವಿಡ್ 19 ಹೆಚ್ಚಾಗಿದೆ… ಇದೆಲ್ಲವನ್ನು ನಾವು ಎದುರಿಸಬೇಕು. ನಾವು ಎಲ್ಲರೂ ಮುಂಜಾಗ್ರತೆ ತೆಗೆದುಕೊಳ್ಳಬೇಕು‌ ಎಂದು ಕಮಲ್ ಪಂತ್ ಮನವಿ ಮಾಡಿದ್ದಾರೆ. ನಮ್ಮ ಇಲಾಖೆ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದೆ. ನಮ್ಮ ಇಲಾಖೆಯಲ್ಲಿ ವಾಕ್ಸಿನೇಷನ್ ಆಗಿರೋದ್ರಿಂದ ನಮ್ಮಲ್ಲಿ ಸದ್ಯಕ್ಕೆ ಸಮಸ್ಯೆ ಇಲ್ಲ. ಸಮಯ ಸಮಯಕ್ಕೆ ಸರ್ಕಾರದಿಂದ‌ ಏನು ಆದೇಶ ಬರುತ್ತೋ ಅದನ್ನ ಜಾರಿ ಮಾಡ್ಬೇಕಾಗುತ್ತೆ ಎಂದು ಪೊಲೀಸ್ ಕಮಿಷನರ್ ಕಮಲ್ ಪಂತ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here