Home Home ಕನ್ನಡದ ಜನಪ್ರಿಯ ಪೋಷಕ ನಟಿ ಬಿ.ಜಯಾ ನಿಧನ….!

ಕನ್ನಡದ ಜನಪ್ರಿಯ ಪೋಷಕ ನಟಿ ಬಿ.ಜಯಾ ನಿಧನ….!

ಕನ್ನಡದ ಜನಪ್ರಿಯ ಪೋಷಕ ನಟಿ ಬಿ.ಜಯಾ ನಿಧನ….!

626
0
SHARE

ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟಿ ಬಿ.ಜಯಾ (75) ವಯೋಸಹಜ ಖಾಯಿಲೆಯಿಂದ ವಿಧಿವಶರಾಗಿದ್ದಾರೆ. ತಿಂಗಳ ಹಿಂದಷ್ಟೇ ಪಾರ್ಶ್ವ ತುತ್ತಾಗಿದ್ದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ ಬಿ.ಜಯಾ ಕೊನೆಯುಸಿರೆಳೆದಿದ್ದಾರೆ.

ಸುಮಾರು 6 ದಶಕಗಳಿಗೂ ಹೆಚ್ಚು ಕಾಲ ಬಿ.ಜಯಾ ಚಿತ್ರರಂಗದಲ್ಲಿ ಪೋಷಕ ನಟಿಯಾಗಿ ಗುರುತಿಸಿಕೊಂಡಿದ್ದರು. ಕೇವಲ ಪೋಷಕ ಪಾತ್ರವಲ್ಲ ಹಾಸ್ಯ ಪಾತ್ರಗಳ ಮೂಲಕ ಬಿ.ಜಯಾ ಸಿನಿ ಅಭಿಮಾನಿಗಳನ್ನು ರಂಜಿಸಿದ್ದರು. ಸಿನಿಮಾ ಜೊತೆಗೆ ರಂಗಭೂಮಿ, ಕಿರುತೆರೆಯಲ್ಲಿಯೂ ಬಿ.ಜಯಾ ಸಿನಿಪ್ರಿಯರಿಗೆ ಪರಿಚಿತರಾಗಿದ್ದರು.

ಜಯಾ 1958ರಲ್ಲಿ ಭಕ್ತ ಪ್ರಹ್ಲಾದ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ವರನಟ ಡಾ.ರಾಜ್ ಅವರೊಂದಿಗೆ ಅತಿ ಹೆಚ್ಚು ಪೋಷಕ ಪಾತ್ರಗಳಲ್ಲಿ ಜಯಾ ನಟಿಸಿದ್ದರು. ಡಾ.ರಾಜ್ ಮಾತ್ರವಲ್ಲ ಕಲ್ಯಾಣ್ ಕುಮಾರ್, ಉದಯ್ ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಸೇರಿದಂತೆ ಹಲವು ದಿಗ್ಗಜರೊಂದಿಗೆ ಸುಮಾರು 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಿ.ಜಯಾ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ಜಯಾ ಅಗಲಿಕೆ ಕನ್ನಡ ಚಿತ್ರರಂಗ ಮತ್ತು ಸಿನಿಪ್ರಿಯರು ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here